ದೋಸ್ತ್‌ಗಳಲ್ಲ.. ದುಶ್ಮನ್‌ಗಳು ಎಷ್ಟಿದಾರೆ ಅಂತ ಗೊತ್ತಾಗ್ತಿದೆ.. ಥೂ..ಥೂ..!

ನಟ ದರ್ಶನ್ ಅಭಿನಯದ ಬ್ಲಾಕ್ಟಬಸ್ಟರ್‌ ಸಿನಿಮಾ ಕ್ರಾಂತಿ ಈಗಾಲೇ 100 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗುತ್ತಿದೆ. ಇದೀಗ ಕ್ರಾಂತಿ ಚಿತ್ರದ ಸಕ್ಸಸ್‌ ಅನ್ನು ಚಿತ್ರತಂಡ ಸಂಭ್ರಮಿಸುತ್ತಿದೆ. ಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ದಚ್ಚು ಧನ್ಯವಾದಗಳನ್ನು ಹೇಳಿದ್ದಾರೆ. ಅಲ್ಲದೆ, ಕ್ರಾಂತಿ ಸಿನಿಮಾ ತುಂಬಾ ಕಲಿಸಿದ ಚಿತ್ರ. ದೋಸ್ತ್‌ಗಳಿಗಿಂತ ದುಶ್ಮನ್‌ಗಳು ಯಾರು ಎನ್ನುವುದನ್ನು ಹೇಳಿಕೊಟ್ಟಿತು ಅಂತ ದಾಸ ಬೇಸರ ವ್ಯಕ್ತಪಡಿಸಿದರು.

Written by - Krishna N K | Last Updated : Feb 3, 2023, 04:52 PM IST
  • ನಟ ದರ್ಶನ್ ಅಭಿನಯದ ಬ್ಲಾಕ್ಟಬಸ್ಟರ್‌ ಸಿನಿಮಾ ಕ್ರಾಂತಿ ಈಗಾಲೇ 100 ಕೋಟಿ ರೂ. ಗಳಿಸಿದೆ.
  • ಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ದಚ್ಚು ಧನ್ಯವಾದಗಳನ್ನು ಹೇಳಿದ್ದಾರೆ.
  • ಕ್ರಾಂತಿ ಸಿನಿಮಾ ದೋಸ್ತ್‌ಗಳಿಗಿಂತ ದುಶ್ಮನ್‌ಗಳು ಯಾರು ಎನ್ನುವುದನ್ನು ಹೇಳಿಕೊಟ್ಟಿತು ಎಂದ ದಾಸ.
 ದೋಸ್ತ್‌ಗಳಲ್ಲ.. ದುಶ್ಮನ್‌ಗಳು ಎಷ್ಟಿದಾರೆ ಅಂತ ಗೊತ್ತಾಗ್ತಿದೆ.. ಥೂ..ಥೂ..! title=

Darshan Kranti : ನಟ ದರ್ಶನ್ ಅಭಿನಯದ ಬ್ಲಾಕ್ಟಬಸ್ಟರ್‌ ಸಿನಿಮಾ ಕ್ರಾಂತಿ ಈಗಾಲೇ 100 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗುತ್ತಿದೆ. ಇದೀಗ ಕ್ರಾಂತಿ ಚಿತ್ರದ ಸಕ್ಸಸ್‌ ಅನ್ನು ಚಿತ್ರತಂಡ ಸಂಭ್ರಮಿಸುತ್ತಿದೆ. ಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ದಚ್ಚು ಧನ್ಯವಾದಗಳನ್ನು ಹೇಳಿದ್ದಾರೆ. ಅಲ್ಲದೆ, ಕ್ರಾಂತಿ ಸಿನಿಮಾ ತುಂಬಾ ಕಲಿಸಿದ ಚಿತ್ರ. ದೋಸ್ತ್‌ಗಳಿಗಿಂತ ದುಶ್ಮನ್‌ಗಳು ಯಾರು ಎನ್ನುವುದನ್ನು ಹೇಳಿಕೊಟ್ಟಿತು ಅಂತ ದಾಸ ಬೇಸರ ವ್ಯಕ್ತಪಡಿಸಿದರು.

ಈಗಾಗಲೇ ಬಾಕ್ಸ್‌ ಆಫೀಸ್‌ನಲ್ಲಿ ದರ್ಶನ್‌ ಕ್ರಾಂತಿ ಸಿನಿಮಾ 100 ಕೋಟಿ ಗಳಿಸುವ ಮೂಲಕ ಕಮಾಲ್‌ ಮಾಡಿದೆ. ಸಿನಿಮಾದ ಯಶಸ್ಸನ್ನು ಚಿತ್ರತಂಡ ಸಕ್ಸಸ್‌ ಮೀಟ್‌ ಮಾಡುವ ಮೂಲಕ ಅಧಿಕೃತವಾಗಿ ತಿಳಿಸಿತು. ಅಲ್ಲದೆ, ಈ ವೇಳೆ ದರ್ಶನ್‌ ಅವರು ಸಿನಿಮಾದ ಗೆಲುವಿಗೆ ಕಾರಣರಾದ ತಮ್ಮ ಅಭಿಮಾನಿಗಳಿಗೆ ಮತ್ತು ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರು ಹಾಗೂ ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ʼಅಪ್ಪು ಹಾದಿಯಲ್ಲಿ ವಿನಯ್‌ʼ.. ಕಾಲಿವುಡ್‌ನ ಬಿಗ್‌ ಆಫರ್‌ ರಿಜೆಕ್ಟ್‌ ಮಾಡಿದ್ರು ಅಣ್ಣಾವ್ರ ಮೊಮ್ಮಗ

ಕ್ರಾಂತಿ ಸಿನಿಮಾದ ಬಗ್ಗೆ ನೆಗೆಟಿವ್‌ ಪ್ರಚಾರ ಮಾಡಿದ್ದವರಿಗೆ ನಾನು ಧನ್ಯವಾದಗಳನ್ನು ಹೇಳ್ತೇನೆ. ಅವರೇ ನನ್ನ ಸಿನಿಮಾಗೆ ಬಿಟ್ಟಿ ಪ್ರಚಾರ ಕೊಟ್ಟವರು. ಇನ್ನೂ ಕೆಲವರು ಹಣ ಖರ್ಚು ಮಾಡಿಕೊಂಡು ನೆಗೆಟಿವ್‌ ಕಾಮೆಂಟ್‌ ಮೂಲಕ ನಮ್ಮ ಸಿನಿಮಾಗೆ ಬೆಂಬಲ ಕೊಟ್ರು, ಅವರಿಗೆ ಒಳ್ಳೆಯದಾಗಲಿ ಅಂತ ಕ್ರಾಂತಿ ವಿರುದ್ಧ ಕಾಮೆಂಟ್‌ ಹಾಗೂ ಟ್ರೊಲ್‌ ಮಾಡಿದ್ದ ನೆಟ್ಟಿಗರಿಗೆ ದಚ್ಚು ತಮ್ಮದೇ ಸ್ಟೈಲ್‌ನಲ್ಲಿ ಟಾಂಗ್‌ ಕೊಟ್ಟರು.

ಇನ್ನು ಸಿನಿಮಾದಿಂದ ಗೆಳೆಯರು ಎಷ್ಟು ಜನ ಇದ್ದಾರೆ ಅಂತ ಅಲ್ಲ ದುಶ್ಮನ್‌ಗಳು ಎಷ್ಟು ಜನ ಇದಾರೆ ಅಂತ ತಿಳಿಯಿತು... ಥೂ... ಥೂ..! ಅಂತ ಅಂದ್ರು. ಅಲ್ಲದೆ, ಚಿತ್ರ ಸಕ್ಸಸ್‌ ಆಗಿಲ್ಲ ಎಂದವರಿಗೆ ತಿರುಗೇಟು ನೀಡಿದ ದಾಸ, ಸಿನಿಮಾ ಗೆದ್ದರೆ ಮಾತ್ರ ಸೆಲೆಬ್ರೇಷನ್‌ ಮಾಡ್ತಾರೆ.. ಸುಮ್ನೆ ದುಡ್ಡು ಖರ್ಚು ಮಾಡಿ, ಹೊಗಳಿಕೊಳ್ಳೋಕೆ ನಮಗೇನು ನಾಯಿ ಕಚ್ಚಿದೆಯಾ..? ಅಂತ ಕ್ರಾಂತಿ 100 ಕೋಟಿ ಗಳಿಸಿಲ್ಲ, ಸಕ್ಸಸ್‌ ಆಗಿಲ್ಲ ಎಂದವರಿಗೆ ಪ್ರತ್ಯುತ್ತರ ನೀಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News