Allu Arjun: ಪುಷ್ಪ 2 ಸಿನಿಮಾದ ಬಿಗ್ ಆ್ಯಕ್ಷನ್ ಸೀನ್ ಲೀಕ್, ನದಿ ದಡದಲ್ಲಿ ನಡೆಯುತ್ತಿದೆ ಶೂಟಿಂಗ್‌.!

Pushpa 2 Action Scene: ಪುಷ್ಪಾ 2 ಚಿತ್ರದ ಆಕ್ಷನ್ ಸೀಕ್ವೆನ್ಸ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದೆ. ವಿಡಿಯೋದಲ್ಲಿ, ಕೆಂಪು ಚಂದನ ತುಂಬಿದ ಅನೇಕ ಟ್ರಕ್‌ಗಳು ಮತ್ತು ಅವುಗಳ ಹಿಂದೆ ಜೀಪ್ ಚಲಿಸುತ್ತಿರುವುದನ್ನು ಕಾಣಬಹುದು.

Written by - Chetana Devarmani | Last Updated : Jun 19, 2023, 07:07 PM IST
  • ಪುಷ್ಪಾ 2 ಚಿತ್ರದ ಆಕ್ಷನ್ ಸೀಕ್ವೆನ್ಸ್‌ನ ವಿಡಿಯೋ
  • ಪುಷ್ಪ 2 ಸಿನಿಮಾದ ಬಿಗ್ ಆ್ಯಕ್ಷನ್ ಸೀನ್ ಲೀಕ್?
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌
Allu Arjun: ಪುಷ್ಪ 2 ಸಿನಿಮಾದ ಬಿಗ್ ಆ್ಯಕ್ಷನ್ ಸೀನ್ ಲೀಕ್, ನದಿ ದಡದಲ್ಲಿ ನಡೆಯುತ್ತಿದೆ ಶೂಟಿಂಗ್‌.! title=
Pushpa 2

Allu Arjun Movie Action Scene: ಅಲ್ಲು ಅರ್ಜುನ್ ಅವರ ಮುಂಬರುವ ಚಿತ್ರ ಪುಷ್ಪ 2 ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಕ್ರೇಜ್‌ ಹುಟ್ಟು ಹಾಕಿದೆ. ಪುಷ್ಪಾ 2 ಜನಪ್ರಿಯತೆಯ ನಡುವೆ, ಇತ್ತೀಚೆಗೆ ವಿಡಿಯೋವೊಂದು ಲೀಕ್ ಆಗಿದೆ. ಇದರಲ್ಲಿ ಕೆಂಪು ಚಂದನವನ್ನು ತುಂಬಿದ ಅನೇಕ ಟ್ರಕ್‌ಗಳು ನದಿಯ ದಡದಲ್ಲಿ ಓಡಾಡುತ್ತಿರುವುದನ್ನು ಕಾಣಬಹುದು. ಟ್ರಕ್‌ಗಳ ಜೊತೆಗೆ ಜೀಪ್‌ಗಳು ಸಹ ಅತಿವೇಗದಲ್ಲಿ ಚಲಿಸುತ್ತಿರುವುದು ಕಂಡುಬರುತ್ತದೆ. ಇದರೊಂದಿಗೆ, ಇತರ ತೆರೆದ ವಾಹನಗಳು ಸಹ ಟ್ರಕ್‌ಗಳು ಮತ್ತು ಜೀಪ್‌ಗಳ ಹಿಂದೆ ಓಡುತ್ತಿವೆ. ಅದರಲ್ಲಿ ಕೆಲವರು ಕ್ಯಾಮೆರಾಗಳನ್ನು ಸಾಗಿಸುತ್ತಿರುವುದು ಕಂಡುಬರುತ್ತದೆ. ಈ ವಿಡಿಯೋ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರದ ಆಕ್ಷನ್ ಸೀಕ್ವೆನ್ಸ್ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Bigg Boss OTT 2: ಬಿಗ್‌ ಬಾಸ್‌ ಒಟಿಟಿ ಸೀಸನ್‌ 2 ರ ಸ್ಪರ್ಧಿಗಳ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ

ಪುಷ್ಪ 2 ಆಕ್ಷನ್‌ನಿಂದ ತುಂಬಿರುತ್ತದೆ!

ವರದಿಗಳ ಪ್ರಕಾರ, ತೆಲಂಗಾಣದ ಹಳ್ಳಿಯೊಂದರಲ್ಲಿ ಪುಷ್ಪ 2 ಶೂಟಿಂಗ್ ನಡೆಯುತ್ತಿದೆ. ಇಲ್ಲಿಂದ ಈ ವಿಡಿಯೋ ಲೀಕ್‌ ಆಗಿದೆ ಎನ್ನಲಾಗ್ತಿದೆ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಬಹಳ ವೈರಲ್ ಆಗಿದೆ. ವಿಡಿಯೋದಲ್ಲಿ, ನದಿ ದಡದಿಂದ ಟ್ರಕ್‌ಗಳ ಗುಂಪು ಹೊರಬರುತ್ತಿದೆ, ಎಲ್ಲಾ ಟ್ರಕ್‌ಗಳು ಕೆಂಪು ಚಂದನದಿಂದ ತುಂಬಿವೆ. ಅವುಗಳ ಜೊತೆಗೆ ಜೀಪ್‌ಗಳು ಸಹ ಚಲಿಸುತ್ತಿವೆ. ಈ ವಿಡಿಯೋ ಪುಷ್ಪ 2 ಪ್ರಮುಖ ದೃಶ್ಯ ಎಂದು ಹೇಳಲಾಗುತ್ತಿದೆ. ಈ ರೋಮಾಂಚನಕಾರಿ ಚೇಸ್‌ನಲ್ಲಿ, ಟ್ರಕ್‌ಗಳು ಮತ್ತು ಜೀಪ್‌ಗಳು ನದಿಯ ದಡದಲ್ಲಿ ಓಡುವುದನ್ನು ಕಾಣಬಹುದು.

 

 

ಪುಷ್ಪ 2 ಯಾವಾಗ ಬಿಡುಗಡೆಯಾಗುತ್ತದೆ?

ಪುಷ್ಪ 2 ಚಿತ್ರೀಕರಣ ಪ್ರಾರಂಭವಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಚಿತ್ರದ ಫಸ್ಟ್ ಲುಕ್ ವಿಡಿಯೋ ಮತ್ತು ಪೋಸ್ಟರ್ ಬಿಡುಗಡೆಯಾಗಿದೆ. ವಿಡಿಯೋದಲ್ಲಿ ಪುಷ್ಪಾ ಜೈಲಿನಿಂದ ಪರಾರಿಯಾಗುವ ಮೂಲಕ ಕಥೆ ಆರಂಭವಾಗುವುದನ್ನು ತೋರಿಸಲಾಗಿದೆ. ಆದರೆ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ನೀಲಿ ಮತ್ತು ಕೆಂಪು ಬಣ್ಣ, ಕಿವಿಯೋಲೆಗಳು ಮತ್ತು ಹಣೆಯ ಮೇಲೆ ಬಿಂದಿ, ಕೈಯಲ್ಲಿ ಬಳೆಗಳನ್ನು ಧರಿಸಿದ್ದಾರೆ. ಚಿತ್ರದ ಫಸ್ಟ್ ಲುಕ್ ವಿಡಿಯೋ ಮತ್ತು ಪೋಸ್ಟರ್ ಸಿನಿಮಾ ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ನಿರ್ಮಾಪಕರು ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ವೈರಲ್ ಆಗುತ್ತಿರುವ ಸುದ್ದಿ ಪ್ರಕಾರ, 2024 ರ ವೇಳೆಗೆ ಪುಷ್ಪ 2 ಬಿಡುಗಡೆಯಾಗುವ ನಿರೀಕ್ಷೆಯಿದೆ. 

ಇದನ್ನೂ ಓದಿ: ತೆಲುಗಿನ ಖ್ಯಾತ ಕೊರಿಯೋಗ್ರಾಫರ್‌, ಟ್ರೋಲಿಗರ ಫೇವರೆಟ್‌ ರಾಕೇಶ್‌ ಮಾಸ್ಟರ್‌ ಇನ್ನಿಲ್ಲ..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News