ಬಾಲಿವುಡ್ ಬೆಡಗಿ ನಿಧಿ ಜೊತೆಗಿನ ಡೇಟಿಂಗ್ ಕೇವಲ ವದಂತಿ ಎಂದ ಕೆ.ಎಲ್.ರಾಹುಲ್

    

Last Updated : Jun 22, 2018, 04:32 PM IST
ಬಾಲಿವುಡ್ ಬೆಡಗಿ ನಿಧಿ ಜೊತೆಗಿನ ಡೇಟಿಂಗ್ ಕೇವಲ ವದಂತಿ ಎಂದ ಕೆ.ಎಲ್.ರಾಹುಲ್ title=

ಬೆಂಗಳೂರು: ಇತ್ತೀಚಿಗೆ ಕನ್ನಡಿಗ ಹಾಗೂ ಖ್ಯಾತ ಕ್ರಿಕೆಟ್ ಆಟಗಾರ ಬೆಂಗಳೂರು ಮೂಲದ ಬಾಲಿವುಡ್ ಬೆಡಗಿ  ನಿಧಿ ಅಗರವಾಲ್ ಜೊತೆ ಕಾಣಿಸಿಕೊಂಡು ಸಾಕಷ್ಟು ಸುದ್ದಿಯಾಗಿದ್ದರು ಅಲ್ಲದೆ ಇವರಿಬ್ಬರು ಜೊತೆ ಇರುವ ಫೋಟೋಗಳು ಸಹಿತ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದವು.

ಆದರೆ ಈ ಸುದ್ದಿಯನ್ನು ಈಗ ಕೆ ಎಲ್ ರಾಹುಲ್ ನಿರಾಕರಿಸಿದ್ದಾರೆ. ಖಾಸಗಿ ವಾಹಿನಿಯ ಕಾರ್ಯಕರ್ಮದ ವೇಳೆ ಪ್ರತಿಕ್ರಿಯಿಸಿರುವ  ಅವರು ನಾನು ಮತ್ತು ನಿಧಿ ಅಗರವಾಲ್ ಇಬ್ಬರು ಕೂಡ ಕಾಲೇಜ್ ದಿನಗಳಿಂದಲೂ ಸಹ ಸ್ನೇಹಿತರು ಈಗಲೂ ನಾವು ಸ್ನೇಹಿತರಷ್ಟೆ ಎಂದು ಅವರು ತಿಳಿಸಿದ್ದಾರೆ ಅಲ್ಲದೆ  ತಮ್ಮ ಸಂಬಂಧದ ಕುರಿತಾಗಿ ಹಬ್ಬಿರುವ ಸುದ್ದಿಗಳೆಲ್ಲವೂ ಕೂಡ ಸುಳ್ಳು ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿಗೆ ಇವರಿಬ್ಬರು ಹೋಟೆಲ್ ವೊಂದರಲ್ಲಿ ಒಟ್ಟಿಗೆ ಕುಳಿತುಕೊಂಡಿರುವ ಪೋಟೋಗಳು ವೈರಲ್ ಆಗಿದ್ದರಿಂದ ಇಬ್ಬರು ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಸುದ್ದಿ ಹರಡಿತ್ತು.ಈಗ ಈ ಹಿನ್ನಲೇ ಯಲ್ಲಿ ಕೆಎಲ್ ರಾಹುಲ್ ಈಗ ಸ್ಪಷ್ಟನೆ ನೀಡಿದ್ದಾರೆ. 

 

Trending News