Alia Bhatt: ಆಲಿಯಾ ಭಟ್‌ ಮಂಗಳಸೂತ್ರದಲ್ಲಿದೆ ಒಂದು ಹಿಡನ್‌ ಸೀಕ್ರೇಟ್‌.. ಇದಕ್ಕಿದೆ ವಿಶೇಷ ಅರ್ಥ! ಗೆಸ್‌ ಮಾಡ್ರಿ ನೋಡೋಣ..

Alia Bhatt mangalsutra : ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ 2022 ರ ಏಪ್ರಿಲ್ 14 ರಂದು ಮುಂಬೈನಲ್ಲಿ ವಿವಾಹವಾದರು. ಮದುವೆಯಲ್ಲಿ ಆಲಿಯಾ ಧರಿಸಿದ ಮಂಗಳಸೂತ್ರ, ಉಂಗುರ ಹೀಗೆ ಪ್ರತಿಯೊಂದರಲ್ಲೀ ಒಂದು ರಹಸ್ಯ ಅಡಗಿದೆ.

Written by - Chetana Devarmani | Last Updated : Jun 21, 2023, 06:33 PM IST
  • ಬಾಲಿವುಡ್‌ ಕಪಲ್‌ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್
  • ಆಲಿಯಾ ಧರಿಸಿದ ಮಂಗಳಸೂತ್ರದ ವಿಶೇಷತೆ ಏನು ಗೊತ್ತಾ?
  • ಆಲಿಯಾ ಭಟ್‌ ಮಂಗಳಸೂತ್ರದಲ್ಲಿದೆ ಒಂದು ಹಿಡನ್‌ ಸೀಕ್ರೇಟ್‌!
Alia Bhatt: ಆಲಿಯಾ ಭಟ್‌ ಮಂಗಳಸೂತ್ರದಲ್ಲಿದೆ ಒಂದು ಹಿಡನ್‌ ಸೀಕ್ರೇಟ್‌.. ಇದಕ್ಕಿದೆ ವಿಶೇಷ ಅರ್ಥ! ಗೆಸ್‌ ಮಾಡ್ರಿ ನೋಡೋಣ..  title=
Alia Bhatt mangalsutra

Alia Bhatt mangalsutra : ಕಳೆದ ವರ್ಷ ಏಪ್ರಿಲ್ 14 ರಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ವಿವಾಹವಾದರು. ಮುಂಬೈನಲ್ಲಿ ಇವರ ವಿವಾಹ ಸಮಾರಂಭ ನಡೆಯಿತು. ಇದೀಗ ಆಲಿಯಾ ಭಟ್‌ ಅವರ ಮಂಗಳಸೂತ್ರದ ಫೋಟೋಗಳು ವೈರಲ್​ ಆಗಿವೆ. ಆಲಿಯಾಳ ಮಂಗಳಸೂತ್ರವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ರಣಬೀರ್‌ನೊಂದಿಗಿನ ಅವರ ಬಂಧದ ಪ್ರತಿಬಿಂಬವಾಗಿದೆ. 

ವಜ್ರಗಳಿಂದ ಮಾಡಿದ ತಾಳಿಗೂ ರಣಬೀರ್‌ಗೂ ಒಂದು ವಿಶೇಷ ನಂಟಿದೆ. ಇದು ನೋಡಿದ ತಕ್ಷಣ ಇನ್‌ಫಿನಿಟಿ ಸಿಂಬಲ್‌ನಂತೆ ಕಾಣುತ್ತದೆ. ಈ ಚಿಹ್ನೆಯು ದಂಪತಿಗಳಿಗೆ ಆಳವಾದ ಮತ್ತು ಎಂದಿಗೂ ಕೊನೆಯಾಗದ ಪ್ರೀತಿಯನ್ನು ಸೂಚಿಸುತ್ತದೆ. ಇದು ಶಾಶ್ವತ ಪ್ರೀತಿ ಮತ್ತು ಯಾವುದೇ ಎಲ್ಲೆಯಿಲ್ಲದ ಬಂಧವನ್ನು ಪ್ರತಿನಿಧಿಸುತ್ತದೆ. ಆದರೆ ಈ ಇನ್‌ಫಿನಿಟಿ ಯನ್ನೇ ಚೂರು ದಿಟ್ಟಿಸಿ ನೋಡಿ. ಅದು ಸಂಖ್ಯೆ 8 ರಂತೆಯೂ ಕಾಣುತ್ತದೆ.  ಸಂಖ್ಯೆ 8 ರಣಬೀರ್‌ ಕಪೂರ್‌ ಅವರ ಲಕ್ಕಿ ನಂಬರ್‌ ಎಂದು ಹೇಳಲಾಗಿದೆ.

ಇದನ್ನೂ ಓದಿ: Ragini Dwivedi Yoga : ಬಿಲ್ಲಿನಂತೆ ದೇಹ ಮಣಿಸಿದ ತುಪ್ಪದ ಬೆಡಗಿ ರಾಗಿಣಿ, ಇಲ್ಲಿವೆ ಫೋಟೋಸ್‌

ವಿವಾಹ ಸಮಾರಂಭದಲ್ಲಿ, ಆಲಿಯಾ ಮಂಗಳಸೂತ್ರವು ಭಾಗಶಃ ಗೋಚರಿಸಿತು. ಅವರ ವಿಸ್ತಾರವಾದ ವಧುವಿನ ಹಾರದ ಕೆಳಗೆ ಮರೆಯಾಗಿತ್ತು. ಆಲಿಯಾ ಅವರ ಮಂಗಳಸೂತ್ರವು ಕರಿಮಣಿಗಳು ಮತ್ತು ಚಿನ್ನದ ಸರವನ್ನು ಒಳಗೊಂಡಿದೆ. ಇದು ಡೈಮಂಡ್ ಪೆಂಡೆಂಟ್ ಅನ್ನು ಸಹ ಹೊಂದಿದೆ. ಈ ಪೆಂಡೆಂಟ್‌ ಇನ್‌ಫಿನಿಟಿ ಚಿಹ್ನೆ ಮಾತ್ರವಲ್ಲ ನಂಬರ್‌ 8 ಕೂಡ ಆಗಿದ್ದು, ರಣಬೀರ್ ಅನ್ನು ಗಮನದಲ್ಲಿಟ್ಟುಕೊಂಡು ಆಲಿಯಾ ಇದನ್ನು ವಿನ್ಯಾಸಗೊಳಿಸಿದಂತಿದೆ ಎಂದು ಹೇಳಲಾಗುತ್ತಿದೆ. 

ಅದೇ ವರ್ಷದ ಅಂದರೆ 2022 ನವೆಂಬರ್ 6 ರಂದು ಮುದ್ದಾದ ಮಗಳಿಗೆ ಆಲಿಯಾ ಜನ್ಮ ನೀಡಿದರು. ರಣಬೀರ್‌ ಮತ್ತು ಆಲಿಯಾ ತಮ್ಮ ಮಗಳಿಗೆ ರಾಹಾ ಕಪೂರ್ ಎಂದು ಹೆಸರಿಟ್ಟರು. ಆಲಿಯಾ ಈಗ ಕರಣ್ ಜೋಹರ್ ಅವರ ಫ್ಯಾಮಿಲಿ ಡ್ರಾಮಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧರ್ಮೇಂದ್ರ, ಶಬಾನಾ ಅಜ್ಮಿ ಮತ್ತು ಜಯಾ ಬಚ್ಚನ್ ಸಹ ನಟಿಸಿರುವ ಚಿತ್ರದಲ್ಲಿ ಅವರು ರಣವೀರ್ ಸಿಂಗ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಹಾಲಿವುಡ್‌ಗೂ ಆಲಿಯಾ ಪದಾರ್ಪಣೆ ಮಾಡಿದ್ದು, ಹಾರ್ಟ್ ಆಫ್ ಸ್ಟೋನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಆಗಸ್ಟ್ 11 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.   

ಇದನ್ನೂ ಓದಿ: "ದೇವರು ಟೈಮ್‌ ತಗೊಂಡು ಇವರನ್ನ ಮಾಡಿದ್ದಾನೆ" ಈ ನಟನನ್ನು ಕೊಂಡಾಡಿದ ರಶ್ಮಿಕಾ ಮಂದಣ್ಣ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News