ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ರಹಸ್ಯ ವಿವಾಹದ ನಂತರ, ಬಾಲಿವುಡ್ ನ ಅತಿ ಪ್ರಿಯ ಜೋಡಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ಶೀಘ್ರದಲ್ಲಿಯೇ ವಿವಾಹದ ಹಾದಿ ತುಳಿಯಲಿದ್ದಾರೆ !
ತನ್ನ ಗೆಳೆಯ ರಣವೀರ್ ಸಿಂಗ್ ಜೊತೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ದೀಪಿಕಾ ಹೊಸ ವರ್ಷದಲ್ಲಿ ಶ್ರೀಲಂಕಾಕ್ಕೆ ರಹಸ್ಯವಾಗಿ ತೆರಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಅದರಂತೆ ರಣವೀರ್ ದೀಪಿಕಾ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಳ್ಳುವ ವರದಿಗಳು ನಿಜವೇ ಆಗಿದ್ದಾರೆ, ಕಳೆದ 5 ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಈ ಜೋಡಿಯ ನಿಶ್ಚಿತಾರ್ಥವೂ ಅಂದೇ ನೆರವೇರಲಿದ್ದು, ಇಬ್ಬರೂ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ರಣವೀರ್ ಹಾಗೂ ದೀಪಿಕಾ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಈಗಾಗಲೇ ರಣವೀರ್ ದೀಪಿಕಾ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. ಬೆಂಗಳೂರಿನಲ್ಲಿಯೇ ಜೋಡಿ ಹೊಸ ವರ್ಷವನ್ನು ಸ್ವಾಗತಿಸಬೇಕಿತ್ತು. ಆದರೆ ಪ್ಲಾನ್ ಬದಲಾಯಿಸಿ ಶ್ರೀಲಂಕಾಕ್ಕೆ ಹೋಗಿದ್ದಾರೆ.
ಎಂಗೇಜ್‍ಮೆಂಟ್ ವಿಚಾರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ. ಹಾಗೆಯೇ ತಾವಿಬ್ಬರೂ ಪ್ರೀತಿಸುತ್ತಿದ್ದೇವೆಂದು ಇನ್ನೂ ಜೋಡಿ ಬಹಿರಂಗವಾಗಿಯೂ ಹೇಳಿಕೆ ನೀಡಿಲ್ಲ. ಆದರೆ ಅವರ ನಡೆ-ನುಡಿ ಇಬ್ಬರ ನಡುವೆ ಏನೇನೋ ಇದೆ ಎಂಬುದನ್ನು ಸಾರಿ ಹೇಳುತ್ತಿದೆ. ಏನೇ ಇರಲಿ, ಈ ಜೋಡಿಗಳು ಕೂಡಲೇ ವಿವಾಹವಾಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.