'ಸಲಾರ್' ಚಿತ್ರದ ಕಂಟೆಂಟ್ ಲೀಕ್ ಮಾಡಿದ್ದಕ್ಕಾಗಿ ಇಬ್ಬರ ಬಂಧನ:‌ ಖಡಕ್ ಎಚ್ಚರಿಕೆ ನೀಡಿದ ಸಿನಿತಂಡ!

Salaar Movie: ಸಲಾರ್' ಚಿತ್ರತಂಡ ಸಿನಿಮಾ ಕಥೆ ಬಗ್ಗೆ  ಎಲ್ಲಿಯೂ ಸುಳಿವು ಬಿಟ್ಟುಕೊಡದಿದ್ದರು, ಆದರೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಮೇಕಿಂಗ್ ವಿಡಿಯೋಗಳು, ಫೋಟೊಗಳು  ಹರಿದಾಡುತ್ತಿದ್ದು ತಮ್ಮ ಅನುಮತಿ ಇಲ್ಲದೇ ಚಿತ್ರದ ಕಂಟೆಂಟ್‌ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಇಬ್ಬರನ್ನು ಚಿತ್ರತಂಡ ಪೊಲೀಸರಿಗೆ ಒಪ್ಪಿಸಿದೆ.  

Written by - Zee Kannada News Desk | Last Updated : Nov 18, 2023, 02:26 PM IST
  • ವಿಶ್ವದಾದ್ಯಂತ 5000 ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಸಲಾರ್' ದರ್ಬಾರ್ ಶುರುವಾಗಲಿದೆ.
  • 'ಸಲಾರ್' ಚಿತ್ರತಂಡ ಪೋಸ್ಟರ್‌ಗಳು, ಟೀಸರ್ ಬಿಟ್ಟರೆ ಸಿನಿಮಾ ಬಗ್ಗೆ ಹೆಚ್ಚಿನ ಕಂಟೆಂಟ್ ಕೂಡ ಹೊರ ಬಂದಿಲ್ಲ.
  • ಕಂಟೆಂಟ್ ವಿಚಾರಲ್ಲಿ ಈ ರೀತಿ ಮುಂದೆ ಏನಾದರೂ ತಪ್ಪಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಚಿತ್ರತಂಡ ಮಾಧ್ಯಮಗಳಿಗೆ ತಿಳಿಸಿದೆ.
'ಸಲಾರ್' ಚಿತ್ರದ ಕಂಟೆಂಟ್ ಲೀಕ್ ಮಾಡಿದ್ದಕ್ಕಾಗಿ ಇಬ್ಬರ ಬಂಧನ:‌ ಖಡಕ್ ಎಚ್ಚರಿಕೆ ನೀಡಿದ ಸಿನಿತಂಡ! title=

Salaar Movie Making Video Leaked: ಟಾಲಿವುಡ್‌ ರೆಬಲ್‌ ಸ್ಟಾರ್‌ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್‌ ಶುರುವಾಗಿದ್ದು, ಹೊಂಬಾಳೆ ಸಂಸ್ಥೆ ಬಹಳ ಅದ್ಧೂರಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದು, 2 ಭಾಗಗಳಾಗಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಪ್ರಶಾಂತ್‌ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ಆರ್ಭಟ ನೋಡೋಕೆ ಅಭಿಮಾನಿಗಳು ಉತ್ಸುಕರಾಗಿದ್ದು, ಇದೇ ಡಿಸೆಂಬರ್ 1ಕ್ಕೆ 'ಸಲಾರ್' ಟ್ರೇಲರ್ ರಿಲೀಸ್ ಆಗಲಿದೆ. ಕರ್ನಾಟಕದಲ್ಲಿ ಹೊಂಬಾಳೆ ಸಂಸ್ಥೆಯ ಸಿನಿಮಾ ರಿಲೀಸ್ ಜವಾಬ್ದಾರಿ ವಹಿಸಿಕೊಂಡಿದ್ದು, ವಿಶ್ವದಾದ್ಯಂತ 5000 ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಸಲಾರ್' ದರ್ಬಾರ್ ಶುರುವಾಗಲಿದೆ. 

ಇಲ್ಲಿಯವರೆಗೂ 'ಸಲಾರ್' ಚಿತ್ರತಂಡ  ಸಿನಿಮಾ ಕಥೆ ಬಗ್ಗೆ  ಸುಳಿವು ಬಿಟ್ಟುಕೊಡದೆ, ಕೇವಲ ಪೋಸ್ಟರ್‌ಗಳು, ಟೀಸರ್ ಬಿಟ್ಟರೆ ಸಿನಿಮಾ ಬಗ್ಗೆ ಹೆಚ್ಚಿನ ಕಂಟೆಂಟ್ ಕೂಡ ಹೊರ ಬಂದಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಲೀಕಾಸುರರ ಆರ್ಭಟ ಹೆಚ್ಚಾಗಿದ್ದು, ಇತ್ತೀಚೆಗೆ ಸಿನಿಮಾದ ಮೇಕಿಂಗ್ ವಿಡಿಯೋಗಳು, ಫೋಟೊಗಳು   ಹರಿದಾಡುತ್ತಿದ್ದು, ತಮ್ಮ ಅನುಮತಿ ಇಲ್ಲದೇ ಚಿತ್ರದ ಕಂಟೆಂಟ್‌ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಇಬ್ಬರನ್ನು ಚಿತ್ರತಂಡ ಪೊಲೀಸರಿಗೆ ಒಪ್ಪಿಸಿದೆಯಂತೆ. 

ಇದನ್ನು ಓದಿ: Tiger 3: ಬಾಕ್ಸ್ ಆಫೀಸ್ ನಲ್ಲಿ ಸಲ್ಲು ಭಾಯ್ ಅಬ್ಬರ: ಆರು ದಿನದ ಕಲೆಕ್ಷನ್ ಮಾಹಿತಿ!

ಕಂಟೆಂಟ್ ವಿಚಾರಲ್ಲಿ ಈ ರೀತಿ ಮುಂದೆ ಏನಾದರೂ ತಪ್ಪಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಚಿತ್ರತಂಡ ಮಾಧ್ಯಮಗಳಿಗೆ ಮಾಹಿತಿ ನೀಡಿರುವುದಾಗಿಯೂ ಹೇಳಲಾಗ್ತಿದ್ದು, ಸಿನಿಮಾದ ರಿಲೀಸ್ ಡೇಟ್ ಹತ್ತಿರವಾಗುತ್ತಿದಂತೆ ಲೀಕ್ ವಿಚಾರದಲ್ಲಿ ಚಿತ್ರತಂಡ ಮತ್ತಷ್ಟು ಎಚ್ಚರಿಕೆ ವಹಿಸುತ್ತಿರುವುದು ಗೊತ್ತಾಗುತ್ತಿದೆ.'KGF' ಸರಣಿಗೆ ಕೆಲಸ ಮಾಡಿದ ಬಹುತೇಕ ತಂಡ 'ಸಲಾರ್' ಸರಣಿಗೆ ಕೈ ಜೋಡಿಸಿದ್ದು, ಪೃಥ್ವಿರಾಜ್‌ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಶ್ರುತಿ ಹಾಸನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.  

ಈಗಾಗಲೇ ರಿಲೀಸ್ ಆಗಿರುವ ಸಲಾರ್ ಟೀಸರ್ ಇನ್ನಿಲ್ಲದ ಕುತೂಹಲ ಮೂಡಿಸಿದ್ದು,  ಓವರ್‌ಸೀಸ್‌ ಮಾರ್ಕೆಟ್‌ನಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ 28ಕ್ಕೆ 'ಸಲಾರ್' ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ 3 ತಿಂಗಳು ರಿಲೀಸ್ ಮುಂದೂಡಲಾಯಿತು. ತಿಂಗಳಿಗೂ ಮೊದಲೇ ಹೊರ ದೇಶಗಳಲ್ಲಿ ಪ್ರೇಕ್ಷಕರು ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡಿದ್ದು, ಬಳಿಕ ಟಿಕೆಟ್ ರದ್ದು ಮಾಡಿ ಹಣ ಮರಳಿಸಲಾಗಿತ್ತು. ಇದೀಗ ಮತ್ತೆ ಬುಕ್ಕಿಂಗ್ ಶುರುವಾಗಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News