Bigg Boss 10 ಕ್ಕೆ ಬರೋ ಆಸೆನೇ ಇರ್ಲಿಲ್ಲ, ಆದ್ರೆ ಸ್ನೇಹಿತ್‌ ಬಿಗ್‌ಬಾಸ್‌ಗೆ ಬಂದಿದ್ದೇ ಇವರಿಗಾಗಿ!

Bigg Boss Snehith Gowda: ಎಲಿಮಿನೇಷನ್‌ ಆಗಿ ಹೊರಬಂದ ಬಳಿಕ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿರುವ ಸ್ನೇಹಿತ್‌ ಒಂದು ಮುಖ್ಯವಾದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 

Written by - Chetana Devarmani | Last Updated : Dec 17, 2023, 07:17 AM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10
  • ಬಿಗ್‌ ಬಾಸ್‌ 10 ರ ಸ್ಪರ್ಧಿ ಸ್ನೇಹಿತ್‌
  • ಸ್ನೇಹಿತ್‌ ಬಿಗ್‌ಬಾಸ್‌ಗೆ ಬಂದಿದ್ದೇ ಇವರಿಗಾಗಿ!
Bigg Boss 10 ಕ್ಕೆ ಬರೋ ಆಸೆನೇ ಇರ್ಲಿಲ್ಲ, ಆದ್ರೆ ಸ್ನೇಹಿತ್‌ ಬಿಗ್‌ಬಾಸ್‌ಗೆ ಬಂದಿದ್ದೇ ಇವರಿಗಾಗಿ!  title=

Bigg Boss Snehith Gowda: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಸ್ಪರ್ಧಿ ಸ್ನೇಹಿತ್‌ ಕಳೆದ ವಾರ ಮನೆಯಿಂದ ಎಲಿಮಿನೇಟ್‌ ಆದರು. ಬಿಗ್‌ ಬಾಸ್‌ ಮನೆಯಲ್ಲಿ ಸ್ನೇಹಿತ್‌ ಎರಡು ಬಾರಿ ಕ್ಯಾಪ್ಟನ್‌ ಆದರು. ನಮ್ರತಾ ಮತ್ತು ವಿನಯ್‌ ಜೊತೆಗೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದರು. ಮೊದ ಮೊದಲು ಮನೆಯವರೆಲ್ಲ ಸ್ನೇಹಿತ್‌ ಬೆಸ್ಟ್‌ ಎನ್ನುತ್ತಿದ್ದರು. ಆದರೆ ದಿನ ಕಳೆದಂತೆ ಈ ಅಭಿಪ್ರಾಯವೇ ಬದಲಾಯಿತು. ಸ್ನೇಹಿತ್‌ ಆಟದ ವರಸೆಯೂ ಬದಲಾಯ್ತು. ಎಲ್ಲೋ ಒಂದು ಕಡೆ ಅವರು ಕೇವಲ ಕೆಲ ಜನರಿಗೆ ಮಾತ್ರ ಸೀಮಿತವಾಗಿ ಉಳಿದರು. ಇದೇ ಅವರ ಎಲಿಮಿನೇಷನ್‌ಗೆ ಕಾರಣ ಎಂಬುದು ಬಿಗ್‌ ಬಾಸ್‌ ವೀಕ್ಷಕರ ಅಭಿಪ್ರಾಯವಾಗಿದೆ. 

ಎಲಿಮಿನೇಷನ್‌ ಆಗಿ ಹೊರಬಂದ ಬಳಿಕ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿರುವ ಸ್ನೇಹಿತ್‌ ಒಂದು ಮುಖ್ಯವಾದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅಸಲಿಗೆ ಬಿಗ್‌ ಬಾಸ್‌ ಗೆ ಹೋಗೋಕೆ ಸ್ನೇಹಿತ್‌ ಅವರಿಗೆ ಆಸೆನೇ ಇರಲಿಲ್ಲವಂತೆ. ಬಿಗ್‌ ಬಾಸ್‌ ಎಂಟ್ರಿ ಬಗ್ಗೆ ಮಾತನಾಡಿರುವ ಸ್ನೇಹಿತ್‌, ನಾನು ಬಿಗ್‌ ಬಾಸ್‌ ಗೆ ಹೋಗೋದು ನನ್ನ ಚಾಯ್ಸ್‌ ಅಲ್ಲ. ನನಗೆ ಹೋಗೋಕೆ ಆಸೆನೂ ಇರಲಿಲ್ಲ ಎಂದಿದ್ದಾರೆ. 

ಇದನ್ನೂ ಓದಿ: ಡಿವೋರ್ಸ್ ಬಳಿಕ ಐಶ್ವರ್ಯಾಗೆ ಅಭಿಷೇಕ್ ಎಷ್ಟು ಜೀವನಾಂಶ ನೀಡಬೇಕು?

ನಿಜ ಹೇಳಬೇಕೆಂದರೆ ನನ್ನ ಅಮ್ಮನಿಗೆ ಬಿಗ್‌ ಬಾಸ್‌ ಕ್ರೇಜ್‌ ಜಾಸ್ತಿ. ಅವರು ಮೊದಲ ಸೀಸನ್‌ನಿಂದಲೂ ಬಿಗ್‌ ಬಾಸ್‌ ನೋಡಿಕೊಂಡು ಬಂದಿದ್ದಾರೆ. ಅವರಿಗೆ ತನ್ನ ಮಗ ಬಿಗ್‌ ಬಾಸ್‌ಗೆ ಹೋಗಬೇಕು, ಟಿವಿಯಲ್ಲಿ ಬರಬೇಕು ಎಂಬ ಆಸೆಯಿತ್ತು ಎಂದು ಸ್ನೇಹಿತ್‌ ಹೇಳಿದ್ದಾರೆ. 

ತಮ್ಮ ಆಟದ ಮೂಲಕ ಛಾಪು ಮೂಡಿಸಿದ ಸ್ನೇಹಿತ್‌ ಬಿಗ್‌ ಬಾಸ್‌ಗೆ ಹೋಗಬೇಕೆಂಬುದು ಅವರ ತಾಯಿಯ ಆಸೆಯಾಗಿತ್ತು. ಅಪ್ಪ - ಅಮ್ಮನ ಆಸೆ ಈಡೇರಿಸಲು ಸ್ನೇಹಿತ್‌ ಬಿಗ್‌ ಬಾಸ್‌ಗೆ ಹೋಗಿದ್ದಾಗಿ ಜೀ ಕನ್ನಡ ನ್ಯೂಸ್‌ಗೆ ತಿಳಿಸಿದ್ದಾರೆ. 

ಇದನ್ನೂ ಓದಿ: ಬಿಗ್‌ಬಾಸ್‌ ಮನೆಯ ವಾರದ ಕಳಪೆ ಪಟ್ಟಕ್ಕೇರಿದ ಪವಿ ಪೂವಪ್ಪ: ಉತ್ತಮ ಸ್ಥಾನಗಳಿಸಿದ ತುಕಾಲಿ ಸಂತು! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News