Dr. Prayag Raj Spoke About Drone Prathap: ಬಿಗ್‌ಬಾಸ್ ಮನೆಯಲ್ಲಿ ಇತ್ತೀಚಿಗೆ ಸ್ಪರ್ಧಿಗಳು ತಮ್ಮ ಜೀವನದ ಮರೆಯಲಾಗದ ನೋವಿನ ಸಂಗತಿಗಳನ್ನು ಬಿಚ್ಚಿಟ್ಟುತ್ತಿರುವಾಗ, ಡ್ರೋನ್ ಪ್ರತಾಪ್ ಯುವ ವಿಜ್ಞಾನಿ ಎಂದು ಹೇಳಿ ಬಳಿಕ ಸಿಕ್ಕಿಬಿದ್ದು ಸಾಕಷ್ಟು ಟ್ರೋಲ್, ಟೀಕೆಗಳನ್ನು ಎದುರಿಸಿದವರು, ತಮ್ಮ ಜೀವನದ ಕಹಿ ಘಟನೆಗಳನ್ನು ಬಿಚ್ಚಿಡುವಾಗ ತಮಗೆ ಕೋವಿಡ್ ಸೋಂಕು ತಲುಲಿದ ಸಮಯದಲ್ಲಿ ಅನುಭವಿಸಿದ ಘಟನೆಗಳನ್ನು ವಿವರಿಸುತ್ತಾ "ನನಗೆ ಕೋವಿಡ್ ಸೋಂಕು ತಗುಲಿತ್ತು. ಕ್ವಾರಂಟೈನ್ ಮುಗಿಸಿ ಚಿಕ್ಕಮಗಳೂರಿಗೆ ಹೋದೆ. ಆ ಬಳಿಕ ಜನ ಸುಳ್ಳು ಸುದ್ದಿ ಹಬ್ಬಿಸಿದರು. ನಾನು ಕ್ವಾರಂಟೈನ್ ಆಗಿಲ್ಲ ಎಂದು ಠಾಣೆಗೆ ಕರೆದುಕೊಂಡು ಹೋದ್ರು. ನನ್ನನ್ನು ಜೈಲಿನಲ್ಲಿ ಇರಿಸಿದರು. ಪ್ರತಾಪ್ ವಿರುದ್ಧ ಕಂಡಲ್ಲಿ ಗುಂಡು ಆದೇಶ ಇದೆ ಎಂದು ಸುದ್ದಿ ಹಬ್ಬಿಸಲಾಯಿತು. ಇವನು ಸುಳ್ಳ, ಕಳ್ಳ ಅಂತ ಊರಿನವರು ಹೇಳೋಕೆ ಶುರು ಮಾಡಿದರು. ನನಗೆ ಎಲ್ಲರೂ ಸಾಕಷ್ಟು ಹಿಂಸೆ ಕೊಟ್ಟರು. ತಂಗಿನ ಯಾರು ಮದುವೆ ಆಗ್ತಾರೆ ನೋಡ್ತೀವಿ, ನಿಮ್ಮಮ್ಮ ಹುಚ್ಚಿ ತರ ರಸ್ತೆಯಲ್ಲಿ ಅಲೆಯುವಂತೆ ಮಾಡ್ತೀವಿ ಅಂದ್ರು. ನನ್ನನ್ನು ಮಾನಸಿಕ ರೋಗಿ ಎಂದು ಬಿಂಬಿಸುವ ಹುನ್ನಾರ ನಡೆಯಿತು. ನನ್ನ ತಲೆಗೆ ಹೊಡೆದರು " ಎಂದು ಹೇಳಿದ್ದರು.
ಇದೀಗ ಪ್ರತಾಪ್ ಆರೋಪಗಳನ್ನು ಬಿಬಿಎಂಪಿ ನೋಡಲ್ ಅಧಿಕಾರಿ ಡಾ. ಪ್ರಯಾಗ್ ಖಂಡಿಸಿ, ಪ್ರತಾಪ್ ಹೇಳುತ್ತಿರುವುದೆಲ್ಲಾ ಹಳ್ಳಿ ಸುಳ್ಳು. ನಾವು ಆತನನಿಗೆ ಯಾವುದೇ ಹಿಂಸೆ ಕೊಡಲಿಲ್ಲ. ಸುಖಾ ಸುಮ್ಮನೆ ಬಿಗ್‌ಬಾಸ್ ವೇದಿಕೆ ಸಿಕ್ತು ಎಂದು ಆರೋಪ ಮಾಡಿದ್ದಾನೆ. ಆತ ತನ್ನ ಆರೋಪಗಳನ್ನು ಒಪ್ಪಿಕೊಳ್ಳದಿದ್ದರೆ ಮಾನನಷ್ಟ ಮೊಹದ್ದಮೆ ಹೂಡುತ್ತೇನೆ ಎಂದು ಹೇಳಿದ್ದಾರೆ. ಡಾ. ಪ್ರಯಾಗ್ ಯೂಟ್ಯೂಬ್ ಚಾನಲ್‌ನ ಸಂದರ್ಶನವೊಂದರಲ್ಲಿ ಮಾತನಾಡಿದಾಗ, "ಡ್ರೋನ್ ಪ್ರತಾಪ್ ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಜೊತೆಗೆ ಆತನ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಆತ ಹೇಳುವುದು ನಿಜವಾಗಿದ್ದರೆ 3 ವರ್ಷಗಳ ನಂತರ ಹೇಳುವ ಅವಶ್ಯಕತೆ ಇರಲಿಲ್ಲ. ನಾವು ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದಾಗಲೇ ನನ್ನ ಮೇಲೆ ದೂರು ಕೊಡಬಹುದಿತ್ತು. ಒಂದು ವೇಳೆ ನಾನು ಹೊಡೆದಿದ್ದರೆ ಆತ ಪೊಲೀಸರಿಗೆ ಅಥವಾ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಬಹುದಾಗಿತ್ತು" ಎಂದಿದ್ದಾರೆ.
ಇದನ್ನೂ ಓದಿ: BBK 10 : ನನಗೆ ಕೊಡಬಾರದ ಹಿಂಸೆ ಕೊಟ್ಟರು, ಅಲ್ಲದೆ ನನ್ನ ತಂಗಿಯನ್ನ...! ಶಾಕಿಂಗ್ ವಿಚಾರ ಬಿಚ್ಚಿಟ್ಟ ಪ್ರತಾಪ್
ಮತ್ತೆ ಡಾ. ಪ್ರಯಾಗ ಮಾತು ಮುಂದಸುವರೆಸುತ್ತಾ "ನಾವು ಸರ್ಕಾರಿ ಅಧಿಕಾರಿಗಳಾಗಿ ನಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರೆ ನಮ್ಮ ತಪ್ಪಾಗುತ್ತದೆ. ಅಂತಹ ಸಮಯದಲ್ಲಿ ನಮ್ಮ ಕೆಲಸವೇ ಹೋಗುತ್ತದೆ. ಸಾರ್ವಜನಿಕರು ನಮ್ಮ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಬಹುದು. ಆದರೆ 3 ವರ್ಷಗಳ ನಂತರ ಪ್ರತಾಪ್ ಸುಳ್ಳು ಆರೋಪ ಮಾಡುತ್ತಿದ್ದಾನೆ ಇದು ನಿರಾಧಾರ. ಆತ ಬೇಕಿದ್ದರೆ ಸಾಬೀತು ಮಾಡಲಿ.
ಪ್ರತಾಪ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಖಾಸಗಿ ವಾಹಿನಿ ಸ್ಟುಡಿಯೋದಲ್ಲಿ ಕೂತು ಸಂದರ್ಶನದಲ್ಲಿ ಮಾತನಾಡಿದ್ದ. ನಾನು ಕ್ವಾರಂಟೈನ್‌ನಲ್ಲಿ ಇದ್ದರೂ ಇಲ್ಲಿ ಬಂದು ಮಾತನಾಡುತ್ತಿದ್ದೇನೆ ಎಂದು ಹೇಳಿದ್ದ. ಆ ವಿಡಿಯೋ ವೈರಲ್ ಆಗಿ ದೊಡ್ಡದಾಯಿತು. ಆ ಸಮಯದಲ್ಲಿ ನಾವು ಆತನ ಬಗ್ಗೆ ಮಾಹಿತಿ ಕಲೆ ಹಾಕಿದೆವು. ಆತ ಹೇಳುವಂತೆ ಇಡೀ ಪೊಲೀಸ್ ಪಡೆ ಅವನನ್ನು ಸುತ್ತುವರೆದಿರಲಿಲ್ಲ. ಅದೆಲ್ಲ ಸುಳ್ಳು" ಎಂದು ಹೇಳಿದ್ದಾರೆ.
ಡ್ರೋನ್ ಪ್ರತಾಪ್ ಬಗ್ಗೆ ಇನ್ನಷ್ಟು ಹಂಚಿಕೊಳ್ಳುತ್ತಾ "ನಾನು ಆ ದೇಶಕ್ಕೆ ಹೋಗಿದ್ದೆ. ಅಲ್ಲಿ ಡ್ರೋನ್ ತಯಾರಿಸಿದ್ದೆ. ಆ ದೇಶದಲ್ಲಿ ಪ್ರಶಸ್ತಿ ಬಂತು ಅಂತೆಲ್ಲಾ ಹೇಳಿದ್ದ. ನಾವು ವಿಚಾರಣೆ ವೇಳೆ ಅದರ ಸತ್ಯಾಸತ್ಯತೆ ತಿಳಿದುಕೊಂಡಿದ್ದೇವೆ. ಆಯಾ ದೇಶಗಳಿಂದಲೇ ಪ್ರತಾಪ್ ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ನಮಗೆ ಮಾಹಿತಿ ಸಿಕ್ಕಿತ್ತು. ಆತ ಡಿಗ್ರಿ ಮಾಡಿರುವುದು ನನಗೆ ಅನುಮಾನ ಇದೆ. ಆತ ಹೇಳುತ್ತಿರುವುದೆಲ್ಲಾ ಸುಳ್ಳು. ಪ್ರತಾಪ್ ತಂದೆಯವರ ಜೊತೆ ನಾನು ನಮ್ಮ ತಂಡ ಒಳ್ಳೆ ರೀತಿಯಲ್ಲೇ ನಡೆದುಕೊಂಡಿದ್ದೇವೆ. ಕಂಡಲ್ಲಿ ಗುಂಡು ಆದೇಶ ಹೊರಡಿಸಿದ್ದರು ಅಂತಾನೆ. ಅದು ಬರೀ ಭಯೋತ್ಪಾದಕರ ವಿರುದ್ಧ ಕೊಡುವಂತಹ ಆದೇಶ. ಅದಕ್ಕೆ ಹೋಂ ಮಿನಿಸ್ಟರ್ ಅನುಮತಿ ಬೇಕು. ಆತ ಹೇಳುವುದೆಲ್ಲಾ ಸುಳ್ಳು. ಆತ ಬರೀ ವಂಚಕ ಅಷ್ಟೆ. ಆತನ ವಿರುದ್ಧ ಯಾಕೆ ಕಂಡಲ್ಲಿ ಗುಂಡು ಆದೇಶ ಹೊರಡಿಸುತ್ತಾರೆ. ಪ್ರತಾಪ್ ತನ್ನದೇ ಭ್ರಮೆಯಲ್ಲಿ ಬದುಕುತ್ತಿದ್ದಾನೆ. ನನ್ನ ಬಳಿ ಎಲ್ಲಾ ಆಧಾರಗಳು ಇವೆ. ನಾನು ಪ್ರತಾಪ್ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ. ಸುಳ್ಳು ಆರೋಪ ಮಾಡಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ಪ್ರತಾಪ್ ಬಿಗ್‌ಬಾಸ್ ಶೋನಲ್ಲಿ ಹೇಳಿದ ಪ್ರತಿಯೊಂದು ಮಾತು ಸುಳ್ಳು. ಅದನ್ನು ಆತ ಒಪ್ಪಿಕೊಂಡರೆ ಸರಿ. ವೇದಿಕೆ ಸಿಕ್ತು, ಮೈಕ್ ಸಿಕ್ತು ಎಂದು ಮಾತನಾಡುವುದಲ್ಲ. ಅದೇ ಬಿಗ್‌ಬಾಸ್ ಶೋನಲ್ಲಿ ನಾನು ಹೇಳಿದ್ದು ಸುಳ್ಳು ಎಂದು ಪ್ರತಾಪ್ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಒಪ್ಪಿಕೊಳ್ಳುವಂತೆ ನಾನು ಮಾಡ್ತೀನಿ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ" ಎಂದು ಪ್ರಯಾಗ್ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.