BBK 10: ಬಿಗ್‌ಬಾಸ್‌ನಲ್ಲಿ ಗ್ಯಾಂಗ್‌ ಕಟ್ಟಿಕೊಂಡು ಗೆಲ್ತೀವಿಯೆಂದ ಟೀಂ; ಅದೇ ಗುಂಪಿನಿಂದ ಒಬ್ಬೊಬ್ಬರೇ ಔಟ್!

Bigg  Boss Kannada 10: ಬಿಗ್‌ಬಾಸ್‌ ಮನೆಯಲ್ಲಿ ‘ಟಾಪ್​ ಐದರಲ್ಲಿ ನಾವೇ ಇರೋಣ’ ಎಂದು ಬೀಗಿದ್ದ ವಿನಯ್ ಗ್ಯಾಂಗ್‌ನಲ್ಲಿ ಟೀಂನಿಂದ ಒಬ್ಬೊಬ್ಬರಾಗಿಯೇ ದೊಡ್ಮನೆಯಿಂದ ಎಲಿಮಿನೇಟ್‌ ಆಗುತ್ತಿದ್ದು, ಸದ್ಯ ಆ ಗುಂಪಿನಲ್ಲಿ ವಿನಯ್‌ ಹಾಗೂ ನಮ್ರತಾ ಮಾತ್ರ ಉಳಿದಿದ್ದಾರೆ. 

Written by - Zee Kannada News Desk | Last Updated : Dec 11, 2023, 12:01 PM IST
  • ಬಿಗ್‌ಬಾಸ್‌ ಶೋನ ಟಾಪ್​ 5ರಲ್ಲಿ ನಾವೇ ಇರೋದು ಎಂದು ಬೀಗಿದ್ದವರೆಲ್ಲ ಒಬ್ಬೊಬ್ಬರೇ ಮನೆಯಿಂದ ಹೊರ ಹೋಗುತ್ತಿದ್ದಾರೆ.
  • ಬಿಗ್‌ಬಾಸ್​ ವಾರದ ಟಾಸ್ಕ್​ ಆಡಲು ತಂಡದವೊಂದನ್ನು ರೂಪಿಸಿದ್ದು, ಈ ತಂಡದಲ್ಲಿ ನಮ್ರತಾ, ವಿನಯ್, ಸ್ನೇಹಿತ್, ಇಶಾನಿ, ತುಕಾಲಿ ಸಂತೋಷ್, ರಕ್ಷಕ್ ಹಾಗೂ ನೀತು ವನಜಾಕ್ಷಿ ಇದ್ದರು.
  • ಬಿಗ್‌ಬಾಸ್‌ ಮನೆಯಿಂದ ಸ್ನೇಹಿತ್‌ ಹೊರಗೆ ಹೋಗುವಾಗ ವಿನಯ್ ಹಾಗೂ ನಮ್ರತಾ ಕಣ್ಣೀರು ಹಾಕಿದ್ದಾರೆ.
BBK 10: ಬಿಗ್‌ಬಾಸ್‌ನಲ್ಲಿ ಗ್ಯಾಂಗ್‌ ಕಟ್ಟಿಕೊಂಡು ಗೆಲ್ತೀವಿಯೆಂದ ಟೀಂ; ಅದೇ ಗುಂಪಿನಿಂದ ಒಬ್ಬೊಬ್ಬರೇ ಔಟ್! title=

Vinay Team In BBK: ಬಿಗ್‌ಬಾಸ್ ಕನ್ನಡ ಸೀಸನ್ 10 ಆರಂಭವಾಗಿ 9 ವಾರಗಳು ಕಳಿದಿದ್ದು, ಇಲ್ಲಿಯವರೆಗೆ ಅನೇಕರು ದೊಡ್ಮನೆಯಿಂದ ಔಟ್​ ಆಗಿದ್ದಾರೆ. ನಿನ್ನೆಯ ಎಪಿಸೋಡ್‌ನಲ್ಲಿ ಸ್ನೇಹಿತ್ ಗೌಡ ಎಲಿಮಿನೇಟ್ ಆಗಿದ್ದು, ಇದು ವಿನಯ್ ಗೌಡ ಹಾಗೂ ನಮ್ರತಾ ಗೌಡಗೆ ಶಾಕ್ ನೀಡಿದೆ. ಬಿಗ್‌ಬಾಸ್‌ ಶೋನ ಟಾಪ್​ 5ರಲ್ಲಿ ನಾವೇ ಇರೋದು ಎಂದು ಬೀಗಿದ್ದವರೆಲ್ಲ ಒಬ್ಬೊಬ್ಬರೇ ಮನೆಯಿಂದ  ಹೊರ ಹೋಗುತ್ತಿದ್ದಾರೆ. ಬಿಗ್‌ಬಾಸ್‌ ಕಾರ್ಯಕ್ರಮದ ಆರಂಭದಲ್ಲಿ ಸಮರ್ಥರು, ಅಸಮರ್ಥರು ಎಂದು ಎರಡು ಟೀಂ ಮಾಡಲಾಗಿದ್ದು, ಸಮರ್ಥರ ಸಾಲಿನಲ್ಲಿ ವಿನಯ್, ಸ್ನೇಹಿತ್, ನಮ್ರತಾ ಮೊದಲಾದವರು ಇದ್ದು, ಇವರ ಮಧ್ಯೆ ಫ್ರೆಂಡ್‌ಶಿಪ್ ಬೆಳೆಯಿತು. 

ಬಳಿಕ ಬಿಗ್‌ಬಾಸ್​ ವಾರದ ಟಾಸ್ಕ್​ ಆಡಲು ತಂಡದವೊಂದನ್ನು ರೂಪಿಸಿದ್ದು, ಈ ತಂಡದಲ್ಲಿ ನಮ್ರತಾ, ವಿನಯ್, ಸ್ನೇಹಿತ್, ಇಶಾನಿ, ತುಕಾಲಿ ಸಂತೋಷ್, ರಕ್ಷಕ್ ಹಾಗೂ ನೀತು ವನಜಾಕ್ಷಿ ಇದ್ದರು.ವಿನಯ್ ಎಲ್ಲರನ್ನೂ ಕರೆದು ಫಿನಾಲೆ ಬಗ್ಗೆ ಮಾತನಾಡಿ, ‘ಸ್ಟ್ರೆಟಜಿ ಮಾಡೋಣ . ನಮ್ಮ ವಿರುದ್ಧ ತಂಡದ ಒಬ್ಬೊಬ್ಬರನ್ನು ನಾಮಿನೇಟ್ ಮಾಡೋಣ. ಈ ಮೂಲಕ ಒಬ್ಬೊಬ್ಬರನ್ನೇ ಹೊರಗೆ ಹಾಕುತ್ತಾ ಬರೋಣ. ಫಿನಾಲೆ ಸಂದರ್ಭದಲ್ಲಿ ಟಾಪ್​ ಐದರಲ್ಲಿ ನಾವೇ ಇರಬೇಕು’ ಎಂದು ಹೇಳಿದ್ದರು. ಯಾವಾಗ ಈ ಮಾತನ್ನು ಹೇಳಿರೋ ಆ ತಂಡದವರೇ ಒಬ್ಬೊಬ್ಬರಾಗಿ ಬಿಗ್‌ಬಾಸ್‌ ಆಟದಿಂದ ಔಟ್ ಆಗೋಕೆ ಶುರುವಾದರು.

ಇದನ್ನೂ ಓದಿ: BBK 10: ಭಾವದ ಮಳೆಯಲ್ಲಿ ಭರಪೂರ ನೆನೆದ ದೊಡ್ಮನೆ ಮಂದಿ.. ಸ್ಪರ್ಧಿಗಳ ಮನದಾಳದ ಮಾತಿಗೆ ಕಿವಿಯಾದ ಬಿಗ್‌ಬಾಸ್!

ವಿನಯ್‌ ತಂಡದ ರಕ್ಷಕ್‌ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡರೂ ಒಂದೇ ತಿಂಗಳಿಗೆ ಬಿಗ್‌ಬಾಸ್‌ ಮನೆಯಿಂದ ಔಟ್ ಆದರು. ಬಳಿಕ ನೀತು  ತಂಡ ಬದಲಿಸಿದರೂ ಸಹ, ಇವರು ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆದರು. ಬಳಿಕ ಬಿಗ್‌ಬಾಸ್‌ನಿಂದ ಇಶಾನಿ ಕೂಡ ಹೊರಬಂದರು. ಅದೇ ರೀತಿ ಇದೀಗ ಸ್ನೇಹಿತ್ ಗೌಡ ಕೂಡ ಎಲಿಮಿನೇಟ್ ಆಗಿದ್ದಾರೆ. ಬಿಗ್‌ಬಾಸ್‌ನಲ್ಲಿ ಸ್ನೇಹಿತ್ ಗೌಡ ಹೇಳಿಕೊಳ್ಳುವಂಥ ಪರ್ಫಾರ್ಮೆನ್ಸ್ ನೀಡದೆ, ಕ್ಯಾಪ್ಟನ್ ಆಗಿ ತಾವು ಒಳ್ಳೆಯ ಪರ್ಫಾರ್ಮೆನ್ಸ್ ನೀಡುವ ಅವಕಾಶ ಅವರಿಗೆ ಇತ್ತು. ಆದರೆ, ಅದು ಸಾಧ್ಯವಾಗದೆ, ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಸಂಪೂರ್ಣವಾಗಿ ಎಡವಿದ್ದರಿಂದ ದೊಡ್ಮನೆಯಿಂದ ಔಟ್ ಆಗಿದ್ದಾರೆ. 
ಸದ್ಯ ತುಕಾಲಿ ಸಂತೋಷ್ ಮಾತ್ರ ತಂಡ ಬದಲಿಸಿ ಸದ್ಯ ಬಚಾವ್ ಆಗಿದ್ದಾರೆ. 

ಬಿಗ್‌ಬಾಸ್‌ ಮನೆಯಿಂದ ಸ್ನೇಹಿತ್‌ ಹೊರಗೆ ಹೋಗುವಾಗ ವಿನಯ್ ಹಾಗೂ ನಮ್ರತಾ ಕಣ್ಣೀರು ಹಾಕಿದ್ದಾರೆ.‘ಟಾಪ್​ ಐದರಲ್ಲಿ ನಾವೇ ಇರೋಣ’ ಎಂದು ಬೀಗಿದ್ದ ವಿನಯ್ ಗ್ಯಾಂಗ್‌ನಲ್ಲಿ, ಇದೀಗ  ಉಳಿದುಕೊಂಡಿದ್ದು ನಮ್ರತಾ ಹಾಗೂ ವಿನಯ್ ಮಾತ್ರ. ನಮ್ರತಾ ಒಂದು ವಾರ ಮಾತ್ರ ಉತ್ತಮ ಪ್ರದರ್ಶನ ನೀಡಿದ್ದು, ಇದಾದ ಬಳಿಕ ಮತ್ತೆ ಗ್ಯಾಂಗ್ ಕಟ್ಟಿಕೊಂಡು ಮೊದಲಿನ ಕಳಪೆ ಆಟ ತೋರಿಸಿದ್ದರು. ಹೀಗಾದರೆ ಅವರು ಕೂಡ ಸದ್ಯದಲ್ಲೇ ಔಟ್ ಆಗಲಿದ್ದಾರೆ. ಈ ಮೂಲಕ ವಿನಯ್ ಒಬ್ಬಂಟಿ ಆಗಲಿದ್ದಾರೆ. ಇತ್ತ ವಿನಯ್ ಗೌಡ ಗೇಮ್ ಆಡುವಾಗ ಸಾಕಷ್ಟು ಅಗ್ರೆಸ್ಸಿವ್​ನೆಸ್​ ತೋರಿಸುತ್ತಿದ್ದು, ಇದು ವೀಕ್ಷಕರಿಗೆ ಇಷ್ಟ ಆಗುತ್ತಿಲ್ಲ. ಇವರು ಕೂಡ ಇನ್ನುಮುಂದೆ ಎಚ್ಚರಿಕೆಯ ಆಟ ಆಡಬೇಕು. ಇಲ್ಲವಾದಲ್ಲಿ ಅವರು ಕೂಡ ಎಲಿಮಿನೇಟ್ ಆಗಲಿದ್ದಾರೆ. ಫಿನಾಲೆಯಲ್ಲಿ ಕಪ್ ಗೆಲ್ಲಬೇಕು ಎನ್ನುವ ಕನಸು ಕನಸಾಗಿಯೇ ಉಳಿಯುತ್ತದೆ. ಇನ್ನಾದರೂ ನಮ್ರತಾ ಹಾಗೂ ವಿನಯ್ ಪಾಠ ಕಲಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News