Director Guruprasad death : ಸ್ಯಾಂಡಲವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ ಇನ್ನಿಲ್ಲ, ಇಂದು ಬೆಳಗ್ಗೆ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ನ್ಯೂ ಹೆವೆನ್ ಅಪಾರ್ಟ್ಮೆಂಟ್‌ನ ತಮ್ಮ ಪ್ಲ್ಯಾಟ್‌ನಲ್ಲಿ ಸೂಸೈಡ್ ಮಾಡ್ಕೊಂಡಿದಾರೆ.. ಮಠ, ಎದ್ದೇಳು ಮಂಜುನಾಥ, ಎರಡನೇ ಸಲ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ್ದ ನಿರ್ದೇಶಕನ ಅಗಲಿಕೆ ಸ್ಯಾಂಡಲ್‌ವುಡ್‌ಗೆ ಶಾಕ್ ನೀಡಿದೆ..
ಹೌದು.. 10 ಕ್ಕೂ ಹೆಚ್ಚು ಸಿನಿಮಾ ಗಳಲ್ಲಿ ನಟನಾಗಿ ಕೂಡ ಕೆಲಸ ಮಾಡಿರೋ ಗುರುಪ್ರಸಾದ್ ಹೆಚ್ಚಾಗಿ ನಿರ್ದೇಶನದಿಂದ ಚಂದನವನದಲ್ಲಿ ಗುರುತಿಸಿಕೊಂಡಿದ್ದರು. ತಮ್ಮದೇ ಆದ ವಿಭಿನ್ನ ಶೈಲಿಯ ಸಿನಿಮಾಗಳಿಂದ ಕನ್ನಡ ಸಿನಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಇತ್ತೀಚಿಗೆ 2ನೇ ಮದುವೆಯಾಗಿದ್ದ ಗುರುಪ್ರಸಾದ್ ಅವರಿಗೆ 3 ವರ್ಷದ ಮಗುವಿತ್ತು.. ಇಂತಹ ಪರಿಸ್ಥಿತಿಯಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ, ಆಗಾಗ ತಮ್ಮ ಸಾವಿನ ಬಗ್ಗೆ ನಟ ಜಗ್ಗೇಶ್ ಬಳಿ ಹೇಳಿಕೊಳ್ಳುತ್ತಿದ್ದರಂತೆ..
ಇದನ್ನೂ ಓದಿ:ಮದುವೆಯಾಗಿ ಮಕ್ಕಳಿದ್ದರೂ ಆ ಸ್ಟಾರ್ ಹೀರೋ ನನಗೆ ಬೇಕು ಎಂದು ರಾದ್ಧಾಂತ ಮಾಡಿದ್ದ ಕನ್ನಡದ ಖ್ಯಾತ ನಟಿ ಈಕೆ!
ರಾಮನಗರ ಜಿಲ್ಲೆ ಕನಕ ಪುರದಲ್ಲಿ ಜನಿಸಿದ ಗುರುಪ್ರಸಾದ್, ಹೆತ್ತ ತಾಯಿಗೆ ಹೊಲಸು ಮಾತುಗಳಿಂದ ನಿಂದಿಸುತ್ತಿದ್ದರಂತೆ.. ಇದರಿಂದಾಗಿ ಇವರ ಬಗ್ಗೆ ಎಲ್ಲರಿಗೂ ಬೇಸರ ವಿತ್ತು. ಅಲ್ಲದೆ, ನಾನು ಮಾಡಿದ್ದೆ ಸರಿ ಅನ್ನೋದು ಗುರುಪ್ರಸಾದ್ ವಾದವಾಗಿತ್ತು. ಯಾರ ಮಾತನ್ನೂ ಕೇಳುತ್ತಿರಲಿಲ್ಲವಂತೆ..
ವಿಪರ್ಯಾಸ ಅಂದ್ರೆ, ನೆನ್ನೆಯಷ್ಟೇ ಗುರುಪ್ರಸಾದ್ (1972 ನವೆಂಬರ್ 2 ) ಹುಟ್ಟುಹಬ್ಬವಿತ್ತು. ಆದರೆ ಕಳೆದ 5- 6 ದಿನಗಳಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲವಂತೆ. ಮಾಹಿತಿ ಪ್ರಕಾರ 5 6 ದಿನಗಳ ಹಿಂದೆಯೇ ಸಾವಿಗೆ ಶರಣಾಗಿರೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಎರಡು ಮದುವೆ, ಅನಾರೋಗ್ಯ : ಡೈರೆಕ್ಟರ್ ಗುರುಪ್ರಸಾದ್ ಅವರು ಎರಡು ಮದುವೆಯಾಗಿದ್ದಾರೆ. ಮೊದಲ ಪತ್ನಿಗೆ ಒಬ್ಬಳು ಹೆಣ್ಣುಮಗಳು ಹಾಗೂ ಎರಡನೇ ಪತ್ನಿಗೂ ಮೂರು ವರ್ಷದ ಹೆಣ್ಣು ಮಗುವಿದೆ. ಇದರ ನಡುವೆ ನಿರ್ದೇಶಕ ಬಿಪಿ, ಕೈ ನಡುಗುವುದು ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಅಂತ ಹೇಳಲಾಗುತ್ತಿದೆ..
ಮಧ್ಯದಲ್ಲಿ ವಿಷ ಬೆರೆಸಿ ಆತ್ಮಹತ್ಯೆ : ಇನ್ನು ನಿರ್ದೇಶಕ ಗುರುಪ್ರಸಾದ್ ಮದ್ಯದಲ್ಲಿ ವಿಷಬೆರೆಸಿಕೊಂಡು ಸೇವಿಸಿ ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ. ಮೃತದೇಹ ಡಿ ಕಂಪೋಸ್ಡ್ ಆಗಿರೋ ಹಿನ್ನಲೆ ಮೂರು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿರೋ ಅನುಮಾನವನ್ನು ಪೊಲೀಸರು ವ್ಯಕ್ತಪಸಿದ್ದಾರೆ. ಅಲ್ಲದೆ, ಕುಟುಂಬಸ್ಥರು ಬಂದು ಮೃತದೇಹದ ಗುರುತು ಪತ್ತೆಹಚ್ಚಿದ ನಂತರ ಮೃತದೇಹ ಶವಾಗಾರಕ್ಕೆ ಶಿಫ್ಟ್ ಮಾಡಲಾಗುತ್ತದೆ..
ಕೋಟಿ ಕೋಟಿ ಸಾಲ : ಸಿನಿಮಾ ನಿರ್ಮಾಣಕ್ಕಾಗಿ ಗುರುಪ್ರಸಾದ್ ಮೂರು ಕೋಟಿಯಷ್ಟು ಸಾಲ ಮಾಡಿದ್ದರು ಎಂದು ತಿಳಿದು ಬಂದಿದೆ. 2016 ರಲ್ಲಿ ಶ್ರೀನಿವಾಸ್ ಎಂಬುವವರಿಂದ 30 ಲಕ್ಷ ಸಾಲ, 2018 ರಲ್ಲಿ ಬ್ಯಾಂಕ್ ನಿಂದ 40 ಲಕ್ಷ ಸಾಲ, ಕ್ರೌಡ್ ಫಂಡಿಂಗ್ ಶೇರ್‌ನಲ್ಲಿ ಒಂದು ಕೋಟಿ 16 ಲಕ್ಷ ಸಾಲ ಮಾಡಿದ್ದರು. ಗುರುಪ್ರಸಾದ್ ನೀಡಿದ್ದ ಹಲವು ಚೆಕ್ ಬೌನ್ಸ್ ಆಗಿದ್ದ ಹಿನ್ನೆಲೆ, ಶ್ರೀನಿವಾಸ್ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಬೆಂಗಳೂರಿನ 26ನೇ ಸಿಸಿಹೆಚ್ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು. ಗುರುಪ್ರಸಾದ್ ವಿರುದ್ದದ ಚೆಕ್ ಬೌನ್ಸ್ ಪ್ರಕರಣ ಕೋರ್ಟ್ ನಲ್ಲಿ ಅಂತಿಮ ಹಂತಕ್ಕೆ ಬಂದಿತ್ತು
ಇದನ್ನೂ ಓದಿ:ʻನಿಲ್ಲಬೇಡʼ ಹಾಡಿನ ಮೂಲಕ ಬಂದರು ಉತ್ತರ ಕರ್ನಾಟಕದ ಪ್ರತಿಭೆ ಸುನಿಧಿ ನೀಲೊಪಂತ್
ಒಂದು ವರ್ಷದಲ್ಲಿ ಮೂರು ಮನೆ ಚೇಂಜ್ : ಸಾಲಗಾರರ ಕಾಟಕ್ಕೆ ಗುರುಪ್ರಸಾದ್ ಪದೇ ಪದೇ ಮನೆ ಚೇಂಜ್ ಮಾಡುತ್ತಿದ್ದರು. ಇವರ ವಿರುದ್ದ ಹಲವರು ಪೊಲೀಸರಿಗೂ ದೂರು ಸಹ ನೀಡಿದ್ದರು. ಸಾಲ ಕೊಟ್ಟವರು ಮನೆ ಬಳಿ ಬರ್ತಾರೆಂದು ಮನೆ ಖಾಲಿ ಮಾಡುತ್ತಿದ್ದರು.
ಡೈರೆಕ್ಟರ್‌ನಿಂದ ಹೀರೋ : ಗುರುಪ್ರಸಾದ್ ನಿರ್ದೇಶಕ ಮಾತ್ರ ಅಲ್ಲ ಸಿನಿಮಾ ಹೀರೋ ಕೂಡ ಹೌದು... ಎದ್ದೇಳು ಮಂಜುನಾಥ್ -2 ಸಿನಿಮಾಗೆ ನಿರ್ದೇಶಕ ಗುರುಪ್ರಸಾದ್ ಹೀರೋ ಆಗಿ ಅಭಿನಯಿಸಿದ್ದರು. ಜಗ್ಗೇಶ್ ನಟನೆಯ ಎದ್ದೇಳು ಮಂಜುನಾಥ ಸೂಪರ್ ಹಿಟ್ ಆದ ನಂತರ ಪಾರ್ಟ್-2 ಸಿನಿಮಾಗೆ ಸ್ವತಃ ತಾವೇ ಹೀರೋ ಆಗಿದ್ದೇ ಅವರಿಗೆ ಮುಳುವಾಯ್ತಾ...? ಎಂಬ ಪ್ರಶ್ನೆ ಮೂಡುತ್ತಿದೆ.. ಏಕೆಂದರೆ, ಎದ್ದೇಳು ಮಂಜುನಾಥ್ ಭಾಗ 2ಕ್ಕೆ ಕೋಟಿ ಕೋಟಿ ಸಾಲ ಮಾಡಿದ್ದರು. ಆದರೆ, ಚಿತ್ರೀಕರಣ ಮುಕ್ತಾಯವಾಗಿ ಎರಡು ವರ್ಷಗಳಾದರೂ ಚಿತ್ರ ಬಿಡುಗಡೆಯಾಗಿಲ್ಲ.
ಎರಡು ಮದುವೆಯಾದ್ರೂ ಒಬ್ಬಂಟಿ : ಎರಡೆರಡು ಮದುವೆಯಾಗಿದ್ರು ಒಬ್ಬಂಟಿಯಾಗಿಯೇ ಗುರುಪ್ರಸಾದ್ ವಾಸವಿದ್ದರು. ಮೊದಲ ಪತ್ನಿ ಜೊತೆ ವಿವಾಹ ವಿಚ್ಚೇಧನ ಬಳಿಕ ಕಳೆದ ಮಾರ್ಚ್ ನಲ್ಲಿ ಎರಡನೇ ಮದುವೆಯಾಗಿದ್ದರು. ಇತ್ತೀಚೆಗೆ ಎರಡನೇ ಪತ್ನಿಯೊಂದಿಗೂ ದೂರವಿದ್ದರು. ಕಳೆದ ಎರಡು ಮೂರು ತಿಂಗಳಿನಿಂದ ಗುರುಪ್ರಸಾದ್ ಎರಡನೇ ಪತ್ನಿ ಮಗುವಿನೊಂದಿಗೆ ತವರು ಮನೆ ಸೇರಿದ್ದರು. ಹಾಗಾಗಿ ಅಪಾರ್ಟ್ಮೆಂಟ್‌ನಲ್ಲಿ ಒಬ್ಬಂಟಿಯಾಗಿ ವಾಸವಿದ್ದರು.
ಇದನ್ನೂ ಓದಿ:ಡಿವೋರ್ಸ್ ಪಡೆಯಲು ಮುಂದಾಗಿದ್ದ ಕಿಚ್ಚ ಸುದೀಪ್-ಪ್ರಿಯಾ... ಮತ್ತೆ ಒಂದಾಗಿದ್ದು ʼಈʼ ಖ್ಯಾತ ವ್ಯಕ್ತಿಯಿಂದ!
ಪ್ರಕರಣದ ವಿವರ : ಬೆ. ಗ್ರಾಮಾಂತರ ಎಸ್.ಪಿ ಸಿ.ಕೆ ಬಾಬ ಅವರು ಗುರುಪ್ರಸಾದ್ ಸಾವಿನ ಕುರಿತು ಮಾಹಿತಿ ನೀಡಿದ್ದು, ನಿರ್ದೇಶಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಫೈನಾನ್ಸಿಯಲಿ ಸಾಕಷ್ಟು ತೊಂದರೆ ಅನುಭವಿಸ್ತಿದ್ರು ಅಂತಾ ಗೊತ್ತಾಗಿದೆ. ಅಕ್ಕ ಪಕ್ಕದವರ ಗಮನಕ್ಕೆ ಬಂದಾಗ ಮಾಹಿತಿ ನೀಡಿದ್ದಾರೆ. BNS 194ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮ ತಂಡಗಳು ಇಂಡೆಪ್ತ್ ಆಗಿ ಪರಿಶೀಲನೆ ನಡೆಸ್ತಿವೆ. ನಿರ್ದೇಶಕರ ಸಾವಿಗೆ ಅಸಲಿ ಕಾರಣ ಏನು..? ಅನ್ನೋದು ತನಿಖೆ ಮಾಡಬೇಕು.
ಕುಟುಂಬಸ್ಥರ ಜೊತೆ ತನಿಖಾಧಿಕಾರಿ ಮಾತಾಡ್ತಾರೆ. ಆದರೆ ಸದ್ಯ ಅವರು ನೋವಲ್ಲಿದ್ದು, ಪ್ರಶ್ನೆ ಮಾಡೋದು ಸರಿಯಲ್ಲ. ಇನ್ನು ನಿರ್ದೇಶಕರು ಐದಾರು ದಿನಗಳ ಮುಂಚೆ ಈ ಅಪಾರ್ಟ್ ಮೆಂಟ್‌ಗೆ ಬಂದಿದ್ದರು. ಆಗಾಗ ಹೋಗೋದು ಬರೋದು ಮಾಡುತ್ತಿದ್ದರು. ಸದ್ಯ ಹೆಚ್ಚಿನ ತನಿಖೆ ನಡೀತಿದೆ ಎಂದು ಬೆ.ಗ್ರಾಮಾಂತರ ಎಸ್‌ಪಿ ಸಿ.ಕೆ ಬಾಬು ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ