BBK10: ʼವಿನಯ್‌ಗೆ ಪ್ರಶ್ನೆ ಮಾಡಿ.. ಪ್ಲೀಸ್‌ ಸುದೀಪ್‌ ಸರ್ʼ ಗಾಯಕಿಯ ಮನವಿ : ಐಶ್ವರ್ಯ ರಂಗರಾಜನ್

Bigg Boss Kannada: ಬಿಗ್‌ಬಾಸ್‌ ಮನೆಯಲ್ಲಿ ವಿನಯ್‌ ಗೌಡ ಅವಾಚ್ಯ ಪದ ಬಳಕೆ ಮಾಡಿದರೂ ಕಳೆದ ವಾರ ಕಿಚ್ಚ ಸುದೀಪ್ ಪ್ರಶ್ನೆ ಮಾಡಿರಲಿಲ್ಲದರಿಂದ, ಈ ವಾರ ಈತನಿಗೆ ಕಿಚ್ಚ ಸುದೀಪ್ ಸ್ಪೆಷಲ್ ಕ್ಲಾಸ್‌ ತಗೊಳ್ಳಬೇಕು ಅನ್ನೋದು ವೀಕ್ಷಕರ ಹೆಬ್ಬಯಕೆ. ಸದ್ಯ ಗಾಯಕಿ ಐಶ್ವರ್ಯಾ ರಂಗರಾಜನ್ ಸಹ ಇದೇ ವಿಚಾರದ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Written by - Zee Kannada News Desk | Last Updated : Nov 4, 2023, 01:30 PM IST
  • ಬಿಗ್‌ಬಾಸ್‌ನಲ್ಲಿ ವಿನಯ್‌ ಗೌಡ ಅವಾಚ್ಯ ಪದ ಬಳಕೆ ಮಾಡಿದರೂ ಕಳೆದ ವಾರ ಕಿಚ್ಚ ಸುದೀಪ್ ಪ್ರಶ್ನೆ ಮಾಡಿರಲಿಲ್ಲ.
  • ಈ ವಾರ ವಿನಯ್ ಗೌಡ ಅವಾಚ್ಯ ಪದಬಳಕೆ ಎಲ್ಲೆ ಮೀತಿ ಮೇಲಕ್ಕೇರಿದೆ.
  • ಗಾಯಕಿ ಐಶ್ವರ್ಯ ರಂಗರಾಜನ್‌ ವಿನಯ್‌ ಗೌಡ ಅವಾಚ್ಯ ಪದ ಬಳಕೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
BBK10: ʼವಿನಯ್‌ಗೆ ಪ್ರಶ್ನೆ ಮಾಡಿ.. ಪ್ಲೀಸ್‌ ಸುದೀಪ್‌ ಸರ್ʼ ಗಾಯಕಿಯ ಮನವಿ : ಐಶ್ವರ್ಯ ರಂಗರಾಜನ್ title=

Singer Aishwarya Rangarajan Request To Sudeep: ಬಿಗ್‌ಬಾಸ್‌ ಮನೆಯೊಳಗೆ ಸೀಸನ್‌ 10ರ ಸ್ಪರ್ಧಿಗಳು ಅವಾಚ್ಯ ಪದಗಳ್ನು ಬಳಸುತಿದ್ದು, ಈ ಹಿಂದೆ ವಿನಯ್‌ ಗೌಡ ಅವಾಚ್ಯ ಶಬ್ದಗಳನ್ನ ಬಳಸಿ ಬೀಪ್ ಹಾಕಿಸಿಕೊಂಡಿದ್ದರು. ವಿನಯ್‌ ಡ್ರೋನ್ ಪ್ರತಾಪ್‌ಗೆ ‘ಮುಚ್ಕೊಂಡ್ ಕೇಳಿಸಿಕೊಳ್ಳೋ ಲೇ’ ಎಂದಿದ್ದು, ಇತ್ತ ತನಿಷಾಗೆ ನಮ್ರತಾ ‘ಕಿತ್ತೋದವಳು’ ಎಂದಿದ್ದರು. ತನಿಷಾ ಜೊತೆಗೆ ಮೇಲೆ ಕಿರುಚಾಡಿ ನಮ್ರತಾ ಗೌಡ ಸಹ ಬೀಪ್ ಹಾಕಿಸಿಕೊಂಡಿದ್ದರೂ, ಕಳೆದ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ವಿನಯ್‌ಗಾಗಲಿ, ನಮ್ರತಾಗಾಗಲಿ  ಏನೂ ಹೇಳಿದೆ, ಅವಾಚ್ಯ ಶಬ್ದ ಬಳಕೆ  ಮಾಡಿದಕ್ಕೆ ಕ್ಲಾಸ್‌ ತಗೊಂಡಿರಲಿಲ್ಲ.

ಈ ವಾರ ವಿನಯ್ ಗೌಡ ಅವಾಚ್ಯ ಪದಬಳಕೆ ಎಲ್ಲೆ ಮೀರಿದ್ದು, ಸಂಗೀತಾ ಹಾಗೂ ತನಿಷಾ ಮೇಲೆ ಏಕವಚನದಲ್ಲಿ ವಿನಯ್ ಹೌಹಾರಿದ್ದಾರೆ. ಮಹಿಳೆಯರ ಬಗ್ಗೆ ಗೌರವವೇ ಇಲ್ಲದಂತೆ ಕೆಲ ಮಾತುಗಳನ್ನಾಡಿದ್ದಾರೆ ವಿನಯ್ ಗೌಡ, ಬಗ್ಗೆ ವೀಕ್ಷಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ವಿನಯ್ ಗೌಡ ವಿರುದ್ಧ ಮಹಿಳೆಯರು ಕೆರಳದ್ದು, "ವಿನಯ್‌ ಗೌಡಗೆ ಈ ವಾರ ಕಿಚ್ಚ ಸುದೀಪ್ ಬೆಂಡತ್ತಲೇಬೇಕು" ಎಂದು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ.

ಇದನ್ನು ಓದಿ: ಬಿಗ್ ಬಾಸ್ scripted ನಿಜ, ಅರ್ಥ ಮಾಡ್ಕೊಳಿ : ಮಾಜಿ ಸ್ಪರ್ಧಿ ಕಿರಿಕ್‌ ಕೀರ್ತಿ ಬಚ್ಚಿಟ್ಟ ಸತ್ಯ!

ಸದ್ಯ ಗಾಯಕಿ ಹಾಗೂ ನಟಿಯಾಗಿರುವ ಐಶ್ವರ್ಯ ರಂಗರಾಜನ್‌, ಈ ವಾರಾಂತ್ಯದಲ್ಲಿ "ವಿನಯ್ ಅವರಿಗೆ ಪ್ರಶ್ನೆ ಮಾಡಿ" ಎಂದು ಮನವಿ ಮಾಡಿದ್ದಾರೆ. ಐಶ್ವರ್ಯ ತಮ್‌ ಇನ್‌ಸ್ಟಾಗ್ರಾಮ್‌ನಲ್ಲಿ " ಈ ವಾರಾಂತ್ಯದಲ್ಲಿ ಕಿಚ್ಚ ಸುದೀಪ್‌ ಸರ್‌ ವಿನಯ್ ಅವರನ್ನ ಪ್ರಶ್ನೆ ಮಾಡ್ತಾರೆ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಪ್ಲೀಸ್ ಸುದೀಪ್ ಸರ್‌.. ಪ್ಲೀಸ್‌" ಎಂದು ಬರೆದುಕೊಂಡಿದ್ದಾರೆ.

ಹಲವು ವೀಕ್ಷಕರು ಸಹ ʼವಿನಯ್ ಅವರನ್ನ ಪ್ರಶ್ನೆ ಮಾಡಿ’ ಎಂದು ಸೋಷಿಯಲ್ ಮೀಡಿಯಾ ಮೂಲಕ ಕಿಚ್ಚ ಸುದೀಪ್‌  ಕೇಳಿಕೊಳ್ಳುತ್ತಿದ್ದಾರೆ. ಈ ಎಲ್ಲಾ ವಿಷಯಗಳ ಕುರಿತಾಗಿ ವಿನಯನ್ನು  ಕಿಚ್ಚ ಸುದೀಪ್ ಪ್ರಶ್ನೆ ಮಾಡಬೇಕು ಅನ್ನೋದು ವೀಕ್ಷಕರ ಬಯಕೆ. ಈ ವಾರದ ಕಿಚ್ಚನ ಪಂಚಾಯತಿ ವೇಳೆ ಏನಾಗುತ್ತದೆಯೆಂದು ಕಾದು ನೋಡಬೇಕಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News