Viral Video : ಹೋಳಿ ಬಣ್ಣ ಹಿಡಿದು ಶೃದ್ಧ ಕಪೂರ್ ಹಿಂದೆ ಬಂದ ಮಕ್ಕಳು..! ಮುಂದೆ ?

ಹೋಳಿ ಹಬ್ಬಕ್ಕೆ ಇನ್ನೂ ಒಂದು ದಿನ ಇದೆಯಾದರೂ ಹಬ್ಬದ ಉತ್ಸಾಹ ಈಗಾಗಲೇ ಆರಂಭವಾಗಿದೆ. ಮಕ್ಕಳಂತೂ ಕೈಯಲ್ಲಿ ಬಣ್ಣ, ಬಣ್ಣ ತುಂಬಿದ ಬಲೂನ್ ಹಿಡಿದು ಬಣ್ಣದಾಟಕ್ಕೆ ತಯಾರಾಗಿದ್ದಾರೆ.  

Written by - Ranjitha R K | Last Updated : Mar 28, 2021, 03:31 PM IST
  • ಶ್ರದ್ಧಾ ಕಪೂರ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
  • ಬಣ್ಣ ತುಂಬಿದ ಬಲೂನ್ ಹಿಡಿದು ಹೋಳಿಯಾಡುವಂತೆ ಶೃದ್ಧಾ ಕರೆದ ಮಕ್ಕಳು
  • ಕೈ ಮುಗಿದು ಬಣ್ಣ ಹಚ್ಚುವುದು ಬೇಡ ಎಂದು ಕೇಳಿಕೊಂಡ ಶ್ರದ್ಧಾ ಕಪೂರ್
 Viral Video : ಹೋಳಿ ಬಣ್ಣ ಹಿಡಿದು ಶೃದ್ಧ ಕಪೂರ್ ಹಿಂದೆ ಬಂದ ಮಕ್ಕಳು..!  ಮುಂದೆ ? title=
ಶ್ರದ್ಧಾ ಕಪೂರ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (file photo)

ನವದೆಹಲಿ: ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shraddha Kapoor) ಇತ್ತೀಚೆಗೆ ಯಾವುದಾದರೊಂದು ವಿಷಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ (Social Media) ಸುದ್ದಿಯಲ್ಲಿರುತ್ತಾರೆ. ಇದೀಗ  ಶ್ರದ್ಧಾ ಕಪೂರ್  ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಹೋಳಿ (Holi) ಬಣ್ಣ ತುಂಬಿರುವ ಬಲೂನ್ ಗಳನ್ನು ಹಿಡಿದು  ಮಕ್ಕಳು ಶ್ರದ್ಧಾ ಕಪೂರ್ ಹಿಂದೆ ಬರುತ್ತಿರುವುದು ಕಂಡು ಬಂದಿದೆ. 

ಹೋಳಿ (Holi) ಹಬ್ಬಕ್ಕೆ ಇನ್ನೂ ಒಂದು ದಿನ ಇದೆಯಾದರೂ ಹಬ್ಬದ ಉತ್ಸಾಹ ಈಗಾಗಲೇ ಆರಂಭವಾಗಿದೆ. ಮಕ್ಕಳಂತೂ ಕೈಯಲ್ಲಿ ಬಣ್ಣ, ಬಣ್ಣ ತುಂಬಿದ ಬಲೂನ್ (Baloon) ಹಿಡಿದು ಬಣ್ಣದಾಟಕ್ಕೆ ತಯಾರಾಗಿದ್ದಾರೆ.  ಇತ್ತೀಚೆಗೆ ಶ್ರದ್ಧಾ ಕಪೂರ್ ನನ್ನು (Shraddha Kapoor) ನೋಡಿದ ಮಕ್ಕಳು ಶ್ರದ್ಧಾಗೆ ಬಣ್ಣ ಹಚ್ಚುವ ಸಲುವಾಗಿ ಹಿಂದೆ ಹಿಂದೆ ಬಂದಿದ್ದಾರೆ. ಅಲ್ಲದೆ ಕೈಗಳಲ್ಲಿ ಬಣ್ಣ ತುಂಬಿದ ಬಲೂನ್ ಹಿಡಿದು ಹೋಳಿಯಾಡುವಂತೆ ಶೃದ್ಧಾ ಕಪೂರ್ ಅನ್ನು ಕರೆದಿದ್ದಾರೆ. ಮಕ್ಕಳನ್ನು ನೋಡಿದ ಶೃದ್ಧ ಮಕ್ಕಳಿಗೆ ಕೈ ಮುಗಿದು ಬಣ್ಣ ಹಚ್ಚುವುದು ಬೇಡ ಎಂದು ಕೇಳಿಕೊಂಡಿದ್ದಾರೆ.   

 
 
 
 

 
 
 
 
 
 
 
 
 
 
 

A post shared by Viral Bhayani (@viralbhayani)

 

ಇದನ್ನೂ ಓದಿ : Poornima Enterprises: ಸಿನಿಮಾದಲ್ಲಿ ನಟಿಸುವ ಆಸಕ್ತಿ ಇದೆಯಾ? ಹಾಗಿದ್ರೆ ಇಲ್ಲಿದೆ ನಿಮಗೆ ಅವಕಾಶ!

ಈ ಸಂದರ್ಭದಲ್ಲಿ ಶ್ರದ್ಧಾ ಕಪೂರ್ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ (Jeans) ಧರಿಸಿದ್ದರು. ಅಲ್ಲದೆ ಸನ್ ಗ್ಲಾಸ್ ಕೂಡಾ ಹಾಕಿಕೊಂಡಿದ್ದು, ಕಪ್ಪು ಬಣ್ಣದ ಮಾಸ್ಕ್ (Mask) ಧರಿಸಿದ್ದರು.  

ಇನ್ನು ಶ್ರದ್ಧಾ ಕಪೂರ್ ಮುಂದಿನ ಚಿತ್ರದ ಬಗ್ಗೆ ಹೇಳುವುದಾದರೆ, ಶೀಘ್ರದಲ್ಲೇ ರಣಬೀರ್ ಕಪೂರ್ (Ranbeer Kapoor) ಅವರೊಂದಿಗೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರದ್ಧಾ ಮತ್ತು ರಣಬೀರ್ ಜೊತೆಯಾಗಿ ಕೆಲಸ ಮಾಡುತ್ತಿರುವುದು ಇದೇ ಮೊದಲು.

ಇದನ್ನೂ ಓದಿ : ಮದುವೆಗೆ ಯಾಕೆ ಕರೆದಿಲ್ಲ ಎಂಬ ಅಭಿಮಾನಿ ಪ್ರಶ್ನೆಗೆ ಪ್ರಿಯಾಂಕ ಚೋಪ್ರಾ ಉತ್ತರ ಹೀಗಿತ್ತು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News