APPU CUP 2023 : ಅಪ್ಪು ಕಪ್ ಸೀಸನ್-2 ಬ್ಯಾಡ್ಮಿಂಟನ್ ಲೀಗ್ ಲೋಗೋ ಅನಾವರಣ...!

ಅಪ್ಪು ಕಪ್ ಸೀಸನ್-2 ಸ್ಯಾಂಡಲ್ ವುಡ್ ಬ್ಯಾಡ್ಮಿಂಟನ್ ಲೀಗ್ ಲೋಗೋ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನಲ್ಲಿ ನೆರವೇರಿತು. ಭಾರತೀಯ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಲೋಗೋ ಅನಾವರಣ ಮಾಡಿ ಆಟಗಾರರಿಗೆ ಶುಭ ಕೋರಿದರು.

Written by - YASHODHA POOJARI | Edited by - Krishna N K | Last Updated : Jun 21, 2023, 05:58 PM IST
  • ಅಪ್ಪು ಕಪ್ ಸೀಸನ್-2 ಸ್ಯಾಂಡಲ್ ವುಡ್ ಬ್ಯಾಡ್ಮಿಂಟನ್ ಲೀಗ್ ಲೋಗೋ ಬಿಡುಗಡೆ
  • ಲೋಗೋ ಅನಾವರಣ ಮಾಡಿದ ಭಾರತೀಯ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ
  • ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ಆಯೋಜಿಸಲಾಗಿರುವ ಅಪ್ಪು ಕಪ್ ಸೀಸನ್-2
APPU CUP 2023 : ಅಪ್ಪು ಕಪ್ ಸೀಸನ್-2 ಬ್ಯಾಡ್ಮಿಂಟನ್ ಲೀಗ್ ಲೋಗೋ ಅನಾವರಣ...! title=

APPU CUP 2023 : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ಆಯೋಜಿಸಲಾಗಿರುವ ಅಪ್ಪು ಕಪ್ ಸೀಸನ್-2 ಸ್ಯಾಂಡಲ್ ವುಡ್ ಬ್ಯಾಡ್ಮಿಂಟನ್ ಲೀಗ್ ಲೋಗೋ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನಲ್ಲಿ ನೆರವೇರಿತು. ಭಾರತೀಯ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಲೋಗೋ ಅನಾವರಣ ಮಾಡಿ ಆಟಗಾರರಿಗೆ ಶುಭಾಶಯ ಕೋರಿದರು. 

ಈ ವೇಳೆ ಮಾತನಾಡಿದ ಪ್ರಕಾಶ್ ಪಡುಕೋಣೆ, ಪುನೀತ್ ರಾಜ್ ಕುಮಾರ್ ಅವರು ನನಗೆ ಪರ್ಸನಲ್ ಆಗಿ ಗೊತ್ತಿದ್ದರು. ತುಂಬಾ ಫ್ರೆಂಡ್ಲಿಯಾಗಿದ್ದವರು. ಐದಾರು ವರ್ಷದ ಹಿಂದೆ ನಾವೊಂದು ಇವೆಂಟ್ ಮಾಡಿದ್ದೇವು. ಒಂದೇ ಒಂದು ಫೋನ್ ಕಾಲ್‌ಗೆ ಬಂದು ನಮ್ಮ ಜೊತೆ ಎಕ್ಸಿಬ್ಯೂಷನ್ ಮ್ಯಾಚ್ ಆಡಿದ್ದರು. ಸ್ಯಾಂಡಲ್‌ವುಡ್ ಇಂಡಸ್ಟ್ರೀಯಲ್ಲಿ ತುಂಬಾ ಜನ ಬ್ಯಾಡ್ಮಿಂಟನ್ ಆಡುತ್ತಾರೆ ಅನ್ನೋದನ್ನು ಕೇಳಿ ಖುಷಿ ಆಯ್ತು. ಅಪ್ಪು ಕಪ್ ಸ್ಯಾಂಡಲ್ವುಡ್ ಬ್ಯಾಡ್ಮಿಂಟನ್ ಹೀಗೆ ಮುಂದುವರೆಯಲಿ ಎಂದರು. 

ಇದನ್ನೂ ಓದಿ: ಬಿಲ್ಲಿನಂತೆ ದೇಹ ಮಣಿಸಿದ ತುಪ್ಪದ ಬೆಡಗಿ ರಾಗಿಣಿ, ಇಲ್ಲಿವೆ ಫೋಟೋಸ್‌

ಕನ್ನಡ ಕಲಾವಿದರು, ತಂತ್ರಜ್ಞನರು ಹಾಗೂ ಮಾಧ್ಯಮದವರು ಆಡಲಿರುವ ಈ ಪಂದ್ಯಾವಳಿ ಆಗಸ್ಟ್ ತಿಂಗಳಾಂತ್ಯಕ್ಕೆ ಶುರುವಾಗಲಿದೆ. ಕಳೆದ ಬಾರಿ ಒಟ್ಟು ಎಂಟು ತಂಡಗಳು ಭಾಗಿಯಾಗಿದ್ದವು. ದಿಗಂತ್, ಸೃಜನ್ ಲೋಕೇಶ್, ವಸಿಷ್ಠ ಸಿಂಹ, ಪ್ರಿಯಾಂಕಾ ಉಪೇಂದ್ರ, ರಾಗಿಣಿ, ಕವಿತಾ ಲಂಕೇಶ್, ಶ್ವೇತಾ ಶ್ರೀವಾಸ್ತವ್, ಮಾಸ್ಟರ್ ಆನಂದ್ ತಂಡದ ಪೈಕಿ ಸೃಜನ್ ಲೋಕೇಶ್ ನೇತೃತ್ವದ ರಾಜ್ ಕುಮಾರ ಕಿಂಗ್ಸ್ ಕಳೆದ ಬಾರಿ ಗೆಲುವು ಸಾಧಿಸಿತ್ತು. ಈ ಬಾರಿ ಮತ್ತಷ್ಟು ತಾರೆಯರು ಅಪ್ಪು ಕಪ್ ಸೀಸನ್-2 ಸ್ಯಾಂಡಲ್ವುಡ್ ಬ್ಯಾಡ್ಮಿಂಟನ್ ಲೀಗ್ ಮೆರಗು ಹೆಚ್ಚಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News