ಚೀಸ್ ಅಥವಾ ಸೆಕ್ಸ್.. ಯಾವುದನ್ನು‌ ಬಿಟ್ಟು ಪ್ರಿಯಾಂಕಾ ಇರ್ತಾರೆ! ಅವರೇ ಹೇಳಿದ್ದಾರೆ ನೋಡಿ..

Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ಲಂಡನ್‌ನಲ್ಲಿ ವಾಸಿಸುತ್ತಿರುವಾಗ ಯುಎಸ್‌ನಲ್ಲಿ ಲೇಟ್‌ ನೈಟ್ ಟಾಕ್ ಶೋನಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೆಲವು ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಅವರಿ ಈ ಶೋನಲ್ಲಿ ತೀರಾ ಖಾಸಗಿ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 

Written by - Chetana Devarmani | Last Updated : Jun 14, 2023, 12:14 PM IST
  • ಲೇಟ್‌ ನೈಟ್ ಟಾಕ್ ಶೋನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ
  • ಕ್ರೇಜಿ ಪ್ರಶ್ನೆಗಳಿಗೆ ನಟಿ ಪ್ರಿಯಾಂಕಾ ಚೋಪ್ರಾ ಉತ್ತರ ನೋಡಿ
  • ಚೀಸ್ ಅಥವಾ ಸೆಕ್ಸ್.. ಯಾವುದನ್ನು‌ ಬಿಟ್ಟು ಪ್ರಿಯಾಂಕಾ ಇರ್ತಾರೆ!
ಚೀಸ್ ಅಥವಾ ಸೆಕ್ಸ್.. ಯಾವುದನ್ನು‌ ಬಿಟ್ಟು ಪ್ರಿಯಾಂಕಾ ಇರ್ತಾರೆ! ಅವರೇ ಹೇಳಿದ್ದಾರೆ ನೋಡಿ.. title=
Priyanka Chopra

Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ಯುಎಸ್‌ನಲ್ಲಿ ಲೇಟ್‌ ನೈಟ್‌ ಟಾಕ್ ಶೋನಲ್ಲಿ ಭಾಗಿಯಾದಾಗ ಹಲವು ಖಾಸಗಿ ವಿಚಾರಗಳ ಬಗ್ಗೆ ಮಾತನಾಡಿದ್ದರು. ಲಂಡನ್‌ನಲ್ಲಿ ವಾಸಿಸುತ್ತಿರುವಾಗ ಅವರು ಯುಎಸ್‌ನಲ್ಲಿ ಈ ಲೇಟ್‌ ನೈಟ್‌ ಟಾಕ್ ಶೋನಲ್ಲಿ ಭಾಗಿಯಾಗಿದ್ದರು. ಈ ಹಾಲಿವುಡ್‌ನ ಶೋನಲ್ಲಿ ತೀರ ಖಾಸಗಿ ವಿಷಯಗಳ ಬಗ್ಗೆ ಅವರಿಗೆ ಪ್ರಶ್ನೆಗಳನ್ನು ಕೇಳಲಾಯಿತು. 

ಬಾಲಿವುಡ್‌ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್‌ನ ಖ್ಯಾತ ನಟಿಯರಲ್ಲಿ ಒಬ್ಬರು. ಬಹುವರ್ಷಗಳಿಂದ ಹಾಲಿವುಡ್‌ನಲ್ಲೇ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ ಅವರ ವೆಬ್ ಸರಣಿ ಸಿಟಾಡೆಲ್ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿತ್ತು.  

ಪ್ರಿಯಾಂಕಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಲವ್ ಅಗೇನ್ ಸಿನಿಮಾದ ಪ್ರಚಾರದ ಸಂದರ್ಶನದಲ್ಲಿ, ತೀರಾ ಖಾಸಗಿ ಎನಿಸುವ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಈ ಹಾಲಿವುಡ್‌ ಲೇಟ್‌ ನೈಟ್‌ ಟಾಕ್‌ ಶೋ ಹೆಸರು ವಾಚ್ ವಾಟ್ ಹ್ಯಾಪೆನ್ಸ್ ಲೈವ್ ವಿತ್ ಆಂಡಿ ಕೊವೆನ್. ಇದರಲ್ಲಿ ಪ್ರಿಯಾಂಕಾ ಚೋಪ್ರಾಗೆ ಕೇಳಿದ ಪ್ರಶ್ನೆಯ ಜೊತೆಗೆ ಅದಕ್ಕೆ ಅವರು ಕೊಟ್ಟ ಉತ್ತರು ಭಾರಿ ಕ್ರೇಜಿಯಾಗಿತ್ತು. ಈ ಶೋನಲ್ಲಿ ಲವ್ ಅಗೇನ್ ಸಿನಿಮಾದ ಸಹನಟ ಸ್ಯಾಮ್ ಹ್ಯೂಗನ್ ಕೂಡ ಭಾಗವಹಿಸಿದ್ದರು. 

ಇದನ್ನೂ ಓದಿ: ವಿವಾದ ಸೃಷ್ಟಿಸಿದ ಏಕ್ತಾ ಕಪೂರ್ 'ಗಂಧೀಬಾತ್​' ಪೋಸ್ಟರ್..‌ ಲಕ್ಷ್ಮೀ ದೇವಿಗೆ ಇದೆಂಥ ಅವಮಾನ! ​

ಶೋನ ನಿರೂಪಕ ಆಂಡಿ ಕೊವೆನ್ ಕಾರ್ಯಕ್ರಮದಲ್ಲಿ, ಚೀಸ್ ಮತ್ತು ಓರಲ್ ಸೆಕ್ಸ್ ಇವೆರಡರಲ್ಲಿ ಯಾವುದಾದರೂ ಒಂದನ್ನು ಜೀವನ ಪರ್ಯಂತ ತೊರೆಯಬೇಕು ಎಂದರೆ ಯಾವುದನ್ನು ತ್ಯಜಿಸುವಿರಿ? ಎಂದು ಕೇಳುತ್ತಾರೆ. ಪ್ರಿಯಾಂಕಾ ಚೋಪ್ರಾ ಈ ಪ್ರಶ್ನೆ ಕೇಳಿದ ತಕ್ಷಣ ನಗಲು ಪ್ರಾರಂಭಿಸುತ್ತಾರೆ. ಆಗ ಸ್ಯಾಮ್ ಹ್ಯೂಗನ್, "ಚೀಸ್‌ ನನಗೆ ತುಂಬಾ ಇಷ್ಟ. ಆದರ್ರೂ ಸಹ ನಾನು ಚೀಸ್‌ ಅನ್ನೇ ತೊರೆಯುವೆ" ಎಂದು ಹೇಳುತ್ತಾರೆ. ಆಗ ಪ್ರಿಯಾಂಕಾ ಚೋಪ್ರಾ, "ಸ್ಯಾಮ್ ಅವರ ಅಭಿಪ್ರಾಯವನ್ನು ನಾನು ಸಹ ಒಪ್ಪುತ್ತೇನೆ" ಎನ್ನುತ್ತಾರೆ. ಹೀಗೆ ಹೇಳುವ ಮೂಲಕ ಪ್ರಿಯಾಂಕಾ ಚೀಸ್‌ ಅನ್ನೇ ತೊರೆಯುವೆ ಎನ್ನುತ್ತಾರೆ. 

ನಂತರ ಸೆಲೆಬ್ರಿಟಿ ಆದ ಮೇಲೆ BF ಅಥವಾ GF ಬೆತ್ತಲೆ ಚಿತ್ರಗಳನ್ನು ಕಳಿಸೋದು ನಿಮಗೆ ಓಕೆನಾ? ಎಂದು ನಿರೂಪಕ ಕೇಳುತ್ತಾರೆ. ಇದಕ್ಕೆ ಪ್ರಿಯಾಂಕಾ ಹಾಗೂ ಸ್ಯಾಮ್ ಓಕೆ ಎನ್ನುತ್ತಾರೆ. ಇಂತಹ ಇನ್ನೂ ಅನೇಕ ಫನ್ನಿ ಮತ್ತು ಕ್ರೇಜಿ ಪ್ರಶ್ನೆಗಳನ್ನು ಶೋನ ನಿರೂಪಕ ಆಂಡಿ ಕೊವೆನ್ ಅವರು ಪ್ರಿಯಾಂಕಾ ಹಾಗೂ ಸ್ಯಾಮ್ ಇಬ್ಬರೊಗೂ ಕೇಳಿದ್ದರು. 

ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಪುಣ್ಯತಿಥಿ : ದುರಂತ ಅಂತ್ಯ ಕಂಡ ನಟನ ಅದ್ಭುತ ಸಿನಿಮಾಗಳಿವು..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News