ಮತ್ತೊಮ್ಮೆ ಈ ಕಾರಣಕ್ಕೆ ಸುದ್ದಿಯಾದ ಮಲೈಕಾ-ಅರ್ಜುನ್ ಜೋಡಿ

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಸಿಕ್ರೆಟ್ ಆಗಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದಂತು ರಹಸ್ಯವಾಗಿ ಉಳಿದಿಲ್ಲ. ತನಗಿಂತಲೂ ಹಿರಿಯಳಾಗಿರುವ ಮಲೈಕಾ ಆರೋರಾ ಜೊತೆಗೆ ಅರ್ಜುನ್ ಕಪೂರ್ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ.

Last Updated : Nov 28, 2020, 07:40 PM IST
ಮತ್ತೊಮ್ಮೆ ಈ ಕಾರಣಕ್ಕೆ ಸುದ್ದಿಯಾದ ಮಲೈಕಾ-ಅರ್ಜುನ್ ಜೋಡಿ title=

ನವದೆಹಲಿ: ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಸಿಕ್ರೆಟ್ ಆಗಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದಂತು ರಹಸ್ಯವಾಗಿ ಉಳಿದಿಲ್ಲ. ತನಗಿಂತಲೂ ಹಿರಿಯಳಾಗಿರುವ ಮಲೈಕಾ ಆರೋರಾ ಜೊತೆಗೆ ಅರ್ಜುನ್ ಕಪೂರ್ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ.

ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿರುವ 35 ವರ್ಷದ ಅರ್ಜುನ್ ಕಪೂರ್, ಮಲೈಕಾ ಆರೋರಾಳನ್ನು ಉಲ್ಲೇಖಿಸಿ "ಅವಳು ನಿನ್ನನ್ನು ನೋಡಿದಾಗ...'ಎಂದು ಅವರು ಬರೆದಿದ್ದಾರೆ. ಆದರೆ ಅಷ್ಟಕ್ಕೇ ಸುಮ್ಮನಿರದೆ ಮಲೈಕಾ ಆರೋರಾ ಮಾತ್ರ ಯಾರು? ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ಭಿನ್ನವಾಗಿ ಉತ್ತರಿಸಿದ ಅರ್ಜುನ್ ಕಪೂರ್ ಊಹಿಸಿಕೋ ಫೂಲ್ ಎಂದು ಪ್ರತಿಕ್ರಿಯಿಸಿದ್ದಾರೆ.ಅರ್ಜುನ್ ಅವರ ಪೋಸ್ಟ್ನಲ್ಲಿ, ಮಲೈಕಾ ಅವರ ಒಂದು ಪದದ ಕಾಮೆಂಟ್ ಅರ್ಜುನ್ ಅವರ ಕಾಮೆಂಟ್ ಸ್ವೀಕರಿಸಿದ 'ಲೈಕ್'ಗಳ ಗಿಂತ ಅಧಿಕ ಲೈಕ್ ಗಳಿಸಿದೆ.

ಅರ್ಜುನ್ ಕಪೂರ್ ಬರ್ತ್ ಡೇ ಗೆ ಪ್ರೇಯಸಿ ಮಲೈಕಾ ಆರೋರಾ ಶುಭ ಹಾರೈಸಿದ್ದು ಹೀಗೆ...!

 
 
 
 

 
 
 
 
 
 
 
 
 
 
 

A post shared by Arjun Kapoor (@arjunkapoor)

ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಇತ್ತೀಚೆಗೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಒಟ್ಟಿಗೆ ವಿಹಾರಕ್ಕೆ ಹೋಗಿದ್ದರು. ಅರ್ಜುನ್ ತನ್ನ ಸಹನಟ ಸೈಫ್ ಅಲಿ ಖಾನ್ ಅವರೊಂದಿಗೆ ಮುಂಬರುವ ಚಲನಚಿತ್ರ ಭೂಟ್ ಪೋಲಿಸ್ ಚಿತ್ರದ ಶೂಟಿಂಗ್ ವೇಳಾಪಟ್ಟಿಗಾಗಿ ಈಗಾಗಲೇ ಗಿರಿಧಾಮದಲ್ಲಿದ್ದರು. ಮಲೈಕಾ ಧರ್ಮಶಾಲಾದಲ್ಲಿ ಅರ್ಜುನ್ ಜೊತೆ ಸೇರಿದರೆ, ಕರೀನಾ ಕಪೂರ್ ಸೈಫ್ ಅಲಿ ಖಾನ್ ಅವರೊಂದಿಗೆ ದೀಪಾವಳಿಯನ್ನು ಕಳೆದರು. ಅರ್ಜುನ್ ಈ ಪ್ರವಾಸದ ಅಧಿಕೃತ ಛಾಯಾಗ್ರಾಹಕರಾಗಿ ಹೊರಹೊಮ್ಮಿದರು.

ಲವ್ ಬಗ್ಗೆ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್ -ಮಲೈಕಾ ಜೋಡಿ

ಕಳೆದ ವರ್ಷ ಪಾಣಿಪತ್ ನಟನ ಜನ್ಮದಿನದಂದು ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ತಮ್ಮ ಸಂಬಂಧವನ್ನು ಇನ್ಸ್ಟಾಗ್ರಾಮ್ ಅಧಿಕೃತಗೊಳಿಸಿದರು.ಅವಳು ತನ್ನ ಪೋಸ್ಟ್‌ನಲ್ಲಿ ಅರ್ಜುನ್‌ನನ್ನು "ನನ್ನ ಹುಚ್ಚು, ಅತ್ಯಂತ ತಮಾಷೆ ಮತ್ತು ಅದ್ಭುತ ಅರ್ಜುನ್ ಕಪೂರ್"ಎಂದು ಉಲ್ಲೇಖಿಸಿದ್ದಾಳೆ. 

Trending News