Bigg Boss: ಬಿಗ್‌ ಬಾಸ್‌ ಇತಿಹಾಸದಲ್ಲೇ ಇದೇ ಮೊದಲು.. ಖ್ಯಾತ ಸ್ಪರ್ಧಿಗೆ ಸಾರ್ವಜನಿಕವಾಗಿ ಕಹಿ ಅನುಭವ...! ವಿಡಿಯೋ ವೈರಲ್‌

Bigg Boss Viral News: ಬಿಗ್ ಬಾಸ್ ಶೋನಲ್ಲಿ ಶೋಭಾ ಶೆಟ್ಟಿ ಪಯಣ ಅಂತ್ಯಗೊಂಡಿದೆ... ದೊಡ್ಮನೆಯಿಂದ ಹೊರ ಬಂದ ಶೋಭಾ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಆದರೆ ಅದೇ ಸಮಯದಲ್ಲಿ ಸಾರ್ವಜನಿಕವಾಗಿ ಕಹಿ ಅನುಭವವೂ ಸಹ ನಡೆದಿದ್ದು.. ಸದ್ಯ ವಿಡಿಯೋ ವೈರಲ್‌ ಆಗಿದೆ..   

Written by - Savita M B | Last Updated : Dec 11, 2023, 11:53 AM IST
  • ಕೊನೆಯ ಹಂತ ತಲುಪಿದ ಬಿಗ್ ಬಾಸ್
  • ಬಿಗ್‌ ಬಾಸ್‌ ಇತಿಹಾಸದಲ್ಲೇ ಇದೇ ಮೊದಲು
  • ಬಿಗ್‌ ಬಾಸ್‌ ಸ್ಪರ್ಧಿಗೆ ಸಾರ್ವಜನಿಕವಾಗಿ ಕಹಿ ಅನುಭವ
Bigg Boss: ಬಿಗ್‌ ಬಾಸ್‌ ಇತಿಹಾಸದಲ್ಲೇ ಇದೇ ಮೊದಲು.. ಖ್ಯಾತ ಸ್ಪರ್ಧಿಗೆ ಸಾರ್ವಜನಿಕವಾಗಿ ಕಹಿ ಅನುಭವ...! ವಿಡಿಯೋ ವೈರಲ್‌  title=

Bigg Boss: ಕೊನೆಯ ಹಂತ ತಲುಪಿದ ಬಿಗ್ ಬಾಸ್ ತೆಲುಗು ಸೀಸನ್ 7 ಇನ್ನೊಂದು ವಾರದಲ್ಲಿ ಮುಕ್ತಾಯಗೊಳ್ಳಲಿದೆ... ನಿನ್ನೆ ವಾರದ ಪಂಚಾಯಿತಿಯಲ್ಲಿ ಶಿವಾಜಿ ಮತ್ತು ಶೋಭಾ ಡೇಂಜರ್‌ ಜೋನ್‌ನಲ್ಲಿದ್ದರು.. ಅದರಲ್ಲಿ ಕನ್ನಡದ ಕಿರುತೆರೆ ಶೋಭಾ ಎಲಿಮಿನೇಟ್ ಆಗಿದ್ದಾರೆ..

ಶೋಭಾ ಶೆಟ್ಟಿ ಮನೆಯಲ್ಲಿ ಫೈರ್ ಬ್ರ್ಯಾಂಡ್ ಎಂದೇ ಖ್ಯಾತರು. ತಮ್ಮ ಮಾತಿನ ಬಾಣಗಳಿಂದಲೇ ಎಲ್ಲರನ್ನು ತಿವಿಯುತ್ತಿದ್ದ ಶೋಭಾ ಶೆಟ್ಟಿ ಅವರ ವರ್ತನೆ ನೆಗೆಟಿವಿಟಿಯಿಂದ ಆವರಿಸಿತ್ತು.. ಹೀಗಾಗಿ ಶೋಭಾ ಶೆಟ್ಟಿಯವರನ್ನು ಎಲಿಮಿನೇಟ್ ಮಾಡಬೇಕೆಂಬ ಆಗ್ರಹ ಜೋರಾಗಿ ಕೇಳಿಬಂದಿತ್ತು. ಹಲವು ಬಾರೀ ಎಲಿಮಿನೇಷನ್‌ನಿಂದ ಸೇವ್‌ ಆದ ಶೋಭಾಳನ್ನು ಉಳಿಸಿಕೊಳ್ಳಲು ಕೆಲವು ಟಾಪ್ ಸ್ಪರ್ಧಿಗಳನ್ನು ಬಲಿಕೊಡಲಾಗಿದೆ ಎಂಬ ಮಾತು ಸಹ ಕೇಳಿಬಂದಿತ್ತು.

ಇದನ್ನೂ ಓದಿ-ವಿನಯ್ ನಿಂದ ಅನುಭವಿಸಿದ ನೋವು ಅಷ್ಟಿಷ್ಟಲ್ಲ : ವಿನಯ್ ವಿರುದ್ದ ನೋವು ಹೊರ ಹಾಕಿದ ಕಿರು ತೆರೆ ನಟಿ

ಇದೆಲ್ಲವನ್ನು ಹೊರತುಪಡಿಸಿ ಇದೀಗ ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಮೇಲೆ ಮೆರವಣಿಗೆ ಮೂಲಕ ಮನೆಗೆ ತೆರಳುತ್ತಿದ್ದ ಶೋಭಾ ಶೆಟ್ಟಿ ಅವರಿಗೆ ಕಹಿ ಅನುಭವವಾಗಿದೆ. ಕಾರಿನಲ್ಲಿದ್ದ ಶೋಭಾ ಅವರಿಗೆ ಒಬ್ಬ ವ್ಯಕ್ತಿ "ಯಾವಾಗಲೋ ಹೊರ ಬರಬೇಕಿತ್ತೋ ಅದು ಈಗ ಬಂದಿದೆ" ಎಂದು ಜೋರಾಗಿ ಕೂಗಿದ್ದಾರೆ.. ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ಶೋಭಾ ನಗುಮುಖದಿಂದ ಹೊರಟು ಹೋಗಿದ್ದಾರೆ.. ಈ ವಿಡಿಯೋ ಸದ್ಯ ವೈರಲ್ ಆಗಿದೆ.. 

ಇನ್ನು ಶೋಭಾ ಶೆಟ್ಟಿ 14 ವಾರಗಳ ಕಾಲ ಮನೆಯಲ್ಲಿದ್ದರು... ಇವರು ಒಂದು ವಾರಕ್ಕೆ ರೂ. 2. 25 ಲಕ್ಷ ದಂತೆ 31.5 ಲಕ್ಷ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಶೋಭಾ ಶೆಟ್ಟಿ ಅತ್ಯಂತ ಜನಪ್ರಿಯ ಧಾರಾವಾಹಿ ಕಾರ್ತಿಕದೀಪಮ್‌ದಲ್ಲಿ ಖಳನಾಯಕಿ ಮೋನಿತಾ ಪಾತ್ರವನ್ನು ನಿರ್ವಹಿಸಿದ್ದಾರೆ. 

ಇದನ್ನೂ ಓದಿ-BBK 10: ಭಾವದ ಮಳೆಯಲ್ಲಿ ಭರಪೂರ ನೆನೆದ ದೊಡ್ಮನೆ ಮಂದಿ.. ಸ್ಪರ್ಧಿಗಳ ಮನದಾಳದ ಮಾತಿಗೆ ಕಿವಿಯಾದ ಬಿಗ್‌ಬಾಸ್!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News