ʼದೇವರʼ ಬಗ್ಗೆ ಕ್ರೇಜಿ ಅಪ್ಡೇಟ್...! ಜೂನಿಯರ್ ಎನ್‌ಟಿಆರ್ ಜೊತೆ ಮತ್ತೊಬ್ಬ ಸ್ಟಾರ್ ಹೀರೋಯಿನ್..?

Devara Movie Updates: RRR ನಂತರ, ಜೂನಿಯರ್ ಎನ್‌ಟಿಆರ್ ಅವರ ಮುಂದಿನ ಚಿತ್ರ ದೇವರ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಕೊರಟಾಲ ಶಿವ ನಿರ್ದೇಶಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಮತ್ತೊಂದು ಸಿನಿಮಾ ಇದಾಗಿದೆ. ಆದರೆ ಈಗ ಈ ಚಿತ್ರದ ಮತ್ತೊಂದು ಕ್ರೇಜಿ ಅಪ್ಡೇಟ್ ಬಂದಿದೆ.  

Written by - Savita M B | Last Updated : Oct 24, 2023, 11:27 AM IST
  • ಎನ್‌ಟಿಆರ್‌ ನಾಯಕನಾಗಿ ನಟಿಸುತ್ತಿರುವ ದೇವರ ಸಿನಿಮಾ
  • ಈ ಚಿತ್ರ ಎರಡು ಭಾಗಗಳಲ್ಲಿ ತಯಾರಾಗಲಿದೆ
  • ಲೇಟೆಸ್ಟ್ ಟಾಕ್ ಪ್ರಕಾರ 'ದೇವರ' ಚಿತ್ರದಲ್ಲಿ ಇಬ್ಬರು ನಾಯಕಿಯರು ಇರುತ್ತಾರೆ.
ʼದೇವರʼ ಬಗ್ಗೆ ಕ್ರೇಜಿ ಅಪ್ಡೇಟ್...! ಜೂನಿಯರ್ ಎನ್‌ಟಿಆರ್ ಜೊತೆ ಮತ್ತೊಬ್ಬ ಸ್ಟಾರ್ ಹೀರೋಯಿನ್..? title=

JR NTR New Movie: ಎನ್‌ಟಿಆರ್‌ ನಾಯಕನಾಗಿ ನಟಿಸುತ್ತಿರುವ ಈ ದೇವರ ಸಿನಿಮಾದ ಕಥೆ ಹೆಚ್ಚಿರುವ ಕಾರಣ ಈ ಚಿತ್ರ ಎರಡು ಭಾಗಗಳಲ್ಲಿ ತಯಾರಾಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. 'ದೇವರ' ಸಿನಿಮಾ ಎನ್‌ಟಿಆರ್‌ ವೃತ್ತಿಜೀವನದಲ್ಲಿ ಎರಡು ಭಾಗಗಳಲ್ಲಿ ಬರುತ್ತಿರುವ ಮೊದಲ ಚಿತ್ರವಾಗಲಿದೆ.

‘ದೇವರ’ ಸಿನಿಮಾ ಎನ್‌ಟಿಆರ್‌ ವೃತ್ತಿ ಬದುಕಿನ 30ನೇ ಸಿನಿಮಾ. ಸದ್ಯ ಚಿತ್ರೀಕರಣ ಶರವೇಗದಲ್ಲಿ ಸಾಗುತ್ತಿದೆ. ಚಿತ್ರ ಶುರುವಾಗಲು ಬಹಳ ಸಮಯ ತೆಗೆದುಕೊಂಡರೂ ಈಗ ವೇಗದಲ್ಲಿ ಮುಗಿಯುತ್ತಿದ್ದು, ಅರ್ಧಕ್ಕಿಂತ ಹೆಚ್ಚು ಮುಗಿದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ-ಅಂದು ಸುಹಾಸಿನಿಗೂ ಎದುರಾಗಿತ್ತು ಈ ಸಮಸ್ಯೆ.. ನಾಯಕನ ತೊಡೆ ಮೇಲೆ ಕೂರಲು ಹೇಳಿದ್ರಂತೆ ಡೈರೆಕ್ಟರ್‌!

 ಸದ್ಯ ದಸರಾ ಪ್ರಯುಕ್ತ ದೇವರ ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಹೊಸ ಪೋಸ್ಟರ್ ನಲ್ಲೂ ಕೈಯಲ್ಲಿದ್ದ ಆಯುಧವನ್ನೇ ಕೇಂದ್ರೀಕರಿಸಿ ಅದಕ್ಕೆ ಸಂಬಂಧಿಸಿದ ಪೋಸ್ಟರ್ ನ್ನು ರಿಲೀಸ್‌ ಮಾಡಿದ್ದಾರೆ. ಈ ಪೋಸ್ಟರ್ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸುವಂತಿದೆ.

ಈಗಾಗಲೇ ದೇವರ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಲೇಟೆಸ್ಟ್ ಟಾಕ್ ಪ್ರಕಾರ 'ದೇವರ' ಚಿತ್ರದಲ್ಲಿ ಇಬ್ಬರು ನಾಯಕಿಯರು ಇರುತ್ತಾರೆ. ‘ದೇವರ 1’ ಸಿನಿಮಾದಲ್ಲಿ ಕೇವಲ ಎರಡು ದೃಶ್ಯಗಳಿಗೆ ಸೀಮಿತವಾಗಿದ್ದ ಈ ಪಾತ್ರ ‘ದೇವರ 2’ ಸಿನಿಮಾದಲ್ಲಿ ಬಹುಮುಖ್ಯವಾಗಿದೆಯಂತೆ. ಈ ಪಾತ್ರದಲ್ಲಿ ಮತ್ತೊಬ್ಬ ಸ್ಟಾರ್ ಹೀರೋಯಿನ್ ನಟಿಸಿದರೆ ಚೆನ್ನ ಎನ್ನುವುದು ನಿರ್ಮಾಪಕರ ಅಭಿಪ್ರಾಯವಾಗಿದೆ.

ಇದನ್ನೂ ಓದಿ-ಬಿಗ್‌ ಬಾಸ್‌ ಮನೆಯಲ್ಲಿ ಶುರುವಾಗೇ ಬಿಡ್ತು ಪ್ರೇಮ ಕಹಾನಿ.. ನಾವಿಬ್ರೂ ಇನ್ಮುಂದೆ ಅಧಿಕೃತವಾಗಿ ಪ್ರೇಮಿಗಳು ಎಂದ ಸ್ಪರ್ಧಿಗಳು!

ಇನ್ನು ಈ ಚಿತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅನಿರುದ್ಧ್ ರವಿ ಚಂದರ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಮುಂದಿನ ವರ್ಷ ಏಪ್ರಿಲ್ 5 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ನವೆಂಬರ್ ಅಂತ್ಯದೊಳಗೆ ಈ ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಮುಗಿಸುವ ಗುರಿಯನ್ನು ಕೊರಟಾಲ ಮತ್ತು ತಂಡ ಹಾಕಿಕೊಂಡಿದೆ. ಇದಕ್ಕಾಗಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಇದೀಗ ಸಿನಿಮಾದ ಲೇಟೆಸ್ಟ್ ಅಪ್‌ಡೇಟ್‌ ಹೊರಬಿದ್ದಿದೆ. ಸದ್ಯ, ನಿರ್ಮಾಪಕರು ಎನ್‌ಟಿಆರ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News