Marriage: ಪ್ರೇಮಿಗಳ ದಿನದಂದು ಹಸೆಮಣೆ ಏರಿದ ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್!

ಬಹುದಿನಗಳಿಂದ ಪ್ರೀತಿಸುತ್ತಿದ್ದ ಚಿತ್ರನಟರಾದ ಕೃಷ್ಣ ಮತ್ತು ಮಿಲನಾ ಅವರು ಇಂದು ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಸಿದ್ದಾರೆ.

Last Updated : Feb 14, 2021, 04:52 PM IST
  • ಬಹುದಿನಗಳಿಂದ ಪ್ರೀತಿಸುತ್ತಿದ್ದ ಚಿತ್ರನಟರಾದ ಕೃಷ್ಣ ಮತ್ತು ಮಿಲನಾ ಅವರು ಇಂದು ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಸಿದ್ದಾರೆ.
  • ಈಜುಕೊಳದ ಮಧ್ಯೆ ನಿರ್ಮಿಸಿರುವ ಕಲರ್‍ಫುಲ್ ಮಂಟಪದಲ್ಲಿ ಅದ್ಧೂರಿಯಾಗಿ ಇವರ ಮದುವೆ ನಡೆದಿದೆ.
  • ಬೆಳಗ್ಗೆ 9:30 ರಿಂದ 10:30ರ ನಡುವಿನ ಮುಹೂರ್ತದಲ್ಲಿ ವಿವಾಹ ಕಾರ್ಯ ಸಂಪನ್ನಗೊಂಡಿದೆ. ಮದುವೆಗೆ ಚಿತ್ರರಂಗದ ಗಣ್ಯರು ಹಾಗೂ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.
Marriage: ಪ್ರೇಮಿಗಳ ದಿನದಂದು ಹಸೆಮಣೆ ಏರಿದ ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್! title=

ಬೆಂಗಳೂರು: ಬಹುದಿನಗಳಿಂದ ಪ್ರೀತಿಸುತ್ತಿದ್ದ ಚಿತ್ರನಟರಾದ ಕೃಷ್ಣ ಮತ್ತು ಮಿಲನಾ ಅವರು ಇಂದು ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಸಿದ್ದಾರೆ. ಈಜುಕೊಳದ ಮಧ್ಯೆ ನಿರ್ಮಿಸಿರುವ ಕಲರ್‍ಫುಲ್ ಮಂಟಪದಲ್ಲಿ ಅದ್ಧೂರಿಯಾಗಿ ಇವರ ಮದುವೆ ನಡೆದಿದೆ.

ಬೆಳಗ್ಗೆ 9:30 ರಿಂದ 10:30ರ ನಡುವಿನ ಮುಹೂರ್ತದಲ್ಲಿ ವಿವಾಹ(Marriage) ಕಾರ್ಯ ಸಂಪನ್ನಗೊಂಡಿದೆ. ಮದುವೆಗೆ ಚಿತ್ರರಂಗದ ಗಣ್ಯರು ಹಾಗೂ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಇದಾಗಲೇ ಮೆಹಂದಿ ಹಾಗೂ ಅರಿಶಿಣ ಶಾಸ್ತ್ರಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜೋಡಿ ಇದೀಗ ಮದುವೆ ಕಾರ್ಯಕ್ರಮದ ಫೋಟೋವನ್ನೂ ಶೇರ್‌ ಮಾಡಿದ್ದಾರೆ.

Dboss birthday CDP : ಡಿ ಬಾಸ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಕಾಮನ್ ಡಿಪಿ ಚಾಲೆಂಜ್.! ಈ ಸಲ ಫುಲ್ ಡಿಫರೆಂಟ್

ನಿನ್ನೆ ಸಂಜೆ ಸಂಗೀತ ಕಾರ್ಯಕ್ರಮದ ನಡೆದಿತ್ತು. ಕೃಷ್ಣ ಮತ್ತು ಮಿಲನಾ(Milana Nagaraj) ಮೊದಲಿಗೆ ಜತೆಯಾಗಿ ನಟಿಸಿದ್ದು 'ನಮ್ ದುನಿಯಾ ನಮ್ ಸ್ಟೈಲ್' ಚಿತ್ರದಲ್ಲಿ. ಆ ನಂತರ 'ಚಾರ್ಲಿ'ಯೆಂಬ ಇನ್ನೊಂದು ಚಿತ್ರದಲ್ಲಿ ಇಬ್ಬರೂ ನಟಿಸಿದ್ದರು.

'ಸಿಂಬಾ' ಅಭಿಮಾನಿಗಳಿಗೆ 'ಜೂ.ಸರ್ಜಾ'ರನ್ನು ಪರಿಚಯಿಸಿದ ಮೇಘನಾ ರಾಜ್.!

ಕ್ರಮೇಣ ಹತ್ತಿರವಾದ ಇಬ್ಬರೂ, 'ಲವ್ ಮಾಕ್ಟೇಲ್'(Love Mocktail) ಚಿತ್ರದಲ್ಲಿ ಜತೆಯಾಗಿ ನಟಿಸುವುದಲ್ಲದೆ, ಆ ಚಿತ್ರದ ಬರವಣಿಗೆ ಮತ್ತು ನಿರ್ವಣದಲ್ಲೂ ತೊಡಗಿಸಿಕೊಂಡಿದ್ದರು. ಕಳೆದ ವರ್ಷ ಆ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಪರಸ್ಪರ ಪ್ರೀತಿಸುತ್ತಿರುವುದಾಗಿ ಘೋಷಿಸಿದ್ದರು. ವರ್ಷಾಂತ್ಯಕ್ಕೆ ಮದುವೆ ಎಂದು ಹೇಳಿದ್ದರೂ, ಲಾಕ್​ಡೌನ್​ನಿಂದಾಗಿ ಈ ಪ್ರೇಮಿಗಳ ದಿನಕ್ಕೆ ಮದುವೆಗೆ ಮುಹೂರ್ತ ಸಿಕ್ಕಿತ್ತು.

OMG! Deepika Padukone ಧರಿಸಿರುವ ಮಾಸ್ಕ್ ಬೆಲೆ ಕೇಳಿದರೆ ಶಾಕ್ ಆಗ್ತೀರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News