BBK 9 Day 2 : ಸಂಬರಗಿ ಸವಾಲ್‌ಗೆ ಹೆಣ್ಮಕ್ಳು ಕೊಟ್ರು ಜವಾಬ್‌

Bigg Boss Kannada Season 9 : ಅಂತೂ ಇಂತೂ ಬಿಗ್‌ಬಾಸ್‌ ಕನ್ನಡ ಸೀಸನ್‌ 9 ಶುರುವಾಯ್ತು. 18 ಜನ ಸ್ಪರ್ಧಿಗಳು ಮನೆ ಸೇರಿದ್ದು ಆಯ್ತು. ಮೊದಲ ದಿನವೇ ಜಗಳ ನಡೆದು ಆಟವೂ ರಂಗೇರಿತು. 

Written by - Chetana Devarmani | Last Updated : Sep 27, 2022, 04:45 PM IST
  • ಬಿಗ್‌ಬಾಸ್‌ ಕನ್ನಡ ಸೀಸನ್‌ 9 ಎರಡನೇ ದಿನ
  • ಸಂಬರಗಿ ಸವಾಲ್‌ಗೆ ಹೆಣ್ಮಕ್ಳು ಕೊಟ್ರು ಜವಾಬ್‌
  • ಬಿಗ್‌ಬಾಸ್‌ ಮನೆಯಲ್ಲಿ ಟಾಸ್ಕ್‌ ಜಟಾಪಟಿ
BBK 9 Day 2 : ಸಂಬರಗಿ ಸವಾಲ್‌ಗೆ ಹೆಣ್ಮಕ್ಳು ಕೊಟ್ರು ಜವಾಬ್‌    title=
ಬಿಗ್‌ಬಾಸ್‌ ಕನ್ನಡ ಸೀಸನ್‌ 9

Bigg Boss Kannada Season 9 : ಅಂತೂ ಇಂತೂ ಬಿಗ್‌ಬಾಸ್‌ ಕನ್ನಡ ಸೀಸನ್‌ 9 ಶುರುವಾಯ್ತು. 18 ಜನ ಸ್ಪರ್ಧಿಗಳು ಮನೆ ಸೇರಿದ್ದು ಆಯ್ತು. ಮೊದಲ ದಿನವೇ ಜಗಳ ನಡೆದು ಆಟವೂ ರಂಗೇರಿತು. ಇದೀಗ ಬಿಗ್‌ಬಾಸ್‌ ಮನೆಯಲ್ಲಿ ಟಾಸ್ಕ್‌ ಜಟಾಪಟಿ ಶುರುವಾಗಿದೆ. ಬಿಗ್‌ಬಾಸ್ ಎರಡನೇ ದಿನ ಮನೆಯ ಸದಸ್ಯರ ನಡುವೆ ತುಸು ಬಾಂಧವ್ಯ ನಿರ್ಮಾಣವಾಗಿದೆ. ಇದೀಗ ಸಂಬರಗಿ ಅವರು ಹಾಕಿದ ಸವಾಲ್‌ ಅಲ್ಲಿ ನಾಲ್ಕು ಜನ ಹುಡುಗಿಯರು ಹೆಣ್ಮಕ್ಳೆ ಸ್ಟ್ರಾಂಗ್‌ ಗುರು ಎಂದು ಸಾಬೀತು ಮಾಡಿದ್ದಾರೆ. 

ಇದನ್ನೂ ಓದಿ : Salaar Leaked Scene : ಸಲಾರ್ ಸೆಟ್‌ನಿಂದ ವಿಡಿಯೋ ಲೀಕ್‌! ಪ್ರಭಾಸ್‌ ಮಾಸ್ ಲುಕ್ ಹೀಗಿದೆ..

ಸದಸ್ಯರೆಲ್ಲರೂ ಜೋಡಿಗಳಾಗಿಯೇ ಓಡಾಡುತ್ತಿದ್ದಾರೆ. ಟಾಸ್ಕ್‌ ಕೂಡ ಜೋಡಿಯಾಗಿಯೇ ಮಾಡುತ್ತಿದ್ದಾರೆ. ಎರಡನೇ ದಿನ ಎರಡು ಟಾಸ್ಕ್‌ಗಳನ್ನು ಬಿಗ್‌ಬಾಸ್‌ ನೀಡಿದ್ದರು. ಮೊದಲ ಟಾಸ್ಕ್‌ ಮೆದುಳಿಗೆ ಕೆಲಸ ನೀಡಿದ್ದರೆ, ಎರಡನೇ ಟಾಸ್ಕ್‌ ಫಿಸಿಕಲ್‌ ಆಗಿತ್ತು. ಈ ಬ್ರೇನ್‌ ಗೇಮ್‌ ಅನ್ನು ರಾಕೇಶ್ ಅಡಿಗ - ರೂಪೇಶ್ ರಾಜಣ್ಣ ಹಾಗೂ ರೂಪೇಶ್ ಶೆಟ್ಟಿ - ಕಾವ್ಯಾಶ್ರೀ ಆಡಿದರು. ಇದಕ್ಕೆ ಬಾಜಿ ಕಟ್ಟಿದ್ದ ಪ್ರಶಾಂತ್ ಸಂಬರಗಿ ಹಾಗೂ ವಿನೋದ್ ಗೊಬ್ಬರ್ಗಾಲ ಗೆದ್ದು ಒಂದು ಅಂಕ ಪಡೆದರು. ಈ ಆಟದಲ್ಲಿ ಇಬ್ಬರೂ ಗೆಲ್ಲುವುದಿಲ್ಲ ಎಂದು ಪ್ರಶಾಂತ್‌ ಮತ್ತು ವಿನೋದ್‌ ಬಾಜಿ ಕಟ್ಟಿದ್ದರು. 

ಬಳಿಕ ನಡೆದ ಫಿಸಿಕಲ್‌ ಟಾಸ್ಕ್ ಅನ್ನು ದೀಪಿಕಾ - ಅಮೂಲ್ಯಾ ಜೋಡಿ ಹಾಗೂ ನೇಹಾ ಗೌಡ - ಅನುಪಮಾ ಜೋಡಿ ಆಡಿದರು. ಇವರಲ್ಲಿ ದೀಪಿಕಾ ಹಾಗೂ ಅಮೂಲ್ಯ ಜೋಡಿ ಆಟ ಗೆಲ್ಲುತ್ತೆ ಎಂದು ಪ್ರಶಾಂತ್‌ ಮತ್ತು ವಿನೋದ್‌ ಬಾಜಿ ಕಟ್ಟಿದ್ದರು. ಆದರೆ ಈ ನಾಲ್ಕು ಜನ ಹೆಣ್ಮಕ್ಳು ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಟಾಸ್ಕ್‌ ಆಡಿ ಶಕ್ತಿ ಪ್ರದರ್ಶಿಸಿದರು. ಆದರೆ ಕೊನೆಗೆ ಆಟದಲ್ಲಿ ನೇಹಾ ಹಾಗೂ ಅನುಪಮಾ ಜೋಡಿ ಸೋಲನುಭವಿಸಿತು. ದೀಪಿಕಾ ಮತ್ತು ಅಮೂಲ್ಯ ಗೆದ್ದಿದ್ದು, ಪ್ರಶಾಂತ್‌ ಮತ್ತು ವಿನೋದ್‌ ಕೂಡ ಗೆದ್ದರು. 
 
ಇದನ್ನೂ ಓದಿ : Bigg Boss Kannada Season 9 : ಮೊದಲ ವಾರವೇ 12 ಮಂದಿ ನಾಮಿನೇಟ್.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News