ಚಮಕ್ ನೀಡಲಿದೆ 'ಚಮಕ್' ಟೀಸರ್

ಗಣೀ ಪುತ್ರಿ 'ಚಾರಿತ್ರ್ಯ' ನೀಡಲಿದ್ದಾಳೆ ಚಮಕ್.

Last Updated : Nov 27, 2017, 03:44 PM IST
ಚಮಕ್ ನೀಡಲಿದೆ 'ಚಮಕ್' ಟೀಸರ್  title=
Pic: Youtube

ಸಿಂಪಲ್ ಸುನಿ ನಿರ್ದೇಶನದ, ಟಿ.ಆರ್. ಚಂದ್ರಶೇಖರ್ ನಿರ್ಮಾಣದ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕ ಮಂದಣ್ಣ ಅಭಿನಯದ ಚಮಕ್ ಚಿತ್ರದ ಈಗ ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದ ಮೊದಲ ಟೀಸರ್ ಇಂದು ಚಮಕ್ ನೀಡಲು ಸಿದ್ಧವಾಗಿದೆ. 

ಹೌದು, ಚಮಕ್ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿ ವರ್ಷವೇ ಕಳೆದರೂ ಅದರ ಟೀಸರ್ ಆಗಲಿ ಅಥವಾ ಟ್ರೇಲರ್ ಆಗಲಿ ಬಿಡುಗಡೆಗೊಂಡಿರಲಿಲ್ಲ.  ಇದೀಗ ಪ್ರೇಕ್ಷಕರಿಗೆ ಚಮಕ್ ನೀಡಲು ಇಂದು ಸಂಜೆ 6ಗಂಟೆಗೆ ಬಿಡುಗಡೆಗೊಳ್ಳಲಿದೆ 'ಚಮಕ್' ಚಿತ್ರದ ಟೀಸರ್. 

ಈ ಚಿತ್ರದ ವಿಶೇಷವೆಂದರೆ ಇದುವರೆಗೂ ಲವರ್ ಬಾಯ್ ಆಗಿ, ಹುಡುಗಾಟದ ಹುಡುಗನಾಗಿ ಕಾಣಿಸಿಕೊಂಡಿದ್ದ ಗಣೀ ಮೊದಲ ಬಾರಿಗೆ ಸ್ಕೆತಸ್ಕೋಪ್ ಹಿಡಿದು ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಗಣೀ ಪುತ್ರಿ 'ಚಾರಿತ್ರ್ಯ' ಕೂಡ ಚಮಕ್ ನೀಡಲಿದ್ದಾಳೆ. ಇನ್ನು ಮುದ್ದು ಮುಖದ ರಶ್ಮಿಕ ಮಂದಣ್ಣ ಸಹ ಎಲ್ಲರ ಮೊಗದಲ್ಲಿ ಮಂದಹಾಸ ಬೀರಿಸಲಿದ್ದಾರೆ.

Trending News