Ashwini Puneeth Rajkumar: ಐಷಾರಾಮಿ ಕಾರು ಖರೀಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್:‌ ಇದರ ಬೆಲೆಯೆಷ್ಟು ಗೊತ್ತೇ!

Ashwini Puneeth Rajkumar New Car: ಕನ್ನಡ ಸಿನಿಮಾ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಸದ್ಯ ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.  

Written by - Zee Kannada News Desk | Last Updated : Mar 31, 2024, 08:10 PM IST
  • ಅಶ್ವಿನಿ ಪುನೀತ್ ರಾಜ್‌ಕುಮಾರ್ ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿ ಮಾಡಿದ್ದಾರೆ.
  • ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಕೊಂಡುಕೊಂಡಿರುವ ಆಡಿ ಕ್ಯೂ 7 ಕಾರು ಇನ್ನು ಕಾರಿನ ಒಳ ವಿನ್ಯಾಸ ಕೂಡ ಅದ್ಭುತವಾಗಿರುತ್ತದೆ.
  • ಹೊಸ ಕಾರಿನ ಜೊತೆ ಅಶ್ವಿನಿ ಪುನೀತ್​ ರಾಜ್‌ಕುಮಾರ್​ ನಿಂತಿರುವ ಫೋಟೋವನ್ನು ತೆಗೆಸಿಕೊಂಡಿದ್ದಾರೆ.
Ashwini Puneeth Rajkumar: ಐಷಾರಾಮಿ ಕಾರು ಖರೀಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್:‌ ಇದರ ಬೆಲೆಯೆಷ್ಟು ಗೊತ್ತೇ! title=

Ashwini Puneeth Rajkumar Purchased New Car: ಚಂದನವನದ ಪವರ್‌ ಸ್ಟಾರ್‌ ಪುನೀತ್​ ರಾಜ್‌ಕುಮಾರ್ ಅವರಿಗೆ  ಐಷಾರಾಮಿ ಕಾರಿನ ಕ್ರೇಜ್ ತುಂಬಾನೇ ಇತ್ತು. ಅದರಂತೆ ಇದೀಗ ಈ ನಟನ ಮಡದಿ​ ಅಶ್ವಿನಿ ಪುನೀತ್ ರಾಜ್‌ಕುಮಾರ್ ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿ ಮಾಡಿದ್ದಾರೆ. ಇದು ಗ್ರೇ ಬಣ್ಣದ ಕಾರು ಆಗಿದ್ದುಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಖರೀಸಿದ ಆಡಿ ಕ್ಯೂ 7 ಕಾರಿನ ಬೆಲೆ 1.10 ಕೋಟಿಯಿಂದ 1.20 ಕೋಟಿ ರೂಪಾಯಿಗಳ ವರೆಗೂ ಇದೆ ಎನ್ನಲಾಗುತ್ತಿದೆ. ಇವರು  ಆಡಿ ಕ್ಯೂ7 ಟಾಪ್ ಎಂಡ್ ಮಾಡೆಲ್ ಅನ್ನೇ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರು ಹಲವು ವೈಶಿಷ್ಟ್ಯತೆಗಳನ್ನು ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. 

ಇದನ್ನೂ ಓದಿ: ಐಶ್ವರ್ಯ ರೈ ದಂಪತಿಯ ಈ ಬಾರಿಯ ಹೋಲಿ ಸೆಲೆಬ್ರೇಷನ್ ಹೇಗಿತ್ತು ಗೊತ್ತಾ ?

ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಕೊಂಡುಕೊಂಡಿರುವ ಆಡಿ ಕ್ಯೂ 7 ಕಾರು ಇನ್ನು ಕಾರಿನ ಒಳ ವಿನ್ಯಾಸ ಕೂಡ ಅದ್ಭುತವಾಗಿರುತ್ತದೆ. ಎಂಟು ಏರ್‌ಬ್ಯಾಗ್ಸ್ ಸೇರಿದಂತೆ ಸಾಕಷ್ಟು ಸುರಕ್ಷತೆ ಕಾರ್‌ನಲ್ಲಿದೆ. ಕ್ಯಾಮೆರಾ, ಅಡಾಸ್ ತಂತ್ರಜ್ಞಾನ, ರೋಡ್​ ಗ್ರಿಪ್​ನ ಹಲವು ತಂತ್ರಜ್ಞಾನಗಳನ್ನು ಹೊಂದಿದೆ. ಒಂದು ಲೀಟರ್ ಪೆಟ್ರೋಲ್‌ಗೆ 14 ಕಿ.ಲೋವರೆಗೂ ಮೈಲೇಜ್ ನೀಡುತ್ತದೆ.

ಹೊಸ ಕಾರಿನ ಜೊತೆ ಅಶ್ವಿನಿ ಪುನೀತ್​ ರಾಜ್‌ಕುಮಾರ್​  ನಿಂತಿರುವ ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಆಡಿ ಕ್ಯೂ7 ಕಾರು ಖರೀದಿಸಿರುವ ವಿಚಾರವನ್ನು ಆಡಿ ಬೆಂಗಳೂರು ಸೆಂಟ್ರಲ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಈ ಫೋಟೋ ಸದ್ಯ ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದ್ದು, ಇದನ್ನು ನೋಡಿದ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News