Janhvi Kapoor workout routine: ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಪುತ್ರಿ ಹಾಗೂ ಬಾಲಿವುಡ್‌ನ ಯುವ ನಾಯಕಿ ಜಾನ್ವಿ ಕಪೂರ್ ಸದ್ಯ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಜಾನ್ವಿ ಕಪೂರ್ ಟಾಲಿವುಡ್‌ನ ಬಹು ನಿರೀಕ್ಷಿತ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಟಾಲಿವುಡ್ ಯಂಗ್ ಟೈಗರ್ ಎನ್ ಟಿಆರ್ ಜೊತೆ ‘ದೇವರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಪೋಸ್ಟರ್ ಆಕರ್ಷಕವಾಗಿದೆ. ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ಟಾಲಿವುಡ್ ನಲ್ಲಿ ಜಾನ್ವಿ ಕಪೂರ್ ಹೆಸರು ಸದ್ದು ಮಾಡುತ್ತಿದೆ.
ಇದನ್ನೂ ಓದಿ: ವೇಶ್ಯಾವಾಟಿಕೆಗೆ ಇಳಿದ ಸ್ಟಾರ್ ಹೀರೋಯಿನ್..!
ಈ ಸಂದರ್ಭದಲ್ಲಿ ಜಾನ್ವಿ ಕಪೂರ್ ಫಿಟ್ನೆಸ್, ಸೌಂದರ್ಯ ರಹಸ್ಯಗಳು ಮತ್ತು ವರ್ಕೌಟ್‌ಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ವಿವರಗಳು ವೈರಲ್ ಆಗಿವೆ. ಜಾನ್ವಿ ಕಪೂರ್ ರನ್ನಿಂಗ್, ಸೈಕ್ಲಿಂಗ್, ನೃತ್ಯ ಮತ್ತು 45 ನಿಮಿಷಗಳ ಕಾಲ ಕಾರ್ಡಿಯೋ ವರ್ಕೌಟ್ ಮಾಡುತ್ತಾರೆ. ಯೋಗವನ್ನೂ ಸಹ ಜಾನ್ವಿ ಅಭ್ಯಾಸ ಮಾಡುತ್ತಾರೆ. ಸ್ಕ್ವಾಟ್‌ಗಳು, ಪುಶ್ ಅಪ್‌ಗಳು ಮತ್ತು ಇತರ ಸಾಮಾನ್ಯ ವ್ಯಾಯಾಮಗಳನ್ನು ಸಹ ಮಾಡುತ್ತಾರೆ.
ಇನ್ನೂ ಜಾನ್ವಿ ಡಯೆಟ್‌ನಲ್ಲಿ ಪ್ರತಿದಿನ ಬೆಳಗ್ಗೆ ಒಂದು ಚಮಚ ದೇಸಿ ತುಪ್ಪವನ್ನು ಕುಡಿಯುತ್ತಾರೆ. ಬ್ಲಾಕ್ ಕಾಫಿಯನ್ನು ಸಹ ಬೆಳಿಗ್ಗೆ ತೆಗೆದುಕೊಳ್ಳುತ್ತಾರೆ. ಬೆಳಗಿನ ಉಪಾಹಾರದಲ್ಲಿ ತಾಜಾ ಹಣ್ಣುಗಳನ್ನು ಮಾತ್ರ ಸೇವಿಸುತ್ತಾರೆ. ರೊಟಿ, ಪಾಲಕ್, ಮೇಥಿ ಹೀಗೆ ತರಕಾರಿ ಸೇವನೆ ಮಾಡುತ್ತಾರೆ. ಮಧ್ಯಾಹ್ನ ಮತ್ತು ರಾತ್ರಿ ಪನೀರ್, ತರಕಾರಿಗಳು, ಚಿಕನ್ ನಂತಹ ಲಘು ಆಹಾರವನ್ನು ಸೇವಿಸುತ್ತಾರೆ.
ಇದನ್ನೂ ಓದಿ: Sagar Biligowda: ಯುಗಾದಿ ಹಬ್ಬದಂದು ಮನೆಗೆ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡ ಸತ್ಯ ಸೀರಿಯಲ್ ನಟ!