ಸ್ಯಾಂಡಲ್ ವುಡ್ ಸ್ಟಾರ್ ನಟರ ತ್ರಿವೇಣಿ ಸಂಗಮಕ್ಕೆ ಸಜ್ಜಾಗಿದೆ ವೇದಿಕೆ.! ಶಿವಣ್ಣ, ಉಪ್ಪಿ ಮತ್ತೆ ಒಂದಾಗಿ ನಟಿಸೋದು ಫಿಕ್ಸ್!

ಚಂದನವನದಲ್ಲಿ ಮಾಸ್ ಚಿತ್ರಗಳಿಗೆ ಮಾಸ್ಟರ್ ಪೀಸ್ ಗಳಾಗಿರೋ ಜೋಡಿ ಯಾರು ಅಂತ ಯಾರನ್ನ ಕೇಳಿದ್ರೆ ಯೋಚನೆ ಮಾಡದೆ ಶಿವಣ್ಣ-ಉಪ್ಪಿ ಅಂತಾರೆ‌. ತೆರೆ ಮೇಲೆ ಮಾತ್ರವಲ್ಲ ತೆರೆ ಹಿಂದೆಯು ಲವ ಕುಶರಂತಿರೋ ಈ ಓಂ ಜೋಡಿ, ಮಾಡಿದ ಮೂರೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿವೆ.  

Written by - YASHODHA POOJARI | Edited by - Ranjitha R K | Last Updated : Dec 21, 2022, 12:18 PM IST
  • ಸ್ಯಾಂಡಲ್ ವುಡ್ ನಲ್ಲಿ ಮಲ್ಟಿಸ್ಟಾರ್ ಸಿನಿಮಾ ಬರೋದೆ ಕಮ್ಮಿ.
  • ಸ್ಯಾಂಡಲ್ ವುಡ್ ಸ್ಟಾರ್ ನಟರ ತ್ರಿವೇಣಿ ಸಂಗಮಕ್ಕೆ ಸಜ್ಜಾಗಿದೆ
  • ಅರ್ಜುನ್ ಜನ್ಯ ನಿರ್ದೇಶನದಲ್ಲಿ ಮೂಡಿ ಬರಲಿದೆ ಚಿತ್ರ
 ಸ್ಯಾಂಡಲ್ ವುಡ್ ಸ್ಟಾರ್ ನಟರ ತ್ರಿವೇಣಿ ಸಂಗಮಕ್ಕೆ ಸಜ್ಜಾಗಿದೆ ವೇದಿಕೆ.!  ಶಿವಣ್ಣ, ಉಪ್ಪಿ ಮತ್ತೆ ಒಂದಾಗಿ ನಟಿಸೋದು ಫಿಕ್ಸ್! title=

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಮಲ್ಟಿಸ್ಟಾರ್ ಸಿನಿಮಾ ಬರೋದೆ ಕಮ್ಮಿ. ಆದ್ರೆ ಈಗ ಸ್ಯಾಂಡಲ್ ವುಡ್, ಸ್ಟಾರ್ ನಟರ ತ್ರಿವೇಣಿ ಸಂಗಮಕ್ಕೆ ಸಜ್ಜಾಗಿದೆ. ಒಬ್ರು ಕರುನಾಡಿಗೆ ಚಕ್ರವರ್ತಿ ಆದ್ರೆ, ಇನ್ನೊಬ್ರು ಅಭಿಮಾನಿಗಳಿಗೆ ಚಕ್ರವರ್ತಿ. ಈ ಚಕ್ರವರ್ತಿಗಳ ಜೊತೆಗೆ ಈಗ ಗರುಡ ಗಮನವನ್ನೇರಿ ಅಬ್ಬರಿಸಿರೋ ಮೊಟ್ಟೆ ಸ್ಟಾರ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಅಷ್ಟಕ್ಕೂ 
ಮೂರು ಸ್ಟಾರ್ ನಟರು ಒಟ್ಟಿಗೆ ತೆರೆ ಹಂಚಿಕೊಳ್ಳಕೆ ಸಿದ್ದವಾಗಿರೋ ಆ ಸಿನಿಮಾ ಯಾವ್ದು  ? ಚಿತ್ರದ ಕತೆ ಏನು? ಈ ಸ್ಟಾರ್ ನಟರ ಒಟ್ಟಿಗೆ ತೋರಿಸೋಕೆ‌ ಹೊರಟಿರೋ ಆ ಸಾಹಸಿ ನಿರ್ದೇಶಕ ಯಾರು  ನೋಡೋಣ. 

ಚಂದನವನದಲ್ಲಿ ಮಾಸ್ ಚಿತ್ರಗಳಿಗೆ ಮಾಸ್ಟರ್ ಪೀಸ್ ಗಳಾಗಿರೋ ಜೋಡಿ ಯಾರು ಅಂತ ಯಾರನ್ನ ಕೇಳಿದ್ರೆ ಯೋಚನೆ ಮಾಡದೆ ಶಿವಣ್ಣ-ಉಪ್ಪಿ ಅಂತಾರೆ‌. ತೆರೆ ಮೇಲೆ ಮಾತ್ರವಲ್ಲ ತೆರೆ ಹಿಂದೆಯು ಲವ ಕುಶರಂತಿರೋ ಈ ಓಂ ಜೋಡಿ, ಮಾಡಿದ ಮೂರೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿವೆ. 

ಇದನ್ನೂ ಓದಿ : ಕಾಂತಾರದಲ್ಲಿ ರಿಷಬ್ ಸೇರಿದಂತೆ ಇಡೀ ತಾರಾಗಣ ಪಡೆದ ಸಂಭಾವನೆ ಎಷ್ಟು? ಕೇಳಿದ್ರೆ ಬೆಚ್ಚಿಬೀಳ್ತಿರಾ!

ಅಲ್ಲದೆ ಈ ಜೋಡಿಯ ಮೊದಲ ಚಿತ್ರ ಓಂ ದಾಖಲೆಯನ್ನ ಟಚ್ ಮಾಡೋಕೂ ಆಗಿಲ್ಲ. ಶಿವಣ್ಣ, ಉಪ್ಪಿ ಒಟ್ಟಿಗೆ ಬರ್ತಾರೆ ಅಂದ್ರೆ ಅಲ್ಲಿ ದಾಖಲೆ ಫಿಕ್ಸ್ ಅನ್ನೋ ಟ್ರೆಂಡ್ ಸೆಟ್ ಮಾಡಿದೆ ಈ ಮಾಸ್ ಮಹಾರಾಜರ ಕಾಂಬೋ. ಆ ದ್ರೆ ಈ ಜೋಡಿ ಕೆಲವು ವರ್ಷಗಳಿಂದ ಒಟ್ಟಿಗೆ ಕಾಣಿಸಿಲ್ಲ. ಲವ್ ಕುಶ ಬಂದ ನಂತರ ಈ ಜೋಡಿಯನ್ನ ಬೆಳ್ಳಿ ತೆರೆ ಮೇಲೆ ಒಟ್ಟಿಗೆ ನೋಡಬೇಕು ಅನ್ನೋ ಲಕ್ಷಾಂತರ ಅಭಿಮಾನಿಗಳ ಕನಸು ಕನಸಾಗಿಯೇಉಳಿದಿದೆ.

ಆದರೆ ಈಗ ಅಭಿಮಾನಿಗಳ ಬಹುದಿನದ ಕನಸು ನನಸಾಗೊ ಅಮೃತಘಳಿಗೆ ಬಂದಿದೆ. ಯೆಸ್ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್‌ ಕ್ರಿಯೇಟ್ ಮಾಡಿರುವ ಶಿವಣ್ಣ ಮತ್ತು ಉಪ್ಪಿ ಈಗ ಮತ್ತೆ ಒಟ್ಟಿಗೆ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಿಶೇಷ ಅಂದ್ರೆ ಈ ಹಿಟ್ ಜೋಡಿಯ ಜೊತೆಗೆ  ಒಂದು ಮೊಟ್ಟೆಯ ಕತೆ ಹೇಳಿ, ಗರುಡ ಗಮನನಾಗಿ ಮಾದೇವ ಮಾದೇವಅಂತ 
ಮೈ ಮರೆತು ಕುಣಿದು ಅಬ್ಬರಿಸಿದ್ದ ಉದಯೋನ್ಮುಖ ಪ್ರತಿಭೆ ರಾಜ್ ಬಿ ಶೆಟ್ಟಿ ಕೂಡ ಜಾಯ್ನ್ ಆಗಿದ್ಧಾರೆ. ಶಿವಣ್ಣ ಉಪ್ಪಿಯನ್ನ ಒಟ್ಟಿಗೆ ನೋಡೊದೇ  ಬಿರ್ಯಾನಿ ತಿಂದಂಗೆ, ಇ‌ನ್ನು ಇವರ ಜೊತೆ ರಾಜ್ ಬಿ ಶೆಟ್ಟಿ ಸೇರ್ಕೊಂಡಿದ್ದಾರೆ ಅಂದ್ರೆ ಭರ್ಜರಿ ಬಾಡೂಟ ಅಂತಿದ್ದಾರೆ ಸಿನಿರಸಿಕರು. ಆದರೆ ಈ ಮೂರುಜನ ಸಕಲಕಲಾವಲ್ಲಭರನ್ನು ಒಟ್ಟಿಗೆ ಸೇರಿಸುವ ಸಾಹಸ ಮಾಡಿದ್ಯಾರು ? ಯಾವ ಚಿತ್ರಕ್ಕಾಗಿ ಈ ಜೋಡಿಯನ್ನ ಒಂದು ಕಡೆ ಸೇರ್ಸಿದ್ದಾರೆ ಅಂತ ಕೇಳಿದ್ರೆ ಅದಕ್ಕೆ ಉತ್ತರ ಅರ್ಜುನ್ ಜನ್ಯ.

ಇದನ್ನೂ ಓದಿ : WATCH: ಚಿರತೆ ರೂಪದಲ್ಲಿ ಉರ್ಫಿ ಜಾವೇದ್ ಪ್ರತ್ಯಕ್ಷ...!

ತಮ್ಮ ಮ್ಯಾಜಿಕಲ್ ಕಂಪೋಸ್ ಮೂಲಕ ಸಂಗೀತ ಪ್ರಿಯರ ಜೋಳಿಗೆಯಲ್ಲಿ ಅರಸನಾಗಿರೋ ಅರ್ಜುನ್ ಜನ್ಯ, ಈಗ ನಿರ್ದೇಶನಕ್ಕೂ ಕೈ ಹಾಕಿದ್ದಾರೆ.  ಆ ಚಿತ್ರಕ್ಕೆ ವರ್ಕಿಂಗ್ ಟೈಟಲ್ ಆಗಿ 45 ಅಂತ ಫಿಕ್ಸ್ ಮಾಡಿದ್ದಾರೆ. ತನ್ನ ಮೊದಲ ಚಿತ್ರಕ್ಕೆ ಶಿವಣ್ಣನೇ ಹೀರೋ ಎಂದು ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಅಲ್ಲದೆ ಶಿವಣ್ಣನ ಜೊತೆ ರಾಜ್ ಬಿಶೆಟ್ಟಿ ಕೂಡ ಇರ್ತಾರೆ ಅಂತಹೇಳಿದ್ದ ಅರ್ಜುನ್ ಈಗ ಇವರ ಜೊತೆಗೆ ಉಪ್ಪಿಯನ್ನು ಕರ್ಕೊಂಡ್ ಬಂದಿದ್ದಾರೆ. ಈ ಮೂಲಕ ಸಂಗೀತದಲ್ಲಿ ಮೋಡಿ ಮಾಡಿದ್ದ ಅರ್ಜುನ್ ತಮ್ಮ ಚಿತ್ರದ ಸ್ಟಾರ್ ಕಾಸ್ಟ್ ನಲ್ಲೂ ಮ್ಯಾಜಿಕ್ ಮಾಡಿದ್ದಾರೆ. ಇನ್ನು ಈ ಮೂರು ಜನ ಒಟ್ಟಿಗೆ ನಟಿಸೋ ಕಾರಣ ಚಿತ್ರದ ಮೇಲಿನ ನಿರೀಕ್ಷೆ ಮೌಂಟ್ ಎವರೆಸ್ಟ್ ನಂತೆ ಬೆಳೆದು ನಿಂತಿದೆ. ಜೊತೆಗೆ ಮೊದಲ ಚಿತ್ರದಲ್ಲಿ ಫಸ್ಟ್ ಕ್ಲಾಸ್ ಪಾಸಾಗಲೇ ಬೇಕು ಅಂತ ಒಂದೊಳ್ಳೊ ಮಾಸ್ ಸಬ್ಜೆಕ್ಟ್ ರೆಡಿ ಮಾಡ್ಕೊಂಡಿದ್ದಾರಂತೆ ಅರ್ಜುನ್ ಜನ್ಯ.

ಗಾಳಿಪಟ 2  ಹಿಟ್ ನಂತರ ಜೋಶ್ ನಲ್ಲಿರೋ ನಿರ್ಮಾಪಕ ರಮೇಶ್ ರೆಡ್ಡಿ ಈ ಚಿತ್ರಕ್ಕೆ ಬಂಡವಾಳ  ಹಾಕುತ್ತಿದ್ದಾರೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸ ಕಂಪ್ಲೀಟ್ ಮಾಡಿರೋ ಅರ್ಜುನ್ ಜನ್ಯ, ಜನವರಿ  ಕೊನೆ ಅಥವಾ ಫೆಬ್ರವರಿಯಲ್ಲಿ ಈ ಚಿತ್ರದ ಶೂಟಿಂಗ್ ಶುರು ಮಾಡಲು ಪ್ಲಾನ್ ಮಾಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News