ಸ್ಯಾಂಡಲ್ವುಡ್ನಲ್ಲಿ ಒಳ್ಳೊಳ್ಳೆ ಸ್ಟೋರಿಗಳನ್ನ ಹೊತ್ತ ಸಿನಿಮಾಗಳು ರಿಲೀಸ್ ಆಗುತ್ತಲೇ ಇವೆ.ಆಲ್ಮೋಸ್ಟ್ ಇತ್ತೀಚಿಗೆ ತೆರೆ ಕಾಣುತ್ತಿರೋ ಸಿನಿಮಾಗಲ್ಲಿ ಒಳ್ಳೆ ಸಂದೇಶ ಮತ್ತು ಪಕ್ಕಾ ಮನರಂಜನೆ ಇದ್ದೇ ಇರುತ್ತೆ. ಇದೀಗ ವಿಭಿನ್ನ ಟೈಟಲ್ ಹೊಂದಿರೋ ಮತ್ತೊಂದು ಸಿನಿಮಾ ಇದೇ ತಿಂಗಳ 17ಕ್ಕೆ ರಿಲೀಸ್ ಆಗುತ್ತಿದೆ.
ಕೆ.ಎಂ.ರಘು ನಿರ್ದೇಶನದ "ತರ್ಲೆ ವಿಲೇಜ್" ಎಂಬ ಗ್ರಾಮೀಣ ಸೊಗಡಿನ ಸಿನಿಮಾ ಗಾಂಧಿನಗರದ ಬಾಕ್ಸ್ ಆಫೀಸ್ ನಲ್ಲಿ ಲಾಭ ಪಡೆಯುವುದರ ಮೂಲಕ ಎಲ್ಲರ ಗಮನ ಸೆಳೆದಿತ್ತು.
ಆ ನಂತರ ವಿಭಿನ್ನ ಕಥೆಯ "ಪರಸಂಗ" ಚಿತ್ರವನ್ನು ರಘು ನಿರ್ದೇಶನ ಮಾಡಿದ್ದರು. ಈಗ ಕೆ.ಎಂ.ರಘು, "ತಿಥಿ" ಸಿನಿಮಾದ ರೀತಿ ಸಂಪೂರ್ಣ ಗ್ರಾಮೀಣ ಪ್ರತಿಭೆಗಳನ್ನಿಟ್ಟುಕೊಂಡು "ದೊಡ್ಡಹಟ್ಟಿ ಬೋರೇಗೌಡ" ಎಂಬ ಚಿತ್ರ ನಿರ್ದೇಶಿಸಿದ್ದಾರೆ.ಈ ಚಿತ್ರ ಬಿಡುಗಡೆಗೂ ಪೂರ್ವದಲ್ಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಪಡೆದುಕೊಂಡಿದೆ.
ಇದನ್ನೂ ಓದಿ-ದುನಿಯಾ ವಿಜಯ್ ಮುಂದಿನ ಪ್ರಾಜೆಕ್ಟ್ ಗೇ ಹೀರೋಯಿನ್ ಫಿಕ್ಸ್..!
ಸನ್ಮಾನ್ಯ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದ್ದರು. ಬಹು ನಿರೀಕ್ಷಿತ ಈ ಚಿತ್ರ ಫೆಬ್ರವರಿ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಾಜರಾಜೇಶ್ವರಿ ಕಂಬೈನ್ಸ್ ಲಾಂಛನದಲ್ಲಿ ಬಿ.ಸಿ.ಶಶಿಕುಮಾರ್ ಹಾಗೂ ಕೆ.ಎಂ.ಲೋಕೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.ಶಿವಣ್ಣ ಬೀರಹುಂಡಿ, ಗೀತಾ, ಲಾವಣ್ಯ, ಕಲಾರತಿ ಮಹದೇವ್, ಕಾತ್ಯಾಯಿನಿ, ಯೋಗೇಶ್ ಮುಂತಾದ ಗ್ರಾಮೀಣ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ.ವೀನಸ್ ನಾಗರಾಜ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.
ಇದನ್ನೂ ಓದಿ-ನನ್ನ ಮೂಗಿನ ಹಾಗೇ ಮಗಳ ಮೂಗು ಕೂಡ ಇದೆ ಅಂದ್ರು ಧ್ರುವ ಸರ್ಜಾ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.