ಸ್ಯಾಂಡಲ್‌ವುಡ್‌ಗೆ ದೀಪಿಕಾ ಕಂಬ್ಯಾಕ್‌..! ಕನ್ನಡದ ಬಿಗ್‌ಬಜೆಟ್‌ ಸಿನಿಮಾದಲ್ಲಿ ಬಿಟೌನ್‌ ʼಐಶ್ವರ್ಯʼ

Bhima Koregaon kannada movie : ಸುಮಾರು 17 ವರ್ಷದ ನಂತರ ಸ್ಯಾಂಡಲ್‌ವುಡ್‌ನ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಸಂಜು ವೆಡ್ಸ್‌ ಗೀತಾ 2 ಸಿನಿಮಾದ ನಿರ್ದೇಶನದ ನಂತರ, ನಿರ್ದೇಶಕ ನಾಗಶೇಖರ್‌ ಅವರ ಮುಂದಿನ ಸಿನಿಮಾದಲ್ಲಿ ದೀಪಿಕಾ ನಟಿಸಲಿದ್ದಾರೆ. ನೈಜ ಘಟನೆಯ ಆಧಾರಿತದ ಬಿಗ್‌ ಬಜೆಟ್‌ ಸಿನಿಮಾದಲ್ಲಿ ಬಿಟೌನ್‌ ಸುಂದರಿ ಅಭಿನಯಿಸಲಿದ್ದಾರೆ.

Written by - Krishna N K | Last Updated : Sep 10, 2023, 07:30 PM IST
  • ಸುಮಾರು 17 ವರ್ಷದ ನಂತರ ಸ್ಯಾಂಡಲ್‌ವುಡ್‌ನ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ.
  • ನಿರ್ದೇಶಕ ನಾಗಶೇಖರ್‌ ಅವರ ಮುಂದಿನ ಸಿನಿಮಾದಲ್ಲಿ ದೀಪಿಕಾ ನಟಿಸಲಿದ್ದಾರೆ.
  • ನೈಜ ಘಟನೆಯ ಆಧಾರಿತದ ಬಿಗ್‌ ಬಜೆಟ್‌ ಸಿನಿಮಾದಲ್ಲಿ ಬಿಟೌನ್‌ ಸುಂದರಿ ಅಭಿನಯಿಸಲಿದ್ದಾರೆ.
ಸ್ಯಾಂಡಲ್‌ವುಡ್‌ಗೆ ದೀಪಿಕಾ ಕಂಬ್ಯಾಕ್‌..! ಕನ್ನಡದ ಬಿಗ್‌ಬಜೆಟ್‌ ಸಿನಿಮಾದಲ್ಲಿ ಬಿಟೌನ್‌ ʼಐಶ್ವರ್ಯʼ title=

Deepika padukone : ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿರುವ ನಿರ್ದೇಶಕರಲ್ಲಿ ನಾಗಶೇಖರ್‌ ಸಹ ಒಬ್ಬರು. ಡೈರೆಕ್ಟರ್‌ ನಾಗಶೇಖರ್‌ ಶ್ರೀನಗರ್‌ ಕಿಟ್ಟಿ ಹಾಗು ರಚಿತಾ ರಾಮ್‌ ಅಭಿನಯದ ʼಸಂಜು ವೆಡ್ಸ್‌ ಗೀತಾ 2ʼ ಸಿನಿಮಾ ಕಂಪ್ಲೀಟ್‌ ಆದ ಮೇಲೆ, ಮತ್ತೊಂದು ಕಥೆ ನಿರ್ದೇಶನ ಮಾಡಲು ತಯಾರಿ ನಡೆಸಿದ್ದಾರೆ. ಬಿಗ್‌ ಬಜೆಟ್‌ ಸಿನಿಮಾವೊಂದನ್ನ ಮಾಡುವುದಾಗಿ ನಿರ್ದೇಶಕ ನಾಗಶೇಖರ್‌ ಅನೌನ್ಸ್‌ ಮಾಡಿದ್ದಾರೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ದೊಡ್ಡ ದೊಡ್ಡ ಸ್ಟಾರ್‌ಗಳನ್ನ ಕರೆತರುಲು ಪ್ಲಾನ್‌ ಮಾಡಿದ್ದಾರಂತೆ. 

ʼಭೀಮಾ ಕೋರೇಗಾಂವ' ಹೆಸರಿನ ಹೊಸ ಸಿನಿಮಾವನ್ನು ನಾಗಶೇಖರ್ ಡೈರೆಕ್ಟ್‌ ಮಾಡಲು ನಿರ್ಧಾರ ಮಾಡಿದ್ದಾರೆ. ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರನ್ನು ಕರೆತರುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಸಿನಿಮಾ ಬಿಗ್ ಬಜೆಟ್ ಸಿನಿಮಾವಾಗಿದ್ದು, ಇದರ ಬಜೆಟ್‌ 120 ಕೋಟಿ ರೂಪಾಯಿ ತಲುಪಬಹುದು. ಸ್ಯಾಂಡಲ್‌ವುಡ್‌ನ 'ಸೂಪರ್ ಸ್ಟಾರ್'ನಟ ಒಬ್ಬರು ತಮ್ಮ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರಂತೆ.

ಇದನ್ನೂ ಓದಿ: ಟ್ವಿನಿಂಗ್‌ ಡ್ರೆಸ್‌ನಲ್ಲಿ ರಿಯಲ್‌ ಜೋಡಿ.. ಸಿದ್ದು-ಕಿಯಾರ ಮ್ಯಾಚಿಂಗ್‌ ಮ್ಯಾಚಿಂಗ್..! ವಿಡಿಯೋ ವೈರಲ್‌

ಈ ಸಿನಿಮಾದ ಸ್ಟೋರಿಯನ್ನ ಪ್ರೇಕ್ಷಕರ ಕಣ್ಣಿಗೆ ಕಟ್ಟುವಂತೆ ಮಾಡುತ್ತೀವಿ. ಹಾಗೆ ವೀಕ್ಷಕರ ಮನಸಿಗೆ ಮುಟ್ಟುವಂತೆ ಸಿನಿಮಾ ಮಾಡುವುದು ನಮ್ಮ ಜವಬ್ದಾರಿ ಅಂತ ಡೈರಕ್ಟರ್ ನಾಗಶೇಖರ್ ಹೇಳಿದ್ದಾರೆ. 500 ಜನ ಸೈನಿಕರನ್ನ, 30 ಸಾವಿರ ಪೇಶ್ವೆ ಬಾಜಿ ಸೈನಿಕರನ್ನ, 12 ಗಂಟೆಯಲ್ಲಿ ಧ್ವಂಸ ಮಾಡಿದ ಕಥೆಯೇ ನಮ್ಮ ಸಿನಿಮಾ ಎಂದು ಹೇಳಿದ್ದಾರೆ.

1818 ರ ಜನವರಿ 1ರಂದು ನಡೆದ ನೈಜ ಘಟನೆ ಬಗ್ಗೆ ತೋರಿಸಿದ್ದು, ಶೋಷಿತರ ಬದುಕಿಗೆ ಬಣ್ಣ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರಂತೆ. ನೈಜ ಘಟನೆಯ ಆಧಾರಿತ ಸಿನಿಮಾವಾಗಿದ್ದು, ಬಹಳ ದೊಡ್ಡ ವಿಷಯವನ್ನ ಒಳಗೊಂಡಿದೆ. 54 ಕೋಟಿ ಶೋಷಿತರ ಬದುಕಿಗೆ ಬೆಳಕಾಗಲಿದೆ. ಸಿನಿಮಾದ ಸ್ಕ್ರಿಪ್ಟ್‌ ಹಾಗು ಪ್ರೀಪ್ರೋಡಕ್ಷನ್‌ ಕೆಲಸ ಮಾಡಲು 1 ವರ್ಷ ಸಮಯವಾದರು ಬೇಕಾಗುತ್ತದೆ. ಈ ಸಿನಿಮಾವನ್ನ ನಿರ್ದೇಶನ ಮಾಡಲು ಚಕ್ರವತಿ ಚಂದ್ರಚೂಡ್‌ ಅವರು ಪ್ರೇರಣೆ ನೀಡಿದ್ದಾರಂತೆ.

ಇದನ್ನೂ ಓದಿ: ಕಡಲತೀರದಲ್ಲಿ ಮುದ್ದು ಮಗಳೊಂದಿಗೆ ಯಶ್‌-ರಾಧಿಕಾ ತುಂಟಾಟ..! ಕ್ಯೂಟ್‌ ವಿಡಿಯೋ ಇಲ್ಲಿದೆ

ಐತಿಹಾಸದ ನೈಜ ಘಟನೆಯನ್ನು ನಮ್ಮ ಜನರಿಗೆ ತಿಳಿಸಬೇಕು ಎಂದು ತೀರ್ಮಾನ ಮಾಡಿ, ಸಿನಿಮಾ ನಿರ್ಮಾಣಕ್ಕೆ ಹೆಜ್ಜೆಹಾಕಿದರಂತೆ. ಚಕ್ರವರ್ತಿ ಚಂದ್ರಚೂಡ್ ಗೈಡೆನ್ಸ್‌ನಲ್ಲಿ, ಬರಹಗಾರರ ಟೀಮ್‌ವೊಂದನ್ನ ಕಟ್ಟಿಕೊಂಡು, ಸಿನಿಮಾವನ್ನ ಎರಡು ಭಾಗಗಳಲ್ಲಿ ಚಿತ್ರೀಕರಣ ಮಾಡಬೇಕೆಂದು ಎಂದು ಯೋಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ʼಭೀಮಾ ಕೋರೇಗಾಂವ' ಸಿನಿಮಾವನ್ನ ನಾಗಶೇಖರ್ ಮೂವೀಸ್ ಹಾಗೂ ಪವಿತ್ರ ಇಂಟರ್ ನ್ಯಾಷನಲ್ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News