Bigg Boss Kannada Season 9 : ಬಿಗ್ ಬಾಸ್ ಕನ್ನಡ ಓಟಿಟಿ ಮುಕ್ತಾಯವಾಯಿತು. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಸೆಪ್ಟೆಂಬರ್ 24 ರಂದು ಆರಂಭವಾಗಲಿದೆ. ಅದ್ದೂರಿಯಾಗಿ ಓಪನಿಂಗ್ ಆಗಲಿರುವ ಈ ಶೋನಲ್ಲಿ ಎಷ್ಟು ಸ್ಪರ್ಧಿಗಳಿರಲಿದ್ದಾರೆ? ಯಾರೆಲ್ಲ ದೊಡ್ಮನೆ ಸೇರಲಿದ್ದಾರೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಬಿಗ್ ಬಾಸ್ ಕನ್ನಡ ಓಟಿಟಿ ಶೋ ಫಿನಾಲೆ ಮುಗಿಯಿತು, ಅಲ್ಲಿನ ಟಾಪ್ 4 ಸ್ಪರ್ಧಿಗಳು ಟಿವಿ ಸೀಸನ್‌ಗೆ ಎಂಟ್ರಿ ಆಗಿದ್ದೂ ಆಯಿತು.
ಇದನ್ನೂ ಓದಿ : Kabza Teaser Released : ಹೇಗಿದೆ ನೋಡಿ ಕಬ್ಜ ಟೀಸರ್! ಉಪ್ಪಿ - ಕಿಚ್ಚನ ಲುಕ್‌ಗೆ ಫ್ಯಾನ್ಸ್ ಫಿದಾ
ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಯಾರೆಲ್ಲ ಭಾಗವಹಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಒಟ್ಟು 18 ಸ್ಪರ್ಧಿಗಳು ದೊಡ್ಮನೆ ಸೇರಲಿದ್ದು, ವಿಶೇಷ ಎಂದರೆ ಈ ಬಾರಿ ಹಳೆಯ ಸೀಸನ್‌ಗಳ ಸ್ಪರ್ಧಿಗಳು ಕೂಡ ಭಾಗಿಯಾಗಲಿದ್ದಾರೆ. ಸೀನಿಯರ್ಸ್ ಜೊತೆ ಹೊಸಬರ ಹಣಾಹಣಿಯೇ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 9 ರ ವಿಶೇಷತೆಯಾಗಿದೆ. ಬಿಗ್ ಬಾಸ್ ಕನ್ನಡ ಓಟಿಟಿಯಿಂದ 4 ಸ್ಪರ್ಧಿಗಳು, ಕಳೆದ 8 ಸೀಸನ್‌ಗಳಲ್ಲಿ ಭಾಗವಹಿಸಿದವರಲ್ಲಿ 5 ಸ್ಪರ್ಧಿಗಳು ಇವರ ಜೊತೆಗೆ 9 ಹೊಸ ಸ್ಪರ್ಧಿಗಳು ಈ ಶೋನಲ್ಲಿ ಭಾಗಿಯಾಗಲಿದ್ದಾರೆ.
ಹಿಂದಿ ಬಿಗ್ ಬಾಸ್‌ನಲ್ಲಿ ಈ ಮಾದರಿಯನ್ನು ಅನುಸರಿಸುತ್ತಾರೆ. ಹಾಗೆಯೇ ಕನ್ನಡದಲ್ಲಿಯೂ ಹಳೆಯ ಸೀಸನ್‌ಗಳಲ್ಲಿ ಭಾಗವಹಿಸಿದ್ದವರು ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ. ಬಿಗ್ ಬಾಸ್ ಕನ್ನಡ ಓಟಿಟಿಯಿಂದ ಸೆಲೆಕ್ಟ್ ಆದ ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಸಾನ್ಯಾ ಅಯ್ಯರ್ ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಇರಲಿದ್ದಾರೆ. ಆದರೆ ಈಗ ಕುತೂಹಲ ಇರುವುದು ಹಳೆಯ ಸೀಸನ್‌ನ ಯಾವ ಸ್ಪರ್ಧಿಗಳು ಬಿಗ್‌ಬಾಸ್‌ಗೆ ಬರಲಿದ್ದಾರೆ ಎಂಬುದು. ಇತ್ತೀಚೆಗೆ ಹೊರ ಬಂದ ಪ್ರೋಮೋದಲ್ಲಿ ಅನುಪಮಾ ಗೌಡ, ವೈಷ್ಣವಿ ಗೌಡ, ದೀಪಿಕಾ ದಾಸ್, ಪ್ರಶಾಂತ್ ಸಂಬರಗಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿದ ಮೇಲೆ ಈ ಮಾಜಿ ಕಂಟೆಸ್ಟಂಟ್‌ಗಳು ದೊಡ್ಮನೆಗೆ ಹೋಗ್ತಾರಾ ಅಥವಾ ಬೇರೆ 5 ಹಳೆಯ ಸ್ಪರ್ಧಿಗಳು ಬಿಗ್ ಬಾ ಮನೆ ಸೇರಲಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಇನ್ನೂ ಇವರ ಜೊತೆ ಬರುವ 9 ಹೊಸ ಸ್ಪರ್ಧಿಗಳು ಯಾರು ಎಂಬ ಕಾತುರ ಸಹ ಹೆಚ್ಚಾಗಿದೆ. ಆದರೆ ಈ ಎಲ್ಲದಕ್ಕೂ ಸೆ. 24 ರ ಸಂಜೆ ಉತ್ತರ ಸಿಗಲಿದೆ.
ಇದನ್ನೂ ಓದಿ : Comedy Khiladigalu 4 : ಕಾಮಿಡಿ ಕಿಲಾಡಿಗಳು ಸೀಸನ್ - 4 ಶುರು.. ವೀಕೆಂಡ್ ನಲ್ಲಿ ನಗುವಿನ ಹಬ್ಬ ಫಿಕ್ಸ್!
ಈ ಹಿಂದಿನ ಬಿಗ್ ಬಾಸ್ ಶೋಗಳಿಗಿಂತ ಈ ಬಾರಿಯ ಸೀಸನ್ ವಿಶೇಷವಾಗಿರುವುದೇನೂ ಸತ್ಯ. ಅದರೆ ಜೊತೆ ಮಸಾಲಾದಾರ್ ಎಪಿಸೋಡ್‌ಗಳು ವೀಕ್ಷರಿಗೆ ಸಿಗುವುದು ಪಕ್ಕಾ ಆಗಿದೆ. ಹಳಬರ ಜೊತೆ ಹೊಸಬರ ಮಿಲನ ಹೇಗಿರಲಿದೆ ಎಂಬುದನ್ನು ನೋಡಲು ಎಲ್ಲ ಬಿಗ್ ಬಾಸ್ ಫ್ಯಾನ್ಸ್‌ಗಳು ಕಾಯುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.