Deepika padukone : ದೀಪಿಕಾ ʼಕೇಸರಿ ಬಿಕಿನಿʼ ಮೇಲೆ ನೆಟ್ಟಿಗರ ಕಣ್ಣು.. ʼಪಠಾಣ್‌ ಬಾಯ್ಕಾಟ್‌ʼ ಘೋಷಣೆ

 Boycott Pathan Trends : ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ಖಾನ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ʼಪಠಾಣ್‌ʼ ವಿರುದ್ಧ ಬಾಯ್ಕಾಟ್‌ ಕೂಗು ಕೇಳಿ ಬರುತ್ತಿದೆ. ಮೊನ್ನೆ ತಾನೆ ಬಿಡುಗಡೆಯಾಗಿದ್ದ ಬೇಷರಂ ರಂಗ್‌ ಸಾಂಗ್‌ ಹಿಟ್‌ ಆಗಿದ್ದು, ಜನರಿಗೆ ತುಂಬಾ ಇಷ್ಟವಾಗುತ್ತಿದೆ. ಇದರ ಬೆನ್ನಲ್ಲೆ ಬೇಷರಂ ರಂಗ್‌ನ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ತೊಟ್ಟಿದ್ದ ಕೇಸರಿ ಬಣ್ಣದ ಬಿಕಿನಿ ವಿವಾದಕ್ಕೆ ಗುರಿಯಾಗಿದೆ.

Written by - Krishna N K | Last Updated : Dec 14, 2022, 03:41 PM IST
  • ಬಹುನಿರೀಕ್ಷಿತ ಸಿನಿಮಾ ʼಪಠಾಣ್‌ʼ ವಿರುದ್ಧ ಬಾಯ್ಕಾಟ್‌ ಕೂಗು ಕೇಳಿ ಬರುತ್ತಿದೆ.
  • ದೀಪಿಕಾ ತೊಟ್ಟಿದ್ದ ಕೇಸರಿ ಬಣ್ಣದ ಬಿಕಿನಿ ವಿವಾದಕ್ಕೆ ಗುರಿಯಾಗಿದೆ.
  • ಸೋಷಿಯಲ್‌ ಮೀಡಿಯಾದಲ್ಲಿ ಪಠಾಣ್‌ ಬಾಯ್ಕಾಟ್‌ ಹ್ಯಾಷ್‌ ಟ್ಯಾಗ್‌ ಭಾರಿ ಸದ್ದು ಮಾಡುತ್ತಿದೆ.
Deepika padukone : ದೀಪಿಕಾ ʼಕೇಸರಿ ಬಿಕಿನಿʼ ಮೇಲೆ ನೆಟ್ಟಿಗರ ಕಣ್ಣು.. ʼಪಠಾಣ್‌ ಬಾಯ್ಕಾಟ್‌ʼ ಘೋಷಣೆ title=

Pathan Movie : ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ಖಾನ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ʼಪಠಾಣ್‌ʼ ವಿರುದ್ಧ ಬಾಯ್ಕಾಟ್‌ ಕೂಗು ಕೇಳಿ ಬರುತ್ತಿದೆ. ಮೊನ್ನೆ ತಾನೆ ಬಿಡುಗಡೆಯಾಗಿದ್ದ ಬೇಷರಂ ರಂಗ್‌ ಸಾಂಗ್‌ ಹಿಟ್‌ ಆಗಿದ್ದು, ಜನರಿಗೆ ತುಂಬಾ ಇಷ್ಟವಾಗುತ್ತಿದೆ. ಇದರ ಬೆನ್ನಲ್ಲೆ ಬೇಷರಂ ರಂಗ್‌ನ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ತೊಟ್ಟಿದ್ದ ಕೇಸರಿ ಬಣ್ಣದ ಬಿಕಿನಿ ವಿವಾದಕ್ಕೆ ಗುರಿಯಾಗಿದೆ.

ಹೌದು.. ನೆಟ್ಟಿಗರು ಯಾವಾಗ ಯಾವ ವಿಚಾರಕ್ಕಾಗಿ ಯಾರನ್ನು ಗುರಿಯಾಗಿಸಿಕೊಂಡು ಟ್ರೋಲ್‌ ಮಾಡ್ತಾರೆ ಅಂತ ಹೇಳೋಕೆ ಆಗಲ್ಲ. ಇದೀಗ ದೀಪಿಕಾ ತೊಟ್ಟಿದ್ದ ಕೇಸರಿ ಬಿಕಿನಿ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಸೋಷಿಯಲ್‌ ಮೀಡಿಯಾದಲ್ಲಿ #BoycottPathaan ಎಂಬ ಹ್ಯಾಷ್‌ ಟ್ಯಾಗ್‌ ಭಾರಿ ಸದ್ದು ಮಾಡುತ್ತಿದೆ. ಅಲ್ಲದೆ, ಬೇಷರಂ ರಂಗ್‌ ಹಾಗೂ ಬಹಳ ಅಶ್ಲೀಲವಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: Ram Gopal Verma : ಟೈಟ್‌ ಹಗ್‌ ಮಾಡಿ 10 ದಿನ ಸ್ನಾನ ಮಾಡಲ್ಲ ಅಂದ್ಲು ಸುಂದ್ರಿ..!

ಇನ್ನು ಶಾರುಖ್​ ಖಾನ್ ನಟನೆಯ ‘ಪಠಾಣ್​’ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ʼಬೇಷರಂ ರಂಗ್​..ʼ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ. 3 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಪಡೆದುಕೊಂಡಿದೆ. ಇದರ ನಡುವೆ ಹಾಡಿನಲ್ಲಿ ಅಶ್ಲೀಲತೆ ಹೆಚ್ಚಾಗಿದೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. ಅಲ್ಲದೆ, ದೀಪಿಕಾ ಧರಿಸಿರುವ ಕೆಸರಿ ಬಿಕನಿ ಬಗ್ಗೆಯೂ ನೆಟಿಜನ್ಸ್‌ ಚಕಾರವೆತ್ತಿದ್ದಾರೆ.

ಪಠಾಣ್‌ ಸಿನಿಮಾಗೆ ಸಿದ್ದಾರ್ಥ್‌ ಆನಂದ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಶಾರುಖ್‌ ಖಾನ್‌, ದೀಪಿಕಾ ಪುಡುಕೋಣೆ, ಜಾನ್‌ ಅಬ್ರಾಹಂ ಸಿನಿಮಾದಲ್ಲಿದ್ದಾರೆ. 2023 ಜನವರಿ 25 ರಂದು ಪಠಾಣ್‌ ವಿಶ್ವದಾದ್ಯಂತ ತೆರೆ ಮೇಲೆ ಅಪ್ಪಳಿಸಲಿದೆ. ಆದ್ರೆ ಈ ನಡುವೆ ಬಾಯ್ಕಾಟ್‌ ಮಾತುಗಳು ಕೇಳಿಬರುತ್ತಿರುವುದರಿಂದ ಚಿತ್ರದ ಬಾಕ್ಸ್‌ ಆಫೀಸ್‌ಗೆ ಹೊಡೆತ ಬಿಳುವ ಲಕ್ಷಣಗಳು ಕಂಡು ಬರುತ್ತಿದೆ. ಒಟ್ಟಾರೆಗೆ ಮುಂದೆನಾಗುತ್ತೆ ಅಂತ ಕಾಯ್ದು ನೋಡ್ಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News