ಬೆಂಗಳೂರು: ರಾತ್ರಿ ಬೆಂಗಳೂರು ರಸ್ತೆಯಲ್ಲಿ ದರ್ಶನ್ (Challenging Star Darshan) ಕಾರನ್ನು ಯಾರೋ ಫಾಲೋ ಮಾಡಿದ್ದಾರೆ. ಓರ್ವ ವ್ಯಕ್ತಿ ತನ್ನನ್ನು ಹಿಂಬಾಲಿಸುತ್ತಿರುವುದು ದರ್ಶನ್ ಗಮನಕ್ಕೂ ಬಂದಿದೆ. ಮುಂದೇನಾಯಿತು ಅನ್ನೋದು ಸಾಕಷ್ಟು ಕುತೂಹಲಕಾರಿ.
ದರ್ಶನ್ ಕಾರಿನಲ್ಲಿರುವುದು ಆತನಿಗೆ ಗೊತ್ತಾಗಿತ್ತು.!
ತನ್ನ ಕಾರಿನಲ್ಲಿ ದರ್ಶನ್ ಹೊರಟಿರುವುದು ದರ್ಶನ್ ಅಭಿಮಾನಿಗೆ (Darshan Fan) ಗೊತ್ತಾಗಿದೆ. ಆತ ಅಟೋ ಒಂದರಲ್ಲಿ ಡಿಬಾಸ್ (D Boss) ಅನ್ನು ಹಿಂಬಾಲಿಸಿದ್ದಾನೆ. ರಾತ್ರಿ ಹೊತ್ತು ಬೆಂಗಳೂರು ರಸ್ತೆಯಲ್ಲಿ ಓರ್ವ ವ್ಯಕ್ತಿ ತನ್ನನ್ನು ಫಾಲೊ ಮಾಡುತ್ತಿರುವುದು ದರ್ಶನ್ ಗಮನಕ್ಕೂ ಬಂದಿದೆ. ಈ ಬೆಳವಣಿಗೆ ಚಾಲೆಂಜಿಂಗ್ ಸ್ಟಾರ್ (Challenging Star) ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ : ತಮ್ಮ 13ನೇ ವಯಸ್ಸಿನಲ್ಲಿಯೇ Rajinikanth ತಾಯಿಯಾಗಿ ಅಭಿನಯಿಸಿದ್ದ Sridevi
ಡಿಬಾಸ್ (D Boss) ಮಾಡಿದ್ದೇನು ಗೊತ್ತಾ..?
ಅಟೋ ಒಂದು ಹಿಂಬಾಲಿಸುತ್ತಿರುವಂತೆಯೇ ದರ್ಶನ್ (Darshan) ತಮ್ಮ ಕಾರು ನಿಲ್ಲಿಸಿದ್ದಾರೆ. ಕಾರಿನಿಂದ ಇಳಿದು, ಹೊರಬಂದ ದರ್ಶನ್ ಗೆ ಶಾಕ್ ಆಗಿತ್ತು. ತನ್ನನ್ನು ಹಿಂಬಾಲಿಸಿದ್ದು ಓರ್ವ ಅಪ್ಪಟ ಅಭಿಮಾನಿ. ಆತನಿಗೆ ತನ್ನ ಆರಾಧ್ಯ ದೈವದ ಜೊತೆ ಮಾತಾಡಬೇಕಿತ್ತು ಅಷ್ಟೇ..! ಇನ್ನೂ ಅಚ್ಚರಿಯೆಂದರೆ ಫಾಲೋ ಮಾಡುತ್ತಿದ್ದ ಅಭಿಮಾನಿ ವಿಶೇಷಶಕ್ತ (Specially Abled) . ಅಭಿಮಾನಿ ದೇವರು ರಸ್ತೆಯಲ್ಲಿ ಸಿಕ್ಕಿದರೆ ಸುಮ್ಮನಿರುತ್ತಾರೆಯೇ ಡಿ ಬಾಸ್. ನಡುರಸ್ತೆಯಲ್ಲೇ ಅಭಿಮಾನಿ ಜೊತೆ ಕುಳಿತು ಮಾತನಾಡಿದ್ದಾರೆ ದರ್ಶನ್. ತನ್ನ ಅಭಿಮಾನಿಯ ಮನಸ್ಸಿಗೆ ಖುಷಿಯಾಗುವಷ್ಟು ಹೊತ್ತು ಆತನ ಜೊತೆ ಹರಟೆ ಹೊಡೆದಿದ್ದಾರೆ. ಅಭಿಮಾನಿ ಜೊತೆ ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಖುಷಿ ಖುಷಿಯಾಗಿ ಆತನ ಮಾತುಗಳನ್ನು ಕೇಳಿಸಿಕೊಂಡಿದ್ದಾರೆ ದರ್ಶನ್. ಈ ಎಲ್ಲಾ ದೃಶ್ಯಗಳು ಇದೀಗ ಕೆಮೆರಾದಲ್ಲಿ ಸೆರೆಯಾಗಿದೆ. ಆ ವಿಡಿಯೋ ಇದೀಗ ವೈರಲ್ (Viral Video) ಆಗಿದೆ.
Boss ...#Roberrt#BossOfSandalwood#ChallengingStarDarshan #DBoss@Dasadarshan @DBossTrends @Dcompany171 @dboss_Kingdom @DbossFc171 pic.twitter.com/GikBFSHrLz
— RoBerrt - DTSOYofficial (@DTSOYOfficial) February 24, 2021
`ಯಜಮಾನ' ಸಿಕ್ಕ ಖುಷಿ.!
ನಡುರಸ್ತೆಯಲ್ಲಿ ಸಿಕ್ಕ ಅಭಿಮಾನಿ ದೇವರು ತನ್ನ ಅಟೋದಲ್ಲಿ ದರ್ಶನ್ ಭಾವಚಿತ್ರದ ಜೊತೆ `ಯಜಮಾನ' ಎಂದು ಬರೆದುಕೊಂಡಿದ್ದ. `ಯಜಮಾನ' (Yajamana) ಸಿಕ್ಕ ಖುಷಿಗೆ ಅಭಿಮಾನಿಗೆ ಸ್ವರ್ಗವೇ ಸಿಕ್ಕಷ್ಟು ಖುಷಿಯಾಗಿದೆ. ಆ ವಿಡಿಯೋ ನೋಡಿದ ಉಳಿದ ಅಭಿಮಾನಿಗಳಿಗಂತೂ ಖುಷಿಗೆ ಎಣೆಯೇ ಇಲ್ಲದಂತಾಗಿದೆ. ಅಂದ ಹಾಗೆ, ದರ್ಶನ್ ಅಭಿನಯದ ರಾಬರ್ಟ್ (Roberrt) ಚಿತ್ರ ಮಾರ್ಚ್ 11ಕ್ಕೆ ಬಿಡುಗಡೆಯಾಗಲಿದೆ.
ಇದನ್ನೂ ಓದಿ : KGF-2 ಡೈಲಾಗ್ ಹೊಡೆದ ಖ್ಯಾತ ಕ್ರಿಕೆಟರ್ ವೀರೆಂದ್ರ ಸೆಹ್ವಾಗ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.