ಬಘೀರ ಅಪ್ಡೇಟ್: ಹೈಬಜೆಟ್‌ನಲ್ಲಿ ಕ್ಲೈಮ್ಯಾಕ್ಸ್‌ ಶೂಟಿಂಗ್‌ ಶುರು..!

Bagheera Update: ಚಂದನವನದ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ಸಿನಿಮಾದ ಹೊಸ ಅಪ್‌ಡೇಟ್ಸ್ ಹೊರ ಬಂದಿದ್ದು, ಚಿತ್ರದ ಕಡೆಯ ದೃಶ್ಯಕ್ಕೆ ಅತಿ ದೊಡ್ಡ ಸೆಟ್ ರೆಡಿ ಆಗಿದೆ. ಇದರ ಇನ್ನಷ್ಟು ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Jan 12, 2024, 10:44 AM IST
  • ಒಂದು ಚಿತ್ರ ಒಪ್ಪಿ ಆದ್ಮೇಲೆ ಬೇರೆ ಸಿನಿಮಾಗಳನ್ನ ಇಲ್ಲಿವರೆಗೂ ಶ್ರೀಮುರಳಿ ಸೈನ್ ಮಾಡಿಯೇ ಇಲ್ಲ ಬಿಡಿ.ಕಾರಣ ಶ್ರೀಮುರಳಿ ಒಂದು ಚಿತ್ರಕ್ಕೆ 100 ಪರ್ಸೆಂಟ್ ಕೊಡುತ್ತಾರೆ.
  • ಬೆಂಗಳೂರಿನ ಹೊರ ವಲಯದ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಟ್ರೈನ್ ಸೆಟ್ ಹಾಕಲಾಗಿದ್ದು, ಜೊತೆಗೆ ಸಾವಿರಾರು ಜೂನಿಯೆರ್ಸ್ ಸಿನಿಮಾದ ಈ ಕೊನೆಯ ದೃಶ್ಯ ತೆಗೆಯಲಾಗುತ್ತಿದೆ.
  • ಬಘೀರ ಚಿತ್ರದ ಕಟ್ಟ ಕಡೆಯ ಈ ಒಂದು ದೃಶ್ಯಕ್ಕೆ ಸ್ಟಂಟ್‌ ಡೈರೆಕ್ಟರ್ ಚೇತನ್ ಡಿಸೋಜಾ ನಿರ್ದೇಶನದಲ್ಲಿ ಈ ಸಿನಿಮಾದ ಬಹು ಕೋಟಿ ಖರ್ಚು ಮಾಡಲಾಗಿದೆ.
ಬಘೀರ ಅಪ್ಡೇಟ್: ಹೈಬಜೆಟ್‌ನಲ್ಲಿ ಕ್ಲೈಮ್ಯಾಕ್ಸ್‌ ಶೂಟಿಂಗ್‌ ಶುರು..! title=

Bagheera Climax Shooting: ಸ್ಯಾಂಡಲ್‌ವುಡ್‌ ರೋರಿಂಗ್‌ ಸ್ಟಾರ್‌ ಅಭಿನಯದ ಬಹುನಿರೀಕ್ಷಿತ ಬಘೀರ ಚಿತ್ರ ಶ್ರೀಮುರಳಿ ಜೀವನದ ಮಹತ್ವದ ಸಿನಿಮಾವೇ ಆಗಿದ್ದು, ಇದಕ್ಕಾಗಿ ಹೆಚ್ಚು ಕಡಿಮೆ ನಾಲ್ಕೈದು ವರ್ಷ ಮೀಸಲಿಟ್ಟಿದ್ದಾರೆ. ಸಿನಿಮಾದ ಕಂಪ್ಲೀಟ್ ಕಥೆಯನ್ನ ಅರ್ಥ ಮಾಡಿಕೊಂಡು ಇನ್ವಾಲ್ವ್ ಆಗೋದು ಶ್ರೀಮುರಳಿ ರೂಢಿ ಅಂತಲೇ ಹೇಳಬಹುದು. ಒಂದು ಚಿತ್ರ ಒಪ್ಪಿ ಆದ್ಮೇಲೆ ಬೇರೆ ಸಿನಿಮಾಗಳನ್ನ ಇಲ್ಲಿವರೆಗೂ ಶ್ರೀಮುರಳಿ ಸೈನ್ ಮಾಡಿಯೇ ಇಲ್ಲ ಬಿಡಿ.ಕಾರಣ ಶ್ರೀಮುರಳಿ ಒಂದು ಚಿತ್ರಕ್ಕೆ 100 ಪರ್ಸೆಂಟ್ ಕೊಡುತ್ತಾರೆ. 

ನಟ ಶ್ರೀ ಮುರಳಿಗೆ ಒಂದು ಲೆಕ್ಕದಲ್ಲಿ ಉಗ್ರಂ ಚಿತ್ರವೂ ಒಳ್ಳೆ ಹೆಸರು ತಂದು ಕೊಟ್ಟಿದ್ದು, ಅದಾದ್ಮೇಲೆ ಹಲವು ಸಿನಿಮಾಗಳು ಹೆಸರು ಉಳಿಸಿವೆ. ಅದರಂತೆ ಇದೀಗ ಬಘೀರ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಸದ್ಯ ಬಘೀರ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಶುರು ಆಗಿದೆ. ಬೆಂಗಳೂರಿನ ಹೊರ ವಲಯದ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಟ್ರೈನ್ ಸೆಟ್ ಹಾಕಲಾಗಿದ್ದು, ಜೊತೆಗೆ ಸಾವಿರಾರು ಜೂನಿಯೆರ್ಸ್  ಸಿನಿಮಾದ ಈ ಕೊನೆಯ ದೃಶ್ಯ ತೆಗೆಯಲಾಗುತ್ತಿದೆ. 

ಇದನ್ನೂ ಓದಿ: "ಕಾಟೇರ ಶೂಟಿಂಗ್‌ ವೇಳೆ ದರ್ಶನ್‌ ಮಧ್ಯಾಹ್ನದ ಊಟವನ್ನೇ ಮಾಡುತ್ತಿರಲಿಲ್ಲ": ಸತ್ಯ ಬಿಚ್ಚಿಟ್ಟ ತರುಣ್‌ ಸುಧೀರ್!

ಬಘೀರ ಚಿತ್ರದ ಕಟ್ಟ ಕಡೆಯ ಈ ಒಂದು ದೃಶ್ಯಕ್ಕೆ ಸ್ಟಂಟ್‌ ಡೈರೆಕ್ಟರ್ ಚೇತನ್ ಡಿಸೋಜಾ  ನಿರ್ದೇಶನದಲ್ಲಿ ಈ ಸಿನಿಮಾದ ಬಹು ಕೋಟಿ ಖರ್ಚು ಮಾಡಲಾಗಿದೆ. ಸದ್ಯ ಚಿತ್ರದ  ಈ ಕೆಲಸ ಆದ್ಮೇಲೆ ಇನ್ನೂ 14 ರಿಂದ 15 ದಿನ ಕೆಲಸ ಉಳಿಯುತ್ತಿದ್ದು, ಅದರಲ್ಲಿ ಸಣ್ಣ ಪುಟ್ಟ ಪ್ಯಾಚ್ ವರ್ಕ್ ಶೂಟಿಂಗ್ ಮಾಡಲಾಗುತ್ತದೆ. ಜೊತೆಗೆ ಸಿನಿಮಾದ ಎರಡು ಹಾಡಿನ ಚಿತ್ರೀಕರಣ ಕೂಡ ಪ್ಲಾನ್ ಆಗಿದ್ದು, ಅಲ್ಲಿಗೆ ಇಡೀ ಬಘೀರ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗುತ್ತದೆ.

ಬಘೀರ ಚಿತ್ರವನ್ನ ಹೊಂಬಾಳೆ ಸಂಸ್ಥೆ ನಿರ್ಮಿಸುತ್ತಿದ್ದು, ಡೈರೆಕ್ಟರ್ ಪ್ರಶಾಂತ್ ನೀಲ್ ಕೊಟ್ಟ ಒನ್‌ ಲೈನ್‌ ಕಥೆಯನ್ನೆ ಡಾಕ್ಟರ್ ಸೂರಿ ಚಿತ್ರಕಥೆ ಮಾಡಿಕೊಂಡಿದ್ದಾರೆ. ಡೈರೆಕ್ಷನ್ ಕೂಡ ಸೂರಿಯವರೇ ಮಾಡಿಕೊಂಡಿದ್ದು,  ಇವರ ಈ ಒಂದು ಕಲ್ಪನೆಗೆ ಹೊಂಬಾಳೆ ಸಂಸ್ಥೆ ಕೋಟಿ ಕೋಟಿ ದುಡ್ಡು ಇನ್ವೆಸ್ಟ್ ಮಾಡಿದೆ. ಬಘೀರ ಸಿನಿಮಾದ ಮೊದಲ ಟೀಸರ್ ಭರವಸೆ ಮೂಡಿಸಿದ್ದಿ,  ಶ್ರೀಮುರಳಿ ಜನ್ಮ ದಿನಕ್ಕೆ ಬಂದ ಈ ಟೀಸರ್ ಪ್ರಾಮಿಸಿಂಗ್ ಆಗಿದೆ. ಇದನ್ನ ನೋಡಿದ ಫ್ಯಾನ್ಸ್ ಖುಷಿ ಆಗಿ, ಇಂಡಸ್ಟ್ರಿಯ ಮಂದಿಗೂ ಒಳ್ಳೆ ಮಾತುಗಳನ್ನೆ ಆಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News