ಡಾ.ಪುನೀತ್ ರಾಜಕುಮಾರ್ ರ 'ಗಂಧದ ಗುಡಿ' ಅಕ್ಟೋಬರ್ 28ಕ್ಕೆ ಬಿಡುಗಡೆ

ಕರ್ನಾಟಕ ರತ್ನ ಡಾ.ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಸಾಕ್ಷ್ಯಚಿತ್ರ ‘ಗಂಧದಗುಡಿ’ ಯಾವಾಗ ರಿಲೀಸ್ ಆಗಬಹುದು ಎಂದು ಅಭಿಮಾನಿಗಳು ಕಾದುಕುಳಿತಿದ್ದರು. ಇದೀಗ ಪ್ರೀತಿಯ ಕರ್ನಾಟಕದ ಮನೆಮಗ ಅಪ್ಪು ಅವರನ್ನು ಮತ್ತೊಮ್ಮೆ ತೆರೆಮೇಲೆ ಕಣ್ತುಂಬಿಕೊಳ್ಳಲು ಕಾಲ ಕೂಡಿ ಬಂದಿದೆ. 

Written by - K Karthik Rao | Edited by - Manjunath N | Last Updated : Jul 15, 2022, 08:37 PM IST
  • ಹೌದು, ಇದೇ 'ಅಕ್ಟೋಬರ್ 28' ರಂದು ಚಿತ್ರ ಮಂದಿರಗಳಲ್ಲಿ ಅಪ್ಪುರವರ 'ಗಂಧದಗುಡಿ' ಬೆಳ್ಳಿ ತೆರೆಯಲ್ಲಿ ರಾರಾಜಿಸಲಿದೆ.
ಡಾ.ಪುನೀತ್ ರಾಜಕುಮಾರ್ ರ 'ಗಂಧದ ಗುಡಿ' ಅಕ್ಟೋಬರ್ 28ಕ್ಕೆ ಬಿಡುಗಡೆ title=

ಬೆಂಗಳೂರು: ಕರ್ನಾಟಕ ರತ್ನ ಡಾ.ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಸಾಕ್ಷ್ಯಚಿತ್ರ ‘ಗಂಧದಗುಡಿ’ ಯಾವಾಗ ರಿಲೀಸ್ ಆಗಬಹುದು ಎಂದು ಅಭಿಮಾನಿಗಳು ಕಾದುಕುಳಿತಿದ್ದರು. ಇದೀಗ ಪ್ರೀತಿಯ ಕರ್ನಾಟಕದ ಮನೆಮಗ ಅಪ್ಪು ಅವರನ್ನು ಮತ್ತೊಮ್ಮೆ ತೆರೆಮೇಲೆ ಕಣ್ತುಂಬಿಕೊಳ್ಳಲು ಕಾಲ ಕೂಡಿ ಬಂದಿದೆ. 

ಹೌದು, ಇದೇ 'ಅಕ್ಟೋಬರ್ 28' ರಂದು ಚಿತ್ರ ಮಂದಿರಗಳಲ್ಲಿ ಅಪ್ಪುರವರ 'ಗಂಧದಗುಡಿ' ಬೆಳ್ಳಿ ತೆರೆಯಲ್ಲಿ ರಾರಾಜಿಸಲಿದೆ. 

ಪುನೀತ್​ ರಾಜ್​ಕುಮಾರ್​ ಅವರ ಡ್ರೀಮ್ ಪ್ರಾಜೆಕ್ಟ್ ‘ಗಂಧದ ಗುಡಿ’ ಟೀಸರ್ ನಿಂದಲೇ ಪಕೃತಿ ಸೌಂದರ್ಯವನ್ನು ಬೆರಗು ಮೂಡಿಸುವಂತಹ ಅನುಭವ ನೀಡಿತ್ತು.ಅಶ್ವಿನಿ ಪುನೀತ್ ರಾಜ್ ಕುಮಾರ್ ರವರೇ ಈ ಸಾಕ್ಷ್ಯ ಚಿತ್ರದ ನಿರ್ಮಾಪಕರಾಗಿದ್ದಾರೆ.'ಅಪ್ಪು ಅವರ ಕೊನೆಯ ಚಿತ್ರ ಇದಾಗಿದ್ದು ,ಅವರು ಅವರಾಗಿಯೆ ಕಾಣಿಸಿಕೊಂಡಿರುವ ಒಂದು ವಿಶಿಷ್ಟ ಪಯಣವಾಗಿದೆ, ಒಬ್ಬ ನಿಜವಾದ ಹೀರೋನ ಸಾಹಸ ಕಥನ.' ಎಂದು ಬರೆದುಕೊಂಡು 'ಗಂಧದ ಗುಡಿ' ಸಾಕ್ಷ್ಯಚಿತ್ರದ ಬಿಡುಗಡೆ ದಿನಾಂಕವನ್ನು ಪಿ ಆರ್ ಕೆ ಸಂಸ್ಥೆ ಘೋಷಿಸಿದೆ. ಈ ವಿಶೇಷ ದಿನಕ್ಕಾಗಿ ‘ಅಪ್ಪು’ ಅಭಿಮಾನಿಗಳು ಹಲವಾರು ತಿಂಗಳಿಂದ ಕಾತುರದಿಂದ ಕಾಯುತ್ತಿದ್ದರು.ಈಗ ಚಿತ್ರ ಬಿಡುಗಡೆಯ ದಿನಾಂಕ ಕೊನೆಗೂ ಘೋಷಣೆಯಾಗಿದ್ದರಿಂದ ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ಹಾಗೂ ವನ್ಯ ಜೀವಿ ಸಂರಕ್ಷಣೆಯ ಕುರಿತಾದ ಅಪ್ಪು ಅವರ ಕಾಳಜಿಯನ್ನು ಈಗ  ಕಣ್ತುಂಬಿಕೊಳ್ಳಲು ಪ್ರತಿಯೊಬ್ಬರೂ ಕಾತುರರಾಗಿದ್ದಾರೆ.

ಬಹುದೊಡ್ಡ ಕನಸಿನೊಂದಿಗೆ ಕರುನಾಡಿನ ಕಾಡು-ಮೇಡು ಅಲೆದು ಅದ್ಭುತ ‘ಗಂಧದ ಗುಡಿ’ಯನ್ನು ಪುನೀತ್ ರವರು ರೂಪಿಸಿದ್ದಾರೆ.​ಈ ವೈಲ್ಡ್ ಲೈಫ್ ಜಗತ್ತಿನ ಕಥೆಯ ಈ ಡಾಕ್ಯುಮೆಂಟ್​ ಚಿತ್ರವನ್ನು ಖ್ಯಾತ ವೈಲ್ಡ್ ಲೈಫ್ ಛಾಯಾಗ್ರಾಹಕ ಅಮೋಘ ವರ್ಷ ನಿರ್ದೇಶಿಸಿದ್ದಾರೆ.'ಅಕ್ಟೋಬರ್ 28' ರಂದು ಗಂಧದಗುಡಿ ಸಾಕ್ಷ್ಯ ಚಿತ್ರವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳಲ್ಲದೆ ಇಡೀ ಭಾರತೀಯ ಚಿತ್ರರಂಗವೆ ಕಾಯ್ದು ಕುಳಿತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News