ಕರುನಾಡ ʼKGFʼ ರೋಚಕ ನೈಜ ಕಥೆ ಆಧಾರಿತ ವಿಕ್ರಮ್‌ ʼತಂಗಲಾನ್‌ʼ ಟೀಸರ್‌ ಔಟ್‌..!

Chiyaan Vikram : ಚಿಯಾನ್‌ ವಿಕ್ರಮ್‌ ನಟನೆಯ ತಂಗಲಾನ್‌ ಸಿನಿಮಾಗೆ ನಿರ್ದೇಶಕ ಪಾ ರಂಜಿತ್ ಆಕ್ಷನ್‌ ಕಟ್‌ ಹೇಳಿದ್ದಾರೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಸ್ಟುಡಿಯೋ ಗ್ರೀನ್‌ನ ಬ್ಯಾನರ್‌ನಡಿಯಲ್ಲಿ ಕೆ.ಇ.ಜ್ಞಾನವೇಲ್ ರಾಜಾ ತಮ್ಮ ನೀಲಂ ಪ್ರೊಡಕ್ಷನ್ಸ್ ಜೊತೆಗೂಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇಂದು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದ್ಭುತವಾಗಿದೆ. 

Written by - Krishna N K | Last Updated : Nov 1, 2023, 06:05 PM IST
  • ಚಿಯಾನ್‌ ವಿಕ್ರಮ್‌ ನಟನೆಯ ತಂಗಲಾನ್‌ ಸಿನಿಮಾ.
  • ತಂಗಲಾನ್‌ ಸಿನಿಮಾಗೆ ನಿರ್ದೇಶಕ ಪಾ ರಂಜಿತ್ ಆಕ್ಷನ್‌ ಕಟ್‌ ಹೇಳಿದ್ದಾರೆ.
  • ಇಂದು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದ್ಭುತವಾಗಿದೆ.
ಕರುನಾಡ ʼKGFʼ ರೋಚಕ ನೈಜ ಕಥೆ ಆಧಾರಿತ ವಿಕ್ರಮ್‌ ʼತಂಗಲಾನ್‌ʼ ಟೀಸರ್‌ ಔಟ್‌..! title=

Thangalaan Teaser : ಚಿಯಾನ್ ವಿಕ್ರಮ್ ಒಬ್ಬ ಅದ್ಭುತ ನಟ ಎಂಬುವುದು ಎಲ್ಲರಿಗೂ ತಿಳಿದಿದೆ. ಕಥೆಗೆ ತಕ್ಕಹಾಗೆ ದೈಹಿಕವಾಗಿ ಬದಲಾಗುವ ವಿಕ್ರಮ್‌ ತಮ್ಮ ಅಭಿನಯದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಧ್ಯ ವಿಕ್ರಮ್‌ ನಟನೆಯ ʼತಂಗಲಾನ್‌ʼ ಸಿನಿಮಾದ ಟೀಸರ್‌ ರಿಲೀಸ್‌ ಆಗಿದ್ದು, ಮೈನವಿರೇಳಿಸುವಂತಿದೆ.

ಹೌದು.. 'ಅಟ್ಟಕಟ್ಟಿ', 'ಮದ್ರಾಸ್', ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಾಲಾ', 'ಕಬಾಲಿ' ಮತ್ತು 'ಸಾರ್ ಪಟ್ಟ' ಚಿತ್ರಗಳ ಮೂಲಕ ತಮಿಳು ಪ್ರೇಕ್ಷಕರ ಜೊತೆಗೆ ಕನ್ನಡ, ತೆಲುಗು ಸಿನಿ ರಸಿಕರನ್ನೂ ಮೆಚ್ಚಿಸಿದ್ದ ನಿರ್ದೇಶಕ ಪಾ ರಂಜಿತ್ ತಂಗಲಾನ್‌ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಸ್ಟುಡಿಯೋ ಗ್ರೀನ್‌ನ ಬ್ಯಾನರ್‌ನಡಿಯಲ್ಲಿ ಕೆ.ಇ.ಜ್ಞಾನವೇಲ್ ರಾಜಾ ತಮ್ಮ ನೀಲಂ ಪ್ರೊಡಕ್ಷನ್ಸ್ ಜೊತೆಗೂಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇಂದು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದ್ಭುತವಾಗಿದೆ.

ಇದನ್ನೂ ಓದಿ:ಖ್ಯಾತ ಹಾಲಿವುಡ್‌ ನಟ ಟೈಲರ್ ಕ್ರಿಸ್ಟೋಫರ್ ನಿಧನ

ಕೋಲಾರ ಗೋಲ್ಡ್‌ ಫಿಲ್ಡ್‌ನ (KGF) ನೈಜ ಘಟನೆಗಳನ್ನು ಆಧರಿಸಿದ 'ತಂಗಲಾನ್‌' ಚಿತ್ರವು ನಿಯತಕಾಲಿಕ ಆಕ್ಷನ್ ಡ್ರಾಮಾ ಸಿನಿಮಾ ಎಂದು ನಿರ್ದೇಶಕ ನಿರ್ಮಾಪಕರು ಹೇಳಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ವಿಕ್ರಮ್ ಗೆಟಪ್, ಸ್ಟಿಲ್ಸ್ ಕುತೂಹಲ ಹೆಚ್ಚಿಸಿದೆ. ಆದ್ರೆ ಇಂದು ಬಿಡುಗಡೆಯಾಗಿರುವ ಚಿತ್ರದ ಟೀಸರ್ ಸಿನಿಮಾದ ನಿರೀಕ್ಷೆ ಹೆಚ್ಚಿಸಿದೆ. 

 

ಇಡೀ 'ತಂಗಲಾನ್‌' ಟೀಸರ್ ನಲ್ಲಿ ಒಂದೇ ಒಂದು ಮಾತಿಲ್ಲ. ಟೀಸರ್ ನೋಡಿದ ಮೇಲೆ... ಪ್ರೇಕ್ಷಕರು ಮೂಕವಿಸ್ಮಿತರಾಗುತ್ತಾರೆ ಅಂದ್ರೆ ಅತಿಶಯೋಕ್ತಿಯಲ್ಲ. ಹಳ್ಳದ ನೀರಿನಲ್ಲಿ ಹರಿಯುವ ರಕ್ತ... ವಿಕ್ರಮ್ ಕಾಳಿಂಗ ಸರ್ಪವನ್ನು ಕೈಯಯಿಂದಲೇ ಎರಡು ಭಾಗವಾಗಿ ಕತ್ತರಿಸುವುದು... ಯುದ್ಧದ ದೃಶ್ಯಗಳು... ಎಲ್ಲವೂ ಅಮೋಘವಾಗಿವೆ.

ಇದನ್ನೂ ಓದಿ:ಒಲವೇ ಒಲವೇ.. ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌-Bʼ ಮೆಲೋಡಿ ಸಾಂಗ್‌ ಔಟ್..!

ಬ್ರಿಟಿಷರು ನಮ್ಮ ದೇಶಕ್ಕೆ ಬಂದಾಗಿನಿಂದ ರಾಜರೊಂದಿಗಿನ ಯುದ್ಧಗಳನ್ನೂ ಸಹ ಚಿತ್ರದಲ್ಲಿ ತೋರಿಸಲಾಗಿದೆ. ಟೀಸರ್ ಕೊನೆಯಲ್ಲಿ ವಿಕ್ರಮ್ ಚಿನ್ನದ ಗಣಿಗಳನ್ನು ನೋಡುವ ದೃಶ್ಯವಿದೆ. 'ಸ್ವಾರ್ಥವು ವಿನಾಶಕ್ಕೆ ಕಾರಣವಾಗುತ್ತದೆ, ರಕ್ತಸಿಕ್ತ ಯುದ್ಧಗಳು ಸ್ವಾತಂತ್ರ್ಯಕ್ಕೆ ಕಾರಣವಾಗುತ್ತವೆ' ಎಂಬ ಉಲ್ಲೇಖವಿದೆ. ವಿಕ್ರಮ್ ಬ್ರಿಟಿಷರ ವಿರುದ್ಧ ತನ್ನ ಬುಡಕಟ್ಟಿನೊಂದಿಗೆ ಹೋರಾಡುವ ಕಥೆ ತಂಗಲಾನ್‌ ಎಂದು ಊಹಿಸಬಹುದು.   

'ತಂಗಲಾನ್‌' ಸಿನಿಮಾವನ್ನು ಜನವರಿ 26 ರಂದು ಬಿಡುಗಡೆ ಮಾಡುವುದಾಗಿ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರು ಈ ಹಿಂದೆ ಘೋಷಿಸಿದ್ದರು. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರವು ಪ್ಯಾನ್-ಇಂಡಿಯಾದಲ್ಲಿ ಬಿಡುಗಡೆಯಾಗಲಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News