DBoss Kranti : ʼಕ್ರಾಂತಿʼ ಸೆಂಟರ್‌ ಅಟ್ರ್ಯಾಕ್ಷನ್‌ ಆಯ್ತು ದರ್ಶನ್‌ ಬಾಡಿ ಲುಕ್‌..!

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಬಹುನಿರೀಕ್ಷಿತ ಕ್ರಾಂತಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಈಗಾಗಲೇ ಯೂಟ್ಯೂಬ್‌ನಲ್ಲಿ ಕ್ರಾಂತಿ ಅಬ್ಬರ ಜೋರಾಗಿದೆ. ಈ ನಡುವೆ ಟ್ರೇಲರ್‌ನ ಕೊನೆಯಲ್ಲಿ ಕಾಣಿಸಿಕೊಂಡ ದರ್ಶನ್‌ ಬಾಡಿ ಲುಕ್‌ ಸಖತ್‌ ವೈರಲ್‌ ಆಗುತ್ತಿದೆ. ಅಲ್ಲದೆ, ಡಿಬಾಸ್‌ ಅಭಿಮಾನಿಗಳಂತೂ ಗಜ ಗಾಂಭೀರ್ಯದ ನಡೆ ನೋಡಿ ಸಖತ್‌ ಖುಷಿಯಾಗಿದ್ದಾರೆ.

Written by - Krishna N K | Last Updated : Jan 8, 2023, 11:26 AM IST
  • ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಬಹುನಿರೀಕ್ಷಿತ ಕ್ರಾಂತಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ.
  • ಟ್ರೇಲರ್‌ನ ಕೊನೆಯಲ್ಲಿ ಕಾಣಿಸಿಕೊಂಡ ದರ್ಶನ್‌ ಬಾಡಿ ಲುಕ್‌ ಸಖತ್‌ ವೈರಲ್‌ ಆಗುತ್ತಿದೆ.
  • ಬಾಸ್‌ ಇಸ್‌ ಬ್ಯಾಕ್‌, ಸೂಪರ್‌, ಅಂತ ಹೊಗಳುತ್ತಿದ್ದಾರೆ. ಇನ್ನು ಕೆಲವರು ಅಸಭ್ಯವಾಗಿ ಟ್ರೋಲ್‌ ಮಾಡುತ್ತಿದ್ದಾರೆ.
DBoss Kranti : ʼಕ್ರಾಂತಿʼ ಸೆಂಟರ್‌ ಅಟ್ರ್ಯಾಕ್ಷನ್‌ ಆಯ್ತು ದರ್ಶನ್‌ ಬಾಡಿ ಲುಕ್‌..! title=

Kranti teaser : ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಬಹುನಿರೀಕ್ಷಿತ ಕ್ರಾಂತಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಈಗಾಗಲೇ ಯೂಟ್ಯೂಬ್‌ನಲ್ಲಿ ಕ್ರಾಂತಿ ಅಬ್ಬರ ಜೋರಾಗಿದೆ. ಈ ನಡುವೆ ಟ್ರೇಲರ್‌ನ ಕೊನೆಯಲ್ಲಿ ಕಾಣಿಸಿಕೊಂಡ ದರ್ಶನ್‌ ಬಾಡಿ ಲುಕ್‌ ಸಖತ್‌ ವೈರಲ್‌ ಆಗುತ್ತಿದೆ. ಅಲ್ಲದೆ, ಡಿಬಾಸ್‌ ಅಭಿಮಾನಿಗಳಂತೂ ಗಜ ಗಾಂಭೀರ್ಯದ ನಡೆ ನೋಡಿ ಸಖತ್‌ ಖುಷಿಯಾಗಿದ್ದಾರೆ.

ಹೌದು, ದರ್ಶನ್‌ ಸಿನಿಮಾ ಬಿಡುಗಡೆ ಮುನ್ನ ಹಬ್ಬದ ವಾತಾವರಣ ಇರುತ್ತೆ ಬಿಡುಗಡೆಯಾದರೆ ಫುಲ್‌ ಸೆಲೆಬ್ರೇಷನ್‌. ಈ ನಡುವೆ ನಿನ್ನೆ ಬಿಡುಗಡೆಯಾದ ಕ್ರಾಂತಿ ಟ್ರೇಲರ್‌ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ, ವಿ. ಹರಿಕೃಷ್ಣ ಅವರ ಮ್ಯಾಜಿಕ್‌ ವರ್ಕೌಟ್‌ ಆಗುವ ಲಕ್ಷಣ ಕಾಣುತ್ತಿದೆ. ಕ್ಲಾಸ್‌ ಮತ್ತು ಮಾಸ್‌ ಅವತಾರದಲ್ಲಿ ಮಿಂಚಿರುವ ದರ್ಶನ್‌ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಇದನ್ನೂ ಓದಿ: Yash Birthday : ರಾಕಿಂಗ್‌ ಸ್ಟಾರ್‌ ಯಶ್‌ ಪಡೆದ ಮೊದಲ ಸಂಭಾವನೆ ಎಷ್ಟು ಗೊತ್ತಾ?

ವಿಶೇಷ ಅಂದ್ರೆ ಟ್ರೇಲರ್‌ ಕೊನೆಯಲ್ಲಿ ದರ್ಶನ್‌ ಬಾಡಿ ಲುಕ್‌ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡ್ತೀದೆ. ದಚ್ಚು ಕಡಕ್‌ ಬಾಡಿ ನೋಡಿದ ಅವರ ಅಭಿಮಾನಿಗಳು, ಬಾಸ್‌ ಇಸ್‌ ಬ್ಯಾಕ್‌, ಸೂಪರ್‌, ಅಂತ ಹೊಗಳುತ್ತಿದ್ದಾರೆ. ಇನ್ನು ಕೆಲವರು ಅಸಭ್ಯವಾಗಿ ಟ್ರೋಲ್‌ ಮಾಡುತ್ತಿದ್ದಾರೆ. ಇದ್ಯಾವುದನ್ನು ತಲೆಕೆಡಿಸಿಕೊಳ್ಳದ ಡಿಬಾಸ್‌ ಅಭಿಮಾನಿಗಳು ಕ್ರಾಂತಿ ಸಿನಿಮಾದ ಟ್ರೇಲರ್‌ನ್ನು ಎಂಜಾಯ್‌ ಮಾಡುತ್ತಿದ್ದಾರೆ.

ಅಲ್ಲದೆ, ಕೆಲವರು ಕ್ರಾಂತಿ ಸಿನಿಮಾ ಯುವರತ್ನ ಮತ್ತು ತೆಲುಗು ಸಿನಿಮಾ ಮಹರ್ಷಿಯ ಮಿಕ್ಸ್‌ ಅಂತ ಅಸಮಾಧಾನ ಹೊರಹಾಕಿದ್ದಾರೆ. ವಿ. ಹರಿಕೃಷ್ಣ ಆಕ್ಷನ್‌ ಕಟ್‌ ಹೇಳುವ ಜೊತೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದರ್ಶನ್‌ಗೆ ಜೊತೆಯಾಗಿ ರಚಿತಾ ರಾಮ್‌ ನಟಿಸಿದ್ದಾರೆ. ವಿ. ರವಿಚಂದ್ರನ್‌, ರವಿಶಂಕರ್‌ ಮತ್ತು ಸಂಸದೆ ಸುಮತಲಾ ಸಿನಿಮಾದಲ್ಲಿದ್ದಾರೆ. ಜ.26 ರಂದು ಕ್ರಾಂತಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News