"ನಿಮ್ಮ ಸಂತಸದ ಕ್ಷಣದಲ್ಲಿ ನಾವು ಇರಲಿಲ್ಲ": ಆಲಿಯಾ-ರಣಬೀರ್‌ಗೆ ಶುಭಾಶಯ ತಿಳಿಸಿದ ಕಾಂಡೋಮ್ ಕಂಪನಿ

ಏಪ್ರಿಲ್ 14 ರಂದು ಆಲಿಯಾ ಮತ್ತು ರಣಬೀರ್ ಮದುವೆಯಾದ ನಂತರ ಫನ್ನಿ ಪೋಸ್ಟ್ ಒಂದನ್ನು ಕಾಂಡೋಮ್‌ ಕಂಪನಿ ಮಾಡಿತ್ತು. ಇದೀಗ ಮತ್ತೊಮ್ಮೆ ಆಲಿಯಾ ಗರ್ಭಿಣಿ ಆಗಿರುವ ವಿಚಾರಕ್ಕೆ ಶುಭಾಶಯ ತಿಳಿಸಿದ್ದು, ಈ ಪೋಸ್ಟ್‌ ಸಖತ್‌ ವೈರಲ್‌ ಆಗಿದೆ.

Written by - Chetana Devarmani | Last Updated : Jun 28, 2022, 10:59 AM IST
  • ತಾಯಿಯಾಗಲಿರುವ ಆಲಿಯಾ ಭಟ್‌
  • "ನಿಮ್ಮ ಸಂತಸದ ಕ್ಷಣದಲ್ಲಿ ನಾವು ಇರಲಿಲ್ಲ"
  • ಶುಭಾಶಯ ತಿಳಿಸಿದ ಕಾಂಡೋಮ್ ಕಂಪನಿ
"ನಿಮ್ಮ ಸಂತಸದ ಕ್ಷಣದಲ್ಲಿ ನಾವು ಇರಲಿಲ್ಲ": ಆಲಿಯಾ-ರಣಬೀರ್‌ಗೆ ಶುಭಾಶಯ ತಿಳಿಸಿದ ಕಾಂಡೋಮ್ ಕಂಪನಿ title=
ಆಲಿಯಾ ಮತ್ತು ರಣಬೀರ್

ಕಪೂರ್ ಕುಟುಂಬ ಹೊಸ ಸದಸ್ಯನನ್ನು ಸ್ವಾಗತಿಸಲು ಸಜ್ಜಾಗಿರುವ ವಿಚಾರ ನಿನ್ನೆಯಷ್ಟೇ ಎಲ್ಲರಿಗೂ ತಿಳಿದಿದೆ. ಆಕರ್ಷಕ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಆಲಿಯಾ ಭಟ್ ತಾವು ತಾಯಿಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದರು. 

ಇದನ್ನೂ ಓದಿ: "Our baby coming soon.." ತಾಯಿಯಾಗ್ತಿದ್ದಾರೆ ಆಲಿಯಾ ಭಟ್‌! ಫೋಟೋ ಮೂಲಕ ಸೀಕ್ರೇಟ್‌ ರಿವೀಲ್‌

ಪತಿ ರಣಬೀರ್ ಕಪೂರ್ ಜೊತೆ ವೈದ್ಯರ ತಪಾಸಣೆಯಲ್ಲಿರುವ ವೇಳೆ ತೆಗೆದ ಫೋಟೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಶುಭ ಸುದ್ದಿಯನ್ನು ನೀಡಿದ್ದರು. ಬಾಲಿವುಡ್‌ನ ಈ ಸ್ಟಾರ್‌ ಜೋಡಿಗೆ ನೆಟ್ಟಿಗರು ಕಾಮೆಂಟ್ಸ್ ಮೂಲಕ ಶುಭ ಹಾರೈಸಿದ್ದರು. ಆದರೆ ಈ ಎಲ್ಲದರ ನಡುವೆ ಕಾಂಡೋಮ್ ಕಂಪನಿಯೊಂದು ಮಾಡಿದ ಟ್ವೀಟ್‌ ಎಲ್ಲೆಡೆ ಸಖತ್‌ ವೈರಲ್‌ ಆಗುತ್ತಿದೆ. 

 

 

ಕಾಂಡೋಮ್‌ ತಯಾರಕ ಡ್ಯುರೆಕ್ಸ್ ತಮ್ಮ ವ್ಯಂಗ್ಯಾತ್ಮಕ ಪೋಸ್ಟ್‌ನ್ನು ಮಾಡಿದ್ದಾರೆ. Instagram ಮತ್ತು Twitter ನಲ್ಲಿ ಡ್ಯುರೆಕ್ಸ್ ಕಂಪನಿ, "ನಿಮ್ಮ ಖುಷಿಯ ಕ್ಷಣದಲ್ಲಿ ಖಂಡಿತವಾಗಿಯೂ ನಾವು ಇರಲಿಲ್ಲ" ಎಂದು ಫನ್ನಿ ಪೋಸ್ಟ್ ಮಾಡಿದೆ. ಈ ಪೋಸ್ಟ್‌ ಸದ್ಯ ಎಲ್ಲೆಡೆ ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: ʻತ್ರಿವಿಕ್ರಮʼನಿಗೆ ಕಿಚ್ಚನ ಸಾಥ್..‌ ಪ್ರೀತಿಯ ಸಹೋದರನಿಗೆ ಬೆಸ್ಟ್‌ ವಿಶಸ್‌ ತಿಳಿಸಿದ ಸುದೀಪ್‌

ಆಲಿಯಾ ಮತ್ತು ರಣಬೀರ್ ಮದುವೆಯಾದ ನಂತರ ಫನ್ನಿ ಪೋಸ್ಟ್ ಒಂದನ್ನು ಕಾಂಡೋಮ್‌ ಕಂಪನಿ ಮಾಡಿತ್ತು. ಬಾಂದ್ರಾ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್‌ನ ಈ ಕ್ಯೂಟ್‌ ಕಪಲ್‌ ಸಪ್ತಪದಿ ತುಳಿದರು. ಮದುವೆಯಾದ ಎರಡು ತಿಂಗಳ ನಂತರ ಆಲಿಯಾ ಪ್ರೆಗ್ನಂಟ್‌ ಆಗಿದ್ದು, ಈ ಸಂತೋಷದ ಸುದ್ದಿಯನ್ನು ಬಲು ವಿಶೇಷವಾಗಿ ಶೇರ್‌ ಮಾಡಿಕೊಂಡಿದ್ದಾರೆ. ರಣಬೀರ್ ಮತ್ತು ಆಲಿಯಾ ಈ ವರ್ಷ ಏಪ್ರಿಲ್ 14 ರಂದು ವಿವಾಹವಾದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News