Antim The Final Truth : ಸಲ್ಲು ಅಭಿನಯದ 'ಅಂತಿಮ್​' ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

Antim The Final Truth:'ಅಂತಿಮ್​' ತನ್ನ ಮೊದಲ ದಿನ  4.25-4.50  ಕೋಟಿ ಗಳಿಸಿದೆ. ಸಲ್ಮಾನ್ ಖಾನ್  ಅಭಿನಯದ ಈ ಸಿನಿಮಾ ಜಾನ್ ಅಬ್ರಹಾಂ ಅಭಿನಯದ 'ಸತ್ಯಮೇವ್ ಜಯತೇ 2' ಚಿತ್ರಕ್ಕೆ ಪೈಪೋಟಿ ನೀಡುತ್ತಿದೆ.  

Written by - Zee Kannada News Desk | Last Updated : Nov 27, 2021, 02:38 PM IST
  • ಶುಕ್ರವಾರ ತೆರೆಕಂಡ Antim The Final Truth
  • 'ಅಂತಿಮ್​' ಚಿತ್ರದ ಮೊದಲ ದಿನದ ಕಲೆಕ್ಷನ್
  • 'ಸತ್ಯಮೇವ್ ಜಯತೇ 2'ಗೆ ಪೈಪೋಟಿ ನೀಡುತ್ತಿರುವ ಚಿತ್ರ
 Antim The Final Truth : ಸಲ್ಲು ಅಭಿನಯದ 'ಅಂತಿಮ್​' ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?  title=
ಶುಕ್ರವಾರ ತೆರೆಕಂಡ Antim The Final Truth (file photo)

ನವದೆಹಲಿ : ಸಲ್ಮಾನ್ ಖಾನ್ (Salman Khan) ಮತ್ತು ಅವರ  ಭಾಮೈದ ಆಯುಷ್ ಶರ್ಮಾ (Ayush Sharma) ಮುಖ್ಯ  ಪಾತ್ರದಲ್ಲಿ ನಟಿಸಿರುವ Antim: The Final Truth ಸಿನಿಮಾ, ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.  

ಇತ್ತೀಚಿನ ವರದಿಯ ಪ್ರಕಾರ, 'ಅಂತಿಮ್​' (Antim: The Final Truth) ಬಿಡುಗಡೆಯಾದ ಮೊದಲ ದಿನ ರೂ 4.25-4.50 ಕೋಟಿ ಗಳಿಸಿದೆ.  ಶನಿವಾರ (ನ.27) ಮತ್ತು ಭಾನುವಾರ (ನ.29) ವಾರಾಂತ್ಯದ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದ ಕಡೆಗೆ ಬರುವ ನಿರೀಕ್ಷೆ ಇದೆ. 

ಇದನ್ನೂ ಓದಿ : '83' ಸಿನೆಮಾ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರ ತಂಡ, ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿದ ಟೀಸರ್​

'ಅಂತಿಮ್​'  ಜಾನ್ ಅಬ್ರಹಾಂ (John Abraham) ಅಭಿನಯದ 'ಸತ್ಯಮೇವ್ ಜಯತೇ 2' ಚಿತ್ರದೊಂದಿಗೆ ಪೈಪೋಟಿ ನೀಡುತ್ತಿದೆ.  ಮಹೇಶ್ ಮಂಜ್ರೇಕರ್ (Mahesh Manjrekar) ನಿರ್ದೇಶನದ, 'ಅಂತಿಮ್​' ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ಭಾಮೈದ ಆಯುಷ್ ಶರ್ಮಾ ಗೂಂಡಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದು ಮರಾಠಿಯ ಹಿಟ್ ಸಿನಿಮಾ 'ಮುಲ್ಶಿ ಪ್ಯಾಟರ್ನ್' ರಿಮೇಕ್ ಆಗಿದೆ. 

ಚಿತ್ರದಲ್ಲಿನ ತಮ್ಮ ಪೊಲೀಸ್ ಪಾತ್ರದಲ್ಲಿ ಸಲ್ಮಾನ್ ಖಾನ್ (Salman Khan) ಅಭಿನಯಿಸಿದ್ದಾರೆ. ಸಲ್ಮಾನ್​ ಖಾನ್​ ಈ ಸಿನಿಮಾದ ಹೆಚ್ಚಿನ  ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಅವರಿಗಿಂತಲೂ ಹೆಚ್ಚಾಗಿ ಆಯುಷ್ ಶರ್ಮಾ (Ayush Sharma) ಮಿಂಚಿದ್ದಾರೆ. 

ಇದನ್ನೂ ಓದಿ : Priyanka Chopra: ಪತಿ ನಿಕ್ ಜೊತೆ ಮೋಹಕ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News