"ಮೊದ್ಲು ನಮ್ ತಾಯಿನ ನಾವ್ ಪ್ರೀತ್ಸೋದ್ ಕಳಿಯೋಣ.... ನಾವು ವಿಲನ್‌ಗಳೇ ಬಿಡಿ. ನಾವೇನು ಹೀರೋಗಳಲ್ಲ": ದರ್ಶನ್

Challenging Star Darshan: ಕೈವ ಟ್ರೇಲರ್‌ ಲಾಂಚ್‌ ಸಮಾರಂಭದಲ್ಲಿ, ನಟ ದರ್ಶನ್‌ ವೇದಿಕೆ ಏರಿ  ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡುತ್ತಾ "ಮೊದ್ಲು ನಮ್ ತಾಯಿನ ನಾವ್ ಪ್ರೀತ್ಸೋದ್ ಕಳಿಯೋಣ" ಎಂದು ಕಾವೇರಿ ಹಾಗೂ ಕನ್ನಡ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ. ಇದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.  

Written by - Zee Kannada News Desk | Last Updated : Nov 28, 2023, 11:44 AM IST
  • ಸ್ಯಾಂಡಲ್‌ವುಡ್‌ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸಿನಿಮಾಗಳ ಜೊತೆಗೆ ಹೊಸಬರ, ಆಪ್ತರ ಸಿನಿಮಾಗಳಿಗೆ ಬೆಂಬಲವಾಗಿ ನಿಲುತ್ತಾ ಬರ್ತಿದ್ದಾರೆ.
  • ಇದೀಗ ಧನ್ವೀರ್ ನಟನೆಯ 'ಕೈವ' ಸಿನಿಮಾ ಸಾಥ್ ಕೊಟ್ಟು, ಚಿತ್ರದ ಟ್ರೇಲರ್ ರಿಲೀಸ್ ಇವೆಂಟ್‌ಗೆ ಹಾಜರಾಗಿ ಶುಭ ಕೋರಿದ್ದಾರೆ.
  • ದರ್ಶನ್ ವೇದಿಕೆ ಏರುವುದಕ್ಕೂ ಮುನ್ನ ಹಾಸ್ಯನಟ ಚಿಕ್ಕಣ್ಣ ವೇದಿಕೆಯಲ್ಲಿ ಮಾತನಾಡುತ್ತಾ, ದಯವಿಟ್ಟು ಎಲ್ಲರೂ ಕನ್ನಡ ಸಿನಿಮಾಗಳನ್ನು ನೋಡಿ ಎಂದು ಮನವಿ ಮಾಡಿದ್ದರು.
"ಮೊದ್ಲು ನಮ್ ತಾಯಿನ ನಾವ್ ಪ್ರೀತ್ಸೋದ್ ಕಳಿಯೋಣ.... ನಾವು ವಿಲನ್‌ಗಳೇ ಬಿಡಿ. ನಾವೇನು ಹೀರೋಗಳಲ್ಲ": ದರ್ಶನ್ title=

Darshan At Kaiva Trailer Launch Event: ಸ್ಯಾಂಡಲ್‌ವುಡ್‌ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸಿನಿಮಾಗಳ ಜೊತೆಗೆ ಹೊಸಬರ, ಆಪ್ತರ ಸಿನಿಮಾಗಳಿಗೆ ಬೆಂಬಲವಾಗಿ ನಿಲುತ್ತಾ ಬರ್ತಿದ್ದಾರೆ. ಇತ್ತೀಚೆಗೆ ಅಭಿಷೇಕ್ ಅಂಬರೀಶ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಚಿತ್ರದ ಪ್ರಚಾರಕ್ಕೆ ಕೈಜೋಡಿಸಿದವರು, ಇದೀಗ ಧನ್ವೀರ್ ನಟನೆಯ 'ಕೈವ' ಸಿನಿಮಾ ಸಾಥ್ ಕೊಟ್ಟು, ಚಿತ್ರದ ಟ್ರೇಲರ್ ರಿಲೀಸ್ ಇವೆಂಟ್‌ಗೆ ಹಾಜರಾಗಿ ಶುಭ ಕೋರಿದ್ದಾರೆ. ಡೈರೆಕ್ಟರ್‌ ಜಯತೀರ್ಥ ನಿರ್ದೇಶನದ 'ಕೈವ' ಸಿನಿಮಾ ಡಿಸೆಂಬರ್ 8ಕ್ಕೆ ರಿಲೀಸ್ ಆಗುತ್ತಿದ್ದು, ರಾರಾಜಿನಗರದ ಕೆ.ಎಲ್‌. ಇ ಮೈದಾನದಲ್ಲಿ ಬಹಳ ಅದ್ಧೂರಿಯಾಗಿ 'ಕೈವ' ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೀತು. ವೇದಿಕೆ ಪಕ್ಕದಲ್ಲೇ ದರ್ಶನ್ ನಟನೆಯ 'ಕಾಟೇರ' ಕಟೌಟ್ ನಿಲ್ಲಿಸಿ ಅಭಿಮಾನಿಗಳು ಸಂಭ್ರಮಿಸಿ, ನೆಚ್ಚಿನ ನಟನನ್ನು ನೋಡಲು ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರು. 

ಕೈವ ಟ್ರೇಲರ್‌ ಲಾಂಚ್‌ ಸಮಾರಂಭದಲ್ಲಿ, ನಟ ದರ್ಶನ್‌ ವೇದಿಕೆ ಏರಿ  ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿ, 'ಕೈವ' ತಂಡಕ್ಕೆ ಶುಭಕೋರಿದ್ದರು. ದರ್ಶನ್ ವೇದಿಕೆ ಏರುವುದಕ್ಕೂ ಮುನ್ನ ಹಾಸ್ಯನಟ ಚಿಕ್ಕಣ್ಣ ವೇದಿಕೆಯಲ್ಲಿ ಮಾತನಾಡುತ್ತಾ, ದಯವಿಟ್ಟು ಎಲ್ಲರೂ ಕನ್ನಡ ಸಿನಿಮಾಗಳನ್ನು ನೋಡಿ ಎಂದು ಮನವಿ ಮಾಡಿದ್ದರು. ಚಿಕ್ಕಣ್ಣನ ಮಾತನ್ನು ಪ್ರಸ್ತಾಪಿಸಿ ದರ್ಶನ್ ಕೂಡ ಮೊದಲು ನಮ್ಮ "ಮೊದ್ಲು ನಮ್ ತಾಯಿನ ನಾವ್ ಪ್ರೀತ್ಸೋದ್ ಕಳಿಯೋಣ. ಸ್ವಾರ್ಥ ಆದ್ರು ಅಂದ್ಕೊಳಿ, ಇಲ್ಲ ಹೊಟ್ಟೆ ಉರಿ ಅಂತ ಆದ್ರು ಅಂದ್ಕೊಳಿ, ಇನ್ನು ಏನು ಬೇಕಾದರೂ ಅಂದ್ಕೊಳಿ. ಈಗಾಗಲೇ ಅಕ್ಕಪಕ್ಕದ ರಾಜ್ಯದವರು ಜಕ್ಕೂರಿನಿಂದ ಹೊರಗಡೆ ಸಿನಿಮಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಅವರ ಸಿನಿಮಾ ಪ್ರಚಾರಕ್ಕೆ. ಮುಂದಿನ ಬಾರಿ ಇಲ್ಲಿಗೆ ಬಂದಿರುತ್ತಾರೆ. ನಾವು ಎಲ್ಲೋ ಹೊರಗಡೆ ಹೋಗಬೇಕಾಗಿರುತ್ತದೆ. ಅದು ಸರಿ ಅಂತೀರಾ? ಏನಂತೀರಾ?" ಎಂದು ದರ್ಶನ್ ಪ್ರಶ್ನಿಸಿದ್ದರು. 

ಇದನ್ನೂ ಓದಿ: ನಟಿ ಪೂಜಾ ಗಾಂಧಿ ಮದುವೆ: ಕನ್ನಡ ಕಲಿಸಿದ ಗುರುವನ್ನೇ ವರಿಸಲಿದ್ದಾರೆ ಮುಂಗಾರು ಮಳೆ ‘ಬೆಡಗಿ’- ವರನ್ಯಾರು ಗೊತ್ತಾ?

ದರ್ಶನ್‌ "ದಯಮಾಡಿ ಇದನ್ನು ಸ್ವಾರ್ಥ ಅಂದುಕೊಂಡ್ರು ಪರವಾಗಿಲ್ಲ. ಮೊದ್ಲು ನಮ್ಮ ತಾಯಿನ ನಾವ್ ಪ್ರೀತ್ಸೋದು ಕಲಿಯೋಣ. ಆಮೇಲೆ ಪಕ್ಕದವರ ತಾಯಿನಾ ನೋಡೋಣ. ನಾನು ಪ್ರೀತಿಸಬೇಡಿ ಎನ್ನುತ್ತಿಲ್ಲ. ತಪ್ಪದು. ಆದರೆ ನಮ್ಮ ತಾಯಿ ನಮಗೆ ದೊಡ್ಡವ್ರು. ಅದಕ್ಕೆ ಏನು ಬೇಕಾದ್ರು ಮಾಡೋಣ. ಯಾರಾದರೂ ನಮ್ಮ ತಾಯಿನ ಏನಾದ್ರೂ ಅಂದ್ರೆ ಸುಮ್ನೆ ಬಿಟ್ಟುಬಿಡ್ತೀವಾ? ಇಲ್ಲ ನಮ್ಮ ತಾಯಿ ಬಗ್ಗೆ ಏನಾದ್ರು ಹೇಳಿದಾಗ ಅವ್ರು ಒಬ್ರು ಮಾತಾಡ್ತಾರಾ? ಇದೇ ಕಾವೇರಿ ಇಷ್ಯೂ.. ಅವತ್ತು ನಾವು ಮಾತನಾಡಿದಾಗ ದೊಡ್ಡದಾಗಿ ತಪ್ಪಾಗಿ ಕಾಣಿಸಿದ್ವಿ. ನಾವು ವಿಲನ್‌ಗಳೇ ಬಿಡಿ. ನಾವೇನು ಹೀರೋಗಳಲ್ಲ. ಆದ್ರು ನಿಯತ್ತು ಮಾತನಾಡ್ತೀವಿ. ಬೇರೆ ಯಾರಾದರೂ ಒಂದು ಮಾತು ಎತ್ತಿದ್ರಾ ಇದರ ಬಗ್ಗೆ? ಯಾಕೆ ಅವರಿಗೆಲ್ಲಾ ಸಂಬಂಧನೇ ಇಲ್ವಾ? ಬರೀ ಪ್ರಮೋಷನ್ ಅಷ್ಟೇನಾ? ಹಾಗಾಗಿ ದಯಮಾಡಿ ಕನ್ನಡ ಸಿನಿಮಾಗಳನ್ನು ಹರಸಿ, ಬೆಳೆಸಿ ಆರ್ಶೀವದಿಸಿ." ಎಂದರು.

ನಟ ದರ್ಶನ್‌ ಮಾತು ಮುಂದುವರೆಸುತ್ತಾ, "ಚಿಕ್ಕಣ್ಣ ಹೇಳಿದ್ದಂತೆ ಎರಡೂವರೆ ಗಂಟೆ ಸಿನ್ಮಾದಲ್ಲಿ 10 ನಿಮಿಷ ಇಷ್ಟ ಆಗ್ಲಿಲ್ಲ ಅಂದ್ರೆ ಸಿನ್ಮಾನೆ ಇಷ್ಟ ಆಗ್ಲಿಲ್ಲ ಅನ್ನೋದು ತಪ್ಪು. ಪೂರ್ತಿ ಸಿನಿಮಾ ನೋಡಿದ್ರೆ ಅರ್ಥ ಆಗೋದು ಏನು ಸಿನಿಮಾ ಅಂತ. ನಮ್ಮ ಜ್ಯೂನಿಯರ್ 'ಬ್ಯಾಡ್ ಮ್ಯಾನರ್ಸ್' ಚಿತ್ರವನ್ನು ಹರಸಿದ್ರಿ, ಬೆಳೆಸಿದ್ರೆ ಥ್ಯಾಂಕ್ಸ್. ಈಗ 'ಕೈವ' ಬರ್ತಿದೆ ಹರಸಿ. ಚಿಕ್ಕಣ್ಣನ ಸಿನಿಮಾ ಕೂಡ ಹರಸಿ" ಎಂದರು. 'ಕೈವ' ಚಿತ್ರದಲ್ಲಿ ಧನ್ವೀರ್ ಜೋಡಿಯಾಗಿ ಮೇಘಾಶೆಟ್ಟಿ ನಟಿಸುತ್ತಿದ್ದರೇ, ಇನ್ನುಳಿದಂತೆ ದಿನಕರ್ ತೂಗುದೀಪ, ಜೆಕೆ, ನಂದ ಗೋಪಾಲ್, ಉಗ್ರಂ ಮಂಜು, ರಘು ಶಿವಮೊಗ್ಗ ತಾರಾಗಣದಲ್ಲಿದ್ದಾರೆ. ರವೀಂದ್ರ ಕುಮಾರ್ ನಿರ್ಮಾಣದ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ. ಶ್ವೇತಾ ಪ್ರಿಯಾ ನಾಯಕ್ ಛಾಯಾಗ್ರಹಣ ಚಿತ್ರಕ್ಕಿದ್ದು, ಸಿನಿಮಾದಲ್ಲಿ 80ರ ದಶಕದ ಬೆಂಗಳೂರು ಭೂಗತಲೋಕದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News