ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಬೃಹತ್ ಡ್ರಗ್ಸ್ ಮಾಫಿಯಾ ( Drugs Mafia)ದಲ್ಲಿ ಭಾಗಿಯಾಗಿದ್ದಾರೆಂಬ ಹಿನ್ನೆಲೆಯಲ್ಲಿ ಚಿತ್ರನಟಿ ರಾಗಿಣಿ ದ್ವಿವೇದಿ (Ragini Dwivedi), ಅವರ ಗೆಳೆಯ ರವಿಶಂಕರ್ ಮತ್ತು ಪಾರ್ಟಿಗಳ ಆಯೋಜನ ವಿರೇನ್ ಖನ್ನಾ ಅವರ ಪೊಲೀಸ್ ಕಸ್ಟಡಿ ಮುಗಿಯಲಿದೆ. ಮುಂದೇನು ಎನ್ನುವ ಕುತೂಹಲ ಕೂಡ ಹುಟ್ಟಿಕೊಂಡಿದೆ.
ಪ್ರಕರಣದ ತನಿಖೆ ನಡೆಸುತ್ತಿರು ಸಿಟಿ ಕ್ರೈಂ ಬ್ರಾಂಚ್ (CCB) ಪೊಲೀಸರು ಈಗಾಗಲೇ ಈ ಮೂವರನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ವಿಚಾರಣೆ ವೇಳೆ ಪ್ರಮುಖ ಆರೋಪಿ ರಾಗಿಣಿ ಅವರಿಂದ ಅಷ್ಟೇನೂ ಪೂರಕ ಮಾಹಿತಿಗಳು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ. ಅನಾರೋಗ್ಯದ ನೆಪ ಹೇಳಿ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.
ನಾನು ಮತ್ತು ರಾಗಿಣಿ ಲೀವಿಂಗ್ ಟುಗೆದರ್ ನಲ್ಲಿದ್ದೇವೆ: ರವಿಶಂಕರ್
ಈ ಮೂವರನ್ನು ವಶಕ್ಕೆ ಪಡೆದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದ ವೇಳೆ ಸಿಟಿ ಕ್ರೈಂ ಬ್ರಾಂಚ್ (CCB) ಪೊಲೀಸರು ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿದ್ದರು. ಆದರೆ ನ್ಯಾಯಾಧೀಶರು ಮೂರು ದಿನಗಳವರೆಗೆ ಮಾತ್ರ ಕಸ್ಟಡಿಗೆ ನೀಡಿದ್ದರು. ಈ ಹಿನ್ನಲೆಯಲ್ಲಿ ಇಂದು ಸಂಜೆ ಮತ್ತೆ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಇನ್ನಷ್ಟು ಕಾಲ ಪೊಲೀಸ್ ಕಸ್ಟಡಿಗೆ ಕೊಡಿ ಎಂದು ಮನವಿ ಮಾಡಲಾಗುತ್ತೆ. ನ್ಯಾಯಾಧೀಶರು ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಿಸುವರೋ ಅಥವಾ ಬಿಡುಗಡೆ ಮಾಡುವರೋ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ.
ರಾಗಿಣಿ ದ್ವಿವೇದಿಯ ಗೆಳೆಯ ರವಿಶಂಕರ್ ವಿಚಾರಣೆ ವೇಳೆ 'ತಾನು ಮತ್ತು ರಾಗಿಣಿ ದ್ವಿವೇದಿ ಲೀವಿಂಗ್ ಟುಗೆದರ್ ಶಿಪ್ ನಲ್ಲಿದ್ದೇವೆ. ರಾಗಿಣಿಗಾಗಿ ತಾನು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇನೆ. ಕೆಲವೊಮ್ಮೆ ಒಂದೇ ದಿನ 1ಲಕ್ಷ ರೂಪಾಯಿ ಖರ್ಚು ಮಾಡ್ತಿದ್ದೇನೆ' ಎಂದು ಹೇಳಿರುವುದಾಗಿ ತಿಳಿಸಿದ್ದರು. ರವಿಶಂಕರ್ ಬೆಂಗಳೂರಿನ ಜಯನಗರದ ಆರ್ ಟಿಓ (RTO) ಕಚೇರಿಯ ಸಿಬ್ಬಂದಿಯಾಗಿದ್ದಾರೆ. ಹಾಗಾಗಿ ಅವರಿಗೆ ಬರುವ ಸಂಬಳದಲ್ಲಿ ರಾಗಿಣಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಹೇಗೆ ಸಾಧ್ಯ? ಇವರಿಬ್ಬರು ಇಷ್ಟೊಂದು ಐಶಾರಾಮಿ ಜೀವನ ನಡೆಸಲು ಸಾಧ್ಯ ಆಗುತ್ತಿದ್ದುದು ಹೇಗೆ ಎಂಬ ಪ್ರಶ್ನೆ ಸಿಸಿಬಿ ಅಧಿಕಾರಿಗಳನ್ನು ಕಾಡುತ್ತಿದೆ.
ಡ್ರಗ್ಸ್ ಧಂಧೆ ಹಿನ್ನಲೆಯಲ್ಲಿ ಚಿತ್ರನಟಿ ರಾಗಿಣಿ ಮನೆ ಮೇಲೆ ಪೊಲೀಸ್ ದಾಳಿ
ಅಲ್ಲದೆ ರಾಗಿಣ ಕೆಲ ರಾಜಕೀಯ ನಾಯಕರು ಮತ್ತವರ ಮಕ್ಕಳ ಜೊತೆ ಕೂಡ ಪಾರ್ಟಿ ಮಾಡಿದ್ದಾರೆ. ಅವರಿಗೂ ಡ್ರಗ್ಸ್ ಕೊಡಿಸಿದ್ದಾರೆ. ಡ್ರಗ್ಸ್ ಸರಬರಾಜು ವ್ಯವಹಾರದಲ್ಲಿ ತೊಡಗಿಕೊಂಡಿದ್ದರಿಂದಲೇ ಅವರ ಮನೆಯಲ್ಲಿ ಡ್ರಗ್ಸ್ ಪತ್ತೆಯಾಗಿದೆ ಎಂಬ ಅನುಮಾನಗಳು ಕೂಡ ಇವೆ. ಅವರೊಂದಿಗೆ ಸಂಪರ್ಕದಲ್ಲಿ ಇರುವ ರಾಜಕಾರಣಿಗಳು ಯಾರು? ರಾಜಕಾರಣಿಗಳ ಮಕ್ಕಳು ಯಾರು ಎಂಬುದನ್ನು ಬಾಯಿ ಬಿಡಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಕಸ್ಟಡಿ ಅವಧಿ ಹೆಚ್ಚಿಸಲು ಮನವಿ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ರಾಗಿಣಿ ದ್ವಿವೇದಿ (Ragini Dwivedi) ಮತ್ತು ರವಿಶಂಕರ್ ತಪ್ಪದೆ ವೀಕ್ಲಿ ಒನ್ ಪಾರ್ಟಿಗೆ ಹಾಜರಾಗುತ್ತಿದ್ದರು. ಆಗ ಇವರು ತಪ್ಪದೆ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಆರೋಪಿ ಲೂಮ್ ಪೆಪ್ಪರ್ ನಿಂದ ರವಿಶಂಕರ್ ಡ್ರಗ್ಸ್ ಪಡೆಯುತ್ತಿದ್ದರು. ರಾಗಿಣಿ ಮತ್ತವರ ಸ್ನೇಹಿತರ ಯಾವುದೇ ಪಾರ್ಟಿ ಇದ್ದರೂ ರವಿಶಂಕರ್ ಎಕ್ಸ್ಟೆಸಿ ಮಾತ್ರೆಗಳನ್ನು ಸಪ್ಲೈ ಮಾಡ್ತಿದ್ದರು. ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಿದ ಬಳಿಕ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದರು. ಇಂಥ ಪಾರ್ಟಿಗಳು ಹೆಚ್ಚಾಗಿ ರೆಸಾರ್ಟ್ ಗಳಲ್ಲಿ ಆಯೋಜನೆ ಆಗುತ್ತಿದ್ದವು. ರಾಗಿಣಿ, ರವಿಶಂಕರ್ ನಿಂದ ಡ್ರಗ್ಸ್ ಪಡೆದು ತಮ್ಮ ಸ್ನೇಹಿತರಿಗೆ ತಲುಪಿಸ್ತಿದ್ದರು ಎಂಬ ಮಾಹಿತಿಗಳು ಸದ್ಯದ ವರೆಗೆ ತಿಳಿದುಬಂದಿವೆ ಎಂದು ಗೊತ್ತಾಗಿದೆ.
ಡ್ರಗ್ಸ್ ಸೇವನೆ, ಸರಬರಾಜು ಆರೋಪ ಖಚಿತವಾಗಿರುವುದರಿಂದ ರಾಗಿಣಿ ಮತ್ತವರ ಸ್ನೇಹಿತರಿಗೆ ಮುಂದೇನಾಗಬಹುದು ಎಂಬ ಭಯ ಸೃಷ್ಟಿಯಾಗಿದೆ.