Shobha Shetty: ಎಲಿಮಿನೇಟ್‌ ಆದ್ರೂ ಸಂಭಾವನೆಯಲ್ಲಿ ದಾಖಲೆ ಸೃಷ್ಟಿಸಿದ ಬಿಗ್‌ ಬಾಸ್‌ ಸ್ಪರ್ಧಿ ಈಕೆ!

Bigg Boss: ಈಗಾಗಲೇ ಆರು ಸೀಸನ್‌ಗಳು ಯಶಸ್ವಿಯಾಗಿ ಮುಗಿಸಿದ ತೆಲುಗು ಬಿಗ್‌ ಬಾಸ್‌ ಏಳನೇ ಸೀಸನ್‌ ಕಂಪ್ಲೀಟ್‌ ಮಾಡುತ್ತಿದೆ.. ಸದ್ಯ 14ನೇ ವಾರದ ಎಲಿಮಿನೇಷನ್ ಅಂಗವಾಗಿ ಕನ್ನಡದ ಕಿರುತೆರೆ ನಟಿ ಶೋಭಾ ಶೆಟ್ಟಿ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗಿದೆ.. ಆದರೆ ಈ ಸ್ಪರ್ಧಿ ಮನೆಯಿಂದ ಹೊರಬಂದ ಮೇಲೂ ದಾಖಲೆ ಬರೆದಿದ್ದಾರೆ..   

Written by - Savita M B | Last Updated : Dec 10, 2023, 12:14 PM IST
  • ಎಲ್ಲರ ಅಚ್ಚುಮೆಚ್ಚಿನ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌
  • ಈಗಾಗಲೇ ಆರು ಸೀಸನ್‌ಗಳು ಯಶಸ್ವಿಯಾಗಿ ಮುಗಿಸಿದ ತೆಲುಗು ಬಿಗ್‌ ಬಾಸ್‌
  • 14ನೇ ವಾರದ ಎಲಿಮಿನೇಷನ್ ಅಂಗವಾಗಿ ಕನ್ನಡದ ಕಿರುತೆರೆ ನಟಿ ಶೋಭಾ ಶೆಟ್ಟಿ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗಿದೆ..
Shobha Shetty: ಎಲಿಮಿನೇಟ್‌ ಆದ್ರೂ ಸಂಭಾವನೆಯಲ್ಲಿ ದಾಖಲೆ ಸೃಷ್ಟಿಸಿದ ಬಿಗ್‌ ಬಾಸ್‌ ಸ್ಪರ್ಧಿ ಈಕೆ!   title=

Bigg Boss Shobha Shetty: ಎಲ್ಲರ ಅಚ್ಚುಮೆಚ್ಚಿನ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ತೆಲುಗು ಭಾಷೆಯಲ್ಲೂ ಪ್ರಸಾರವಾಗುತ್ತಿದ್ದು.. ಈಗಾಗಲೇ ಆರು ಸೀಸನ್‌ಗಳು ಯಶಸ್ವಿಯಾಗಿ ಮುಗಿಸಿದೆ.. ಏಳನೇ ಸೀಸನ್ ಸೆಪ್ಟೆಂಬರ್ 3 ರಂದು ಪ್ರಾರಂಭವಾಗಿ ಸದ್ಯ ಅಂತ್ಯಕ್ಕೆ ಬಂದಿದೆ. 14ನೇ ವಾರದ ಎಲಿಮಿನೇಷನ್ ಅಂಗವಾಗಿ ಕನ್ನಡದ ಕಿರುತೆರೆ ನಟಿ ಶೋಭಾ ಶೆಟ್ಟಿ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗಿದೆ.. 

ಬಿಗ್ ಬಾಸ್ ಸೀಸನ್ 6 ರಲ್ಲಿ ಶ್ರೀಸತ್ಯ ಅವರು ತಮ್ಮ ವರ್ತನೆಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳನ್ನು ಎದುರಿಸಿದರು. ಇತ್ತೀಚಿನ ಸೀಸನ್‌ನಲ್ಲಿ, ರಥಿಕಾ ರೋಸ್ ಮತ್ತು ಶೋಭಾ ಶೆಟ್ಟಿ ಅವರನ್ನು ಬಹುಪಾಲು ಪ್ರೇಕ್ಷಕರು ತಿರಸ್ಕರಿಸಿದ್ದಾರೆ..

ಇದನ್ನೂ ಓದಿ-ವೀಕೆಂಡ್‌ ಎಪಿಸೋಡ್‌ನಲ್ಲಿ ಸುಂಟರಾಳಿ; ಮನೆಗೆ ವಾಪಸ್ಸಾದ್ರು ಪ್ರತಾಪ್-ಸಂಗೀತಾ

ಇನ್ನು ಮೊದಲ ವಾರದ ಎಲಿಮಿನೇಷನ್ ಅಂಗವಾಗಿ ನಾಯಕಿ ಕಿರಣ್ ರಾಥೋಡ್ ಮನೆಯಿಂದ ಹೊರ ಹೋಗಿದ್ದರು. ಎರಡನೇ ವಾರದಲ್ಲಿ ಶಕೀಲಾ, ಮೂರನೇ ವಾರದಲ್ಲಿ ಗಾಯಕಿ ದಾಮಿನಿ, ನಾಲ್ಕನೇ ವಾರದಲ್ಲಿ ರಥಿಕಾ ಮತ್ತು ಸುಭಾಶ್ರೀ ಮತ್ತು ಆರನೇ ವಾರದಲ್ಲಿ ನಯನಿ ಪಾವನಿ ಮನೆಯಿಂದ ಎಲಿಮಿನೇಟ್ ಆದರು.

ಎಂಟನೇ ವಾರ ಸಂದೀಪ್ ಮತ್ತು ಒಂಬತ್ತನೇ ವಾರ ಎಲಿಮಿನೇಷನ್ ಭಾಗವಾಗಿ ಟೇಸ್ಟಿ ತೇಜಾ ಮನೆಯಿಂದ ಹೊರನಡೆದರು. ಹತ್ತನೇ ವಾರ ಭೋಲೆ ಮನೆ ಬಿಟ್ಟರು. ಹನ್ನೊಂದನೇ ವಾರದಲ್ಲಿ ಯಾವುದೇ ಎಲಿಮಿನೇಷನ್ ಇಲ್ಲ ಎಂದು ಬಿಗ್ ಬಾಸ್ ಟ್ವಿಸ್ಟ್ ನೀಡಿದರು. ಹಾಗಾಗಿ 11ನೇ ವಾರದಲ್ಲಿ ಯಾರೂ ಎಲಿಮಿನೇಟ್ ಆಗಿಲ್ಲ. ವಾರ 12 ರಂದು ಡಬಲ್ ಎಲಿಮಿನೇಷನ್ ಆದ ಕಾರಣ ಅಶ್ವಿನಿ ಮತ್ತು ರಥಿಕಾ ಮನೆಯಿಂದ ಹೊರಬಂದಿದ್ದು, 13 ನೇ ವಾರದಲ್ಲಿ ಗೌತಮ್ ಮನೆಯಿಂದ ಹೊರಬಂದಿದ್ದಾರೆ ಎಂದು ತಿಳಿದಿದೆ. 14ನೇ ವಾರದಲ್ಲಿ ಶೋಭಾ ಶೆಟ್ಟಿ ಮನೆಯಿಂದ ಹೊರ ಹೋಗಲಿದ್ದಾರೆ ಎನ್ನಲಾಗಿದೆ..

ಇದನ್ನೂ ಓದಿ-Sapthami Gowda : ಸೀರೆಯಲ್ಲಿ ಚಂದನವನದ ಸಿಂಗಾರ ಸಿರಿ..! ಎಷ್ಟು ಕ್ಯೂಟ್‌ ಅಲ್ವಾ ಸಪ್ತಮಿ

14ನೇ ವಾರದ ನಾಮನಿರ್ದೇಶನದ ಅಂಗವಾಗಿ ಅರ್ಜುನ್ ಹೊರತುಪಡಿಸಿ ಎಲ್ಲರೂ ನಾಮಿನೇಟ್ ಆಗಿದ್ದಾರೆ. ಪ್ರಶಾಂತ್, ಶಿವಾಜಿ, ಯವರ್, ಅಮರದೀಪ್, ಪ್ರಿಯಾಂಕಾ ಮತ್ತು ಶೋಭಾ ಶೆಟ್ಟಿ ಈ ವಾರದ ಡೇಂಜರ್‌ ಜೋನ್‌ನಲ್ಲಿದ್ದಾರೆ.. ಆದರೆ ಅವರಲ್ಲಿ ಪ್ರಶಾಂತ್, ಶಿವಾಜಿ, ಅಮರ್ ಮತ್ತು ಪ್ರಿಯಾಂಕಾ ಈಗಾಗಲೇ ಪಾರಾಗಿದ್ದಾರೆ. ಯವರ್ ಮತ್ತು ಶೋಭಾ ಶೆಟ್ಟಿ ಉಳಿದಿದ್ದರು.. ಆದರೆ ಈ ಇಬ್ಬರಲ್ಲಿ ಶೋಭಾ ಶೆಟ್ಟಿ ಕಡಿಮೆ ಮತ ಪಡೆದಿದ್ದರಿಂದ ಅವರೇ ಮನೆಯಿಂದ ಹೊರಹೋಗಿದ್ದಾರೆ ಎನ್ನಲಾಗಿದೆ.. 

ಅದೇನೇ ಇರಲಿ, ಶೋಭಾ ಶೆಟ್ಟಿ ಎಲಿಮಿನೇಟ್ ಆಗಿರುವುದರಿಂದ ಅವರ ಅಭಿಮಾನಿಗಳು ಕೂಡ ಕೊಂಚ ಬೇಸರಗೊಂಡಿದ್ದಾರೆ. ಹಾಗಿದ್ದರೆ ಶೋಭಾ ಶೆಟ್ಟಿ ಈ 14 ವಾರಕ್ಕೆ ತೆಗೆದುಕೊಂಡ ಸಂಭಾವನೆ ಎಷ್ಟು ಎಂಬ ಚರ್ಚೆ ನಡೆಯುತ್ತಿದೆ. ಆದರೆ ಮಾಹಿತಿ ಪ್ರಕಾರ ವಾರಕ್ಕೆ ಎರಡು ಲಕ್ಷದಂತೆ 14 ವಾರಕ್ಕೆ 28 ಲಕ್ಷ ತೆಗೆದುಕೊಂಡಿದ್ದಾಳೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News