Pushpa: The Rise - 100 ಕೋಟಿ ಸಂಪಾದನೆ ಮಾಡಿದ ಚಿತ್ರಗಳ ಕ್ಲಬ್ ಸೇರಿದ Allu Arjun ಅಭಿನಯದ 'ಪುಷ್ಪ' ಹಿಂದಿ ಆವೃತ್ತಿ

Pushpa Box Office Collection - ಡಿಸೆಂಬರ್ 17 ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ವಿಶ್ವಾದ್ಯಂತ 300 ಕೋಟಿ ಕಲೆಕ್ಷನ್ ಮಾಡಿದೆ.

Written by - Nitin Tabib | Last Updated : Jan 31, 2022, 05:38 PM IST
  • 100 ಕೋಟಿ ಗಳಿಕೆ ಮಾಡಿದ ಚಿತ್ರಗಳ ಕ್ಲಬ್ ಸೇರಿದ ಪುಷ್ಪಾ (ಹಿಂದಿ)
  • ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ ಟ್ರೇಡ್ ಅನಾಲಿಸ್ಟ್ ರಮೇಶ್ ಬಾಲಾ,
  • ಇಲ್ಲಿಯವರೆಗೆ ಈ ದಾಖಲೆ ರಜನಿಕಾಂತ್ ಮತ್ತು ಪ್ರಭಾಸ್ ಹೆಸರಿನಲ್ಲಿತ್ತು ಎಂದ ಬಾಲಾ
Pushpa: The Rise - 100 ಕೋಟಿ ಸಂಪಾದನೆ ಮಾಡಿದ ಚಿತ್ರಗಳ ಕ್ಲಬ್ ಸೇರಿದ Allu Arjun ಅಭಿನಯದ 'ಪುಷ್ಪ' ಹಿಂದಿ ಆವೃತ್ತಿ title=
Pushpa Box Office Collection (File Photo)

Allu Arjun ಅಭಿನಯದ ಚಿತ್ರ  Pushpa: The Rise ಬಿಡುಗಡೆಯಾಗಿ ಒಂದು ತಿಂಗಳು ಕಳೆದಿದೆ. ಇದನ್ನು ನೋದದವು ಇನ್ನೂ ಟಿಕೆಟ್ ಕಾಯ್ದಿರಿಸಿ ಥಿಯೇಟರ್ ತಲುಪುತ್ತಿದ್ದಾರೆ ಮತ್ತು ಇದರಿಂದಾಗಿ ಈ ಚಿತ್ರದ ಹಿಂದಿ ಆವೃತ್ತಿ 100 ಕೋಟಿ ಕಲೆಕ್ಷನ್ ಮಾಡಿದೆ. ಇದು ಪ್ರಾದೇಶಿಕ ಚಿತ್ರವೊಂದರ ದೊಡ್ಡ ಸಾಧನೆ ಎಂದೇ ಹೇಳಬಹುದು. ಪುಷ್ಪ ಅಮೆಜಾನ್ ಪ್ರೈಮ್‌ನಲ್ಲಿಯೂ (Amazon Prime) ಲಭ್ಯವಿದೆ ಆದರೆ ಈ ಚಿತ್ರದ ಕ್ರೇಜ್ ಜನರಲ್ಲಿ ಯಾವ ರೀತಿ ಇದೆ ಎಂದರೆಇನ್ನೂ ಥಿಯೇಟರ್‌ಗಳಲ್ಲಿ  ಜನಸಂದಣಿ ಕಡಿಮೆಯಾಗುತ್ತಿಲ್ಲ.

ಡಿಸೆಂಬರ್ 17 ರಂದು ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿತ್ತು. ವಿಶ್ವಾದ್ಯಂತ 300 ಕೋಟಿ ಕಲೆಕ್ಷನ್ ಮಾಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಇನ್ನೂ ಮೇಲುಗೈ ಸಾಧಿಸಿದೆ. ಜನವರಿ 31 ರಂದು, ಟ್ರೇಡ್ ಅನಾಲಿಸ್ಟ್  ರಮೇಶ್ ಬಾಲಾ (Ramesh Bala) ಚಿತ್ರದ ಹಿಂದಿ ಆವೃತ್ತಿಯ ಗಳಿಕೆಯ ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವರು ಅಲ್ಲು ಅರ್ಜುನ್‌ಗೆ ಅಭಿನಂದನೆ ಕೂಡ ಸಲ್ಲಿಸಿದ್ದಾರೆ. ಇಲ್ಲಿಯವರೆಗೆ ಈ ದಾಖಲೆ ರಜನಿಕಾಂತ್ ಮತ್ತು ಪ್ರಭಾಸ್ ಹೆಸರಿನಲ್ಲಿತ್ತು ಆದರೆ ಈಗ ಅಲ್ಲು ಕೂಡ ಈ ಪಟ್ಟಿಗೆ ಸೇರಿಕೊಂಡಿದ್ದಾರೆ ಎಂದು ರಮೇಶ್ ಬಾಲಾ ಹೇಳಿದ್ದು, ಅನೇಕ ಅಭಿನಂದನೆಗಳು ಎಂದಿದ್ದಾರೆ. 

ಇದನ್ನೂ ಓದಿ-ವೈರಲ್ ಫೋಟೋಗಳಲ್ಲಿರುವುದು ಪ್ರಿಯಾಂಕಾ-ನಿಕ್ ಮಗುವೇ? ಇಲ್ಲಿದೆ ಅಸಲಿ ವಿಚಾರ

ಪುಷ್ಪಾ(Pushpa The Rise) ಚಿತ್ರಕ್ಕೆ ದೊರೆತ ಯಶಸ್ಸಿನಿಂದ ಉತ್ಸುಕರಾದ ಅಲ್ಲು ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಭಾವುಕರಾಗಿದ್ದಾರೆ.  ಚಿತ್ರದ ನಿರ್ದೇಶಕ ಸುಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿದ ಅವರು, ಸುಕುಮಾರ್ ನಿರ್ದೇಶನದಲ್ಲಿ ತಯಾರಾದ 'ಆರ್ಯ' ಚಿತ್ರವು ತಮ್ಮ ಚಿತ್ರಕಥೆಗೆ ತಿರುವು ನೀಡಿದೆ. ಭಾವುಕರಾದ ಅಲ್ಲು ಅರ್ಜುನ್, 'ಆರ್ಯ ಇಲ್ಲದೆ ನಾನು ಏನೂ ಅಲ್ಲ. ಸುಕುಮಾರ್ ಇಲ್ಲದೆ ನಾನೇನೂ ಅಲ್ಲ. ಅವರು ತಮ್ಮ ಮೊದಲ ಕಾರಿನ ಬಗ್ಗೆಯೂ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ-Bigg Boss 15 Finale: ತೇಜಸ್ವಿ ಪ್ರಕಾಶ್ ವಿನ್ನರ್, ಟ್ರೋಫಿಯೊಂದಿಗೆ ಸಿಕ್ಕ ನಗದು ಬಹುಮಾನವೆಷ್ಟು ಗೊತ್ತಾ..?

ಆರ್ಯ ನಂತರ ನಾನು ನನ್ನ ಮೊದಲ ಕಾರನ್ನು ಖರೀದಿಸಿದ್ದು, ಅದರ ಬೆಲೆ ಸುಮಾರು 85 ಲಕ್ಷ ರೂ. ಆ ಸಮಯದಲ್ಲಿ ಡ್ರೈವಿಂಗ್ ಸೀಟಿನಲ್ಲಿ ಕುಳಿತ ಕೂಡಲೇ ನನ್ನ ಕನಸನ್ನು ನನಸಾಗಿಸಲು ನನಗೆ ಬೆಂಬಲ ನೀಡಿದವರು ನೆನಪಾದರು. ಆ ಸಮಯದಲ್ಲಿ ನನ್ನ ನೆನಪಿಗೆ ಬಂದ ಮೊದಲ ವ್ಯಕ್ತಿ ಸುಕುಮಾರ್. ಸುಕ್ಕು ನೀನಿಲ್ಲದೆ ನಾನೇನೂ ಅಲ್ಲ. ಆರ್ಯ ಇಲ್ಲದೆ ನಾನೇನೂ ಅಲ್ಲ. ನಾನು ಭಾವೋದ್ವೇಗಕ್ಕೆ ಒಳಗಾಗಲು ಬಯಸಲಿಲ್ಲ ಆದರೆ ನನ್ನಿಂದ ತಡೆಯಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ-U19 World Cup ಸ್ಕೋರ್ ಕಾರ್ಡ್ ನಲ್ಲಿ ಕಂಡ Vicky Kaushal ಹೆಸರು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News