ಆಲಿಯಾ - ರಣಬಿರ್‌ ವಿಚ್ಛೇದನ? ಕಂಗನಾ ನಂತರ, ನೀತು ಕಪೂರ್ ಪೋಸ್ಟ್ ಹೆಚ್ಚಿಸಿತು ಆತಂಕ!

Alia Bhatt Ranbir Kapoor : ಈ ಸಮಯದಲ್ಲಿ ಆಲಿಯಾ ಭಟ್ ಅವರ ಸಂಪೂರ್ಣ ಗಮನವು ಅವರ ವೃತ್ತಿಜೀವನದ ಮೇಲಿದೆ. ಅವರ ಹಾಲಿವುಡ್ ಚೊಚ್ಚಲ ಚಿತ್ರದ ಪ್ರಚಾರ ನಡೆಯುತ್ತಿದೆ. ಅವರ ಬಾಲಿವುಡ್ ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ.    

Written by - Chetana Devarmani | Last Updated : Jul 20, 2023, 07:35 AM IST
  • ಆಲಿಯಾ ಭಟ್‌ - ರಣಬಿರ್‌ ಕಪೂರ್‌ ಸಂಬಂಧದಲ್ಲಿ ಬಿರುಕು
  • "ನಮ್ಮ ಕುಟುಂಬಗಳು ಇನ್ನು ಮುಂದೆ ಒಂದೇ ಆಗಿಲ್ಲ"
  • ಆಲಿಯಾ ಅತ್ತೆ ನೀತು ಕಪೂರ್ ಪೋಸ್ಟ್ ಹೆಚ್ಚಿಸಿತು ಆತಂಕ!
ಆಲಿಯಾ - ರಣಬಿರ್‌ ವಿಚ್ಛೇದನ? ಕಂಗನಾ ನಂತರ, ನೀತು ಕಪೂರ್ ಪೋಸ್ಟ್ ಹೆಚ್ಚಿಸಿತು ಆತಂಕ!   title=

Ranbir Kapoor Alia Bhatt: ನಟಿ ನೀತು ಕಪೂರ್ ಜುಲೈ 8 ರಂದು 65 ನೇ ವರ್ಷಕ್ಕೆ ಕಾಲಿಟ್ಟರು. ಆದರೆ ಅವರ ಈ ಜನ್ಮದಿನದ ಕೆಲವು ಫೋಟೋಗಳು ಒಂದಷ್ಟು ವದಂತಿಗೆ ಕಾರಣವಾಗಿವೆ. ಈ ಹುಟ್ಟುಹಬ್ಬದಂದು ಅವರ ಸೊಸೆ ಆಲಿಯಾ ಭಟ್ ಕುಟುಂಬದೊಂದಿಗೆ ಇರಲಿಲ್ಲ. ಮೊದಲು ನಟಿ ಕಂಗನಾ ರಣಾವತ್ ಈ ವಿಷಯದ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದರು. ಈಗ ನೀತು ಕಪೂರ್ ಕೂಡ ಇದಕ್ಕೆ ಸಂಬಂಧಿಸಿರುವ ಸಂಗತಿಯನ್ನು ಹೇಳಿದ್ದಾರೆ. 

ಆಲಿಯಾ ಭಟ್ ಮತ್ತು ಕಪೂರ್ ಕುಟುಂಬದ ನಡುವೆ ಎಲ್ಲವೂ ಸರಿಯಾಗಿದೆಯೇ ಎಂಬ ಚರ್ಚೆಗಳು ಬಾಲಿವುಡ್‌ನ ಗಾಸಿಪ್ ವಲಯಗಳಲ್ಲಿ ನಡೆಯುತ್ತಿವೆ. ಆಲಿಯಾ ಭಟ್ ಈ ದಿನಗಳಲ್ಲಿ ತನ್ನ ಮುಂಬರುವ ಬಾಲಿವುಡ್ ಸಿನಿಮಾ ರಾಕಿ ಮತ್ತು ರಾಣಿ ಕಿ ಪ್ರೇಮ್ ಕಹಾನಿ ಮತ್ತು ಹಾಲಿವುಡ್‌ನ ಹಾರ್ಟ್ ಆಫ್ ಸ್ಟೋನ್ ಚಿತ್ರಗಳ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: 'ಹಾಸ್ಟೆಲ್ ಹುಡುಗರು' ವಿರುದ್ಧ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಗರಂ.! 1 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ

ವಾಸ್ತವವಾಗಿ, ನೀತು ಕಪೂರ್ ಇತ್ತೀಚೆಗೆ ಇಟಲಿಯಲ್ಲಿ ತಮ್ಮ 65 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸಮಾರಂಭದಲ್ಲಿ ಅವರು ಪುತ್ರ ರಣಬೀರ್ ಕಪೂರ್ ಮತ್ತು ಮಗಳು ರಿದ್ಧಿಮಾ ಕಪೂರ್ ಸಾಹ್ನಿ, ಅವರ ಪತಿ ಭರತ್ ಸಾಹ್ನಿ ಮತ್ತು ಮಗಳು ಸಮರಾ ಜೊತೆಗಿದ್ದರು. ನೀತು ಕಪೂರ್ ಜನ್ಮದಲ್ಲಿ ಆಲಿಯಾ ಇರಲಿಲ್ಲ. ಬುಧವಾರ ಬೆಳಿಗ್ಗೆ, ನೀತು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ ಹಾಕಿದ್ದರು. 

ಈ ಸ್ಟೋರಿಯಲ್ಲಿ ನೀತು ಕಪೂರ್‌ "ಕುಟುಂಬವನ್ನು ಒಟ್ಟಿಗೆ ಇಟ್ಟುಕೊಂಡವರನ್ನು ನಾವು ಕಳೆದುಕೊಂಡಿರುವುದರಿಂದ ನಮ್ಮ ಕುಟುಂಬಗಳು ಇನ್ನು ಮುಂದೆ ಒಂದೇ ಆಗಿಲ್ಲ" ಎಂದು ಬರೆದಿದ್ದಾರೆ. ಅವರ ಈ ಪೋಸ್ಟ್ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಈ ಲೈನ್ಸ್‌ ಯಾರಿಗಾಗಿ ಎಂದು ಜನರು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಆಲಿಯಾ ಭಟ್‌ಗಾಗಿ ಬರೆಯಲಾಗಿದೆಯೇ? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.

ಕಂಗನಾ ರಣಾವತ್ ಪರೋಕ್ಷ ಕಾಮೆಂಟ್‌ಗೆ ಪುಷ್ಠಿ:

ಕಂಗನಾ ರಣಾವತ್ ಅವರ ಇತ್ತೀಚಿನ ಪರೋಕ್ಷ ಕಾಮೆಂಟ್‌ಗೆ ಇದು ಲಿಂಕ್ ಆಗಿರುವುದನ್ನು ಹಲವರು ನೋಡುತ್ತಿದ್ದಾರೆ. ಇದರಲ್ಲಿ ಅವರು ಯಾರ ಹೆಸರನ್ನೂ ತೆಗೆದುಕೊಳ್ಳದೇ, ಇನ್ಸ್ಟಾಗ್ರಾಮ್‌ನಲ್ಲಿ ವ್ಯಂಗ್ಯವಾಡಿದರು. ಗಂಡ ಮತ್ತು ಹೆಂಡತಿ ಬೇರೆ ಬೇರೆ ಮಹಡಿಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದರು. ತಯಾರಾಗದ ಅವರ ಸಿನಿಮಾವೊಂದರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದಲ್ಲದೇ ಮನೆಯವರು ವಿದೇಶಕ್ಕೆ ಹೋದಾಗ ಹೆಂಡತಿ-ಮಗುವನ್ನು ಕರೆದುಕೊಂಡು ಹೋಗಲಿಲ್ಲ ಎಂಬ ಬಗ್ಗೆ ಯಾರೂ ಬರೆಯುತ್ತಿಲ್ಲ. ನಾವು ಸಿನಿಮಾ, ಕೆಲಸ ಅಥವಾ ಹಣಕ್ಕಾಗಿ ಮದುವೆಯಾದಾಗ ಹೀಗಾಗುತ್ತದೆ. ಪ್ರೀತಿಗಾಗಿ ಅಲ್ಲ. ಈ ನಕಲಿ ಜೋಡಿಯನ್ನು ಬಯಲಿಗೆಳೆಯಬೇಕು ಎಂದು ಕಂಗನಾ ಹೇಳಿದ್ದರು.

ಇದನ್ನೂ ಓದಿ: ಆಲಿಯಾ ಭಟ್ ಜೊತೆ ಅಂಬಾನಿ 300 ಕೋಟಿ ರೂ. ಡೀಲ್ ..! ಏಕೆ ಗೊತ್ತಾ..?

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಗ್ಗೆ ಕಂಗನಾ ಈ ವಿಷಯಗಳನ್ನು ಬರೆದಿದ್ದಾರೆ ಎಂದು ಅನೇಕರು ಊಹಿಸಿದ್ದರು. ಇದೀಗ ಆಲಿಯಾ ಭಟ್‌ ಅವರ ಅತ್ತೆ ನೀತು ಕಪೂರ್‌ ಅವರ ಇನ್‌ಸ್ಟಾಗ್ರಾಮ್‌ ಸ್ಟೋರಿ ನಟಿ ಕಂಗನಾ ಅವರ ಕಾಮೆಂಟ್‌ಗೆ ಪುಷ್ಠಿ ನೀಡುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News