Rajinikanth: 40 ವರ್ಷಗಳ ಬಳಿಕ ಅದೇ ಬೈಕ್ ಏರಿದ ತಲೈವ.. ಫೋಟೋ ಬಿಡುಗಡೆ ಮಾಡಿದ AVM!

Actor Rajinikanth: 40 ವರ್ಷಗಳ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ತಾವು ಬಳಸಿದ್ದ ಸುಜುಕಿ ಬೈಕ್ ಮೇಲೆ ಮತ್ತೆ ಕುಳಿತು ಸ್ಟೈಲ್ ಆಗಿ ಪೋಸ್ ಕೊಟ್ಟಿದ್ದಾರೆ.. ಸದ್ಯ ಪೋಟೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.. 

Written by - Savita M B | Last Updated : Mar 1, 2024, 08:35 AM IST
  • ತಮಿಳು ಚಿತ್ರರಂಗದಲ್ಲಿ 90 ವರ್ಷಗಳಿಂದ ಪಯಣ ನಡೆಸುತ್ತಿರುವ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ಎವಿಎಂ
  • ಇದರ ಗೌರವಾರ್ಥ ಕಂಪನಿ ತಮ್ಮ ಸಿನಿಮಾಗಳಲ್ಲಿ ಬಳಸಿದ ವಾಹನಗಳನ್ನು ಮತ್ತೆ ಪ್ರದರ್ಶಿಸುತ್ತಿದೆ.
  • ರಜನಿಕಾಂತ್‌ ತಾವು ಬಳಸಿದ್ದ ಬೈಕ್‌ನಲ್ಲಿಯೇ ಕುಳಿತು ಸ್ಟೈಲ್ ಆಗಿ ಪೋಸ್ ಕೊಟ್ಟಿದ್ದರು
Rajinikanth: 40 ವರ್ಷಗಳ ಬಳಿಕ ಅದೇ ಬೈಕ್ ಏರಿದ ತಲೈವ.. ಫೋಟೋ ಬಿಡುಗಡೆ ಮಾಡಿದ AVM! title=

AVM Production: ತಮಿಳು ಚಿತ್ರರಂಗದಲ್ಲಿ 90 ವರ್ಷಗಳಿಂದ ಪಯಣ ನಡೆಸುತ್ತಿರುವ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ಎವಿಎಂ.. ಇದರ ಗೌರವಾರ್ಥ ಕಂಪನಿ ತಮ್ಮ ಸಿನಿಮಾಗಳಲ್ಲಿ ಬಳಸಿದ ವಾಹನಗಳನ್ನು ಮತ್ತೆ ಪ್ರದರ್ಶಿಸುತ್ತಿದೆ. 

ಈ AVM ಪ್ರೊಡಕ್ಷನ್ ಕಂಪನಿಯು 1935 ರಲ್ಲಿ ತೆರೆಕಂಡ ಚಿತ್ರದ ಮೂಲಕ ತಮಿಳು ಚಿತ್ರರಂಗದ ಅತಿದೊಡ್ಡ ನಿರ್ಮಾಣ ಕಂಪನಿಯಾಗಿ ಹೊರಹೊಮ್ಮಿತು. ನಂತರ ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಬಂಗಾಳಿ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ 175 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿ ಜೀವತುಂಬುವ ಯಶಸ್ವಿ ನಿರ್ಮಾಣ ಸಂಸ್ಥೆಯಾಗಿ ಮುಂದುವರೆದಿದೆ.. 

ಇದನ್ನೂ ಓದಿ-Teaser : ತಾಪ್ಸಿ ಪನ್ನು ನಟನೆಯ 'ಫಿರ್ ಆಯಿ ಹಸಿನ್ ದಿಲ್ರುಬಾ' : ಟೀಸರ್ ಬಿಡುಗಡೆ

 ಇನ್ನು ಈ ಸಂಸ್ಥೆಯು ತಮಿಳು ಚಿತ್ರರಂಗದಲ್ಲಿ ಬಿಡುಗಡೆಯಾದ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿ ಪ್ರಸ್ತುತಪಡಿಸಿದ್ದು.. 1983 ರಲ್ಲಿ ಬಿಡುಗಡೆಯಾದ AVM ನ 126 ನೇ ಚಿತ್ರ "ಪಾಯುಂ ಪುಲಿ".. ಈ ಸಿನಿಮಾದಲ್ಲಿ ರಜನಿಕಾಂತ್ ಮತ್ತು ರಾಧಾ ನಟಿಸಿದ್ದಾರೆ.. 

ಇದನ್ನೂ ಓದಿ-ತಮಿಳು, ಮಲಯಾಳಂ ಚಿತ್ರರಂಗಗಳಿಗೆ ಕೆಆರ್ ಜಿ ಸ್ಟುಡಿಯೋಸ್ ಪದಾರ್ಪಣೆ

ಎಸ್ ಪಿ ಮುತ್ತುರಾಮನ್ ನಿರ್ದೇಶನದ ಈ ಚಿತ್ರ ಭರ್ಜರಿ ಹಿಟ್‌ ಆಗಿತ್ತು.. ವಿಶೇಷವೆಂದರೇ ಈ ಚಿತ್ರದಲ್ಲಿ ರಜನಿ ಸುಜುಕಿ ಬೈಕ್ ಅನ್ನು ಬಳಸಿದ್ದರು.. 40 ವರ್ಷಗಳ ಹಿಂದಿನ ಈ ಬೈಕ್‌ನ್ನು ಎವಿಎಂ ಕಂಪನಿ ಇಂದಿಗೂ ಹಾಗೆ ಜೋಪಾನ ಮಾಡಿಕೊಂಡಿದೆ...  

ಈ 40 ವರ್ಷಗಳ ಹಿಂದಿನ ಸುಜುಕಿ ಬೈಕ್ ಸದ್ಯ ಚೆನ್ನೈನಲ್ಲಿ ಕಂಪನಿ ನಡೆಸಿದ ಪ್ರದರ್ಶನದಲ್ಲಿ ಕಾಣಿಸಿಕೊಂಡಿದೆ.. ಅಲ್ಲಿಗೆ ಭೇಟಿ ನೀಡಿದ ಸೂಪರ್‌ಸ್ಟಾರ್ ರಜನಿಕಾಂತ್ ಅವರು 40 ವರ್ಷಗಳ ಹಿಂದೆ ಪಾಯುಂ ಪುಲಿಯಲ್ಲಿ ತಾವು ಬಳಸಿದ್ದ ಬೈಕ್‌ನಲ್ಲಿಯೇ ಕುಳಿತು ಸ್ಟೈಲ್ ಆಗಿ ಪೋಸ್ ಕೊಟ್ಟಿದ್ದರು. ಇದೀಗ ಆ ಫೋಟೋವನ್ನು ಎವಿಎಂ ಕಂಪನಿ ಬಿಡುಗಡೆ ಮಾಡಿ ಸಂತಸ ವ್ಯಕ್ತಪಡಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 
 

Trending News