ʼಭರ್ಜರಿ ಬ್ಯಾಚುಲರ್‌ʼಗಳ ಕಾಲೆಳೆಯೋರು ಇವರೇ..ಜೀ ಕನ್ನಡಕ್ಕೆ ಮರಳಿದ ಅಕುಲ್‌ ಬಾಲಾಜಿ..!

Bharjari Bachelor : ಒಂದು ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರಬೇಕು ಎಂದರೆ ಅದರ ನಿರೂಪಕರು ಬಹಳ ಮುಖ್ಯವಾಗುತ್ತಾರೆ. ಇದೀಗ ಭರ್ಜರಿ ಬ್ಯಾಚುಲರ್ಸ್‌ ಕಾರ್ಯಕ್ರಮದ ನಿರೂಪಕನಾಗಿ ಅಕುಲ್‌ ಬಾಲಾಜಿ ಜೀ ಕನ್ನಡಕ್ಕೆ ಮರಳುತ್ತಿದ್ದಾರೆ ಎನ್ನಲಾಗುತ್ತಿದೆ.   

Written by - Savita M B | Last Updated : Jun 18, 2023, 09:41 AM IST
  • ಜೀ ಕನ್ನಡ ವಾಹಿನಿಯಲ್ಲಿ ವೀಕೆಂಡ್‌ ಸಲುವಾಗಿಯೇ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾರೆ.
  • ಇನ್ನೊಂದು ಹೊಸ ಶೋ ಭರ್ಜರಿ ಬ್ಯಾಚುಲರ್ಸ್‌ ಸೇರ್ಪಡೆಯಾಗುತ್ತಿದೆ
  • ಇದರ ಪ್ರೋಮೋ ಈಗಾಗಲೇ ಎಲ್ಲರ ಗಮನ ಸೆಳೆದಿದೆ.
ʼಭರ್ಜರಿ ಬ್ಯಾಚುಲರ್‌ʼಗಳ ಕಾಲೆಳೆಯೋರು ಇವರೇ..ಜೀ ಕನ್ನಡಕ್ಕೆ ಮರಳಿದ ಅಕುಲ್‌ ಬಾಲಾಜಿ..!  title=

Akul Balaji : ಜೀ ಕನ್ನಡ ವಾಹಿನಿಯಲ್ಲಿ ವೀಕೆಂಡ್‌ ಸಲುವಾಗಿಯೇ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾರೆ. ವೀಕೆಂಡ್‌ ವಿತ್‌ ರಮೇಶ್‌ ಡಿಕೆಡಿಯಂತಹ ಶೋಗಳ ಮೂಲಕ ಎಲ್ಲರ ಮನಸ್ಸನ್ನು ಕದ್ದಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳೊಂದಿಗೆ ಈಗ ಇನ್ನೊಂದು ಹೊಸ ಶೋ ಭರ್ಜರಿ ಬ್ಯಾಚುಲರ್ಸ್‌ ಸೇರ್ಪಡೆಯಾಗುತ್ತಿದೆ. ಇದರ ಪ್ರೋಮೋ ಈಗಾಗಲೇ ಎಲ್ಲರ ಗಮನ ಸೆಳೆದಿದೆ.

ಯಾವುದೇ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರಬೇಕೆಂದರೆ ಅಲ್ಲಿ ನಿರೂಪಕರ ಪಾತ್ರ ದೊಡ್ಡಗಾಗಿರುತ್ತದೆ. ಜೀ ಕನ್ನಡ ಕಾರ್ಯಕ್ರಮಗಳಲ್ಲಿ ನಿರೂಪಣೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಇದೀಗ ಭರ್ಜರಿ ಬ್ಯಾಚುಲರ್ಸ್‌ ಕಾರ್ಯಕ್ರಮದ ನಿರೂಪಕರ ವಿಚಾರವಾಗಿ ಹಲವು ಗೊಂದಲ ಮತ್ತು ಕುತೂಹಲಗಳಿದ್ದವು. ಕೆಲವು ವರದಿಗಳ ಪ್ರಕಾರ ಈ ʼಭರ್ಜರಿ ಬ್ಯಾಚುಲರ್ಸ್‌ʼ ಕಾರ್ಯಕ್ರಮವನ್ನು ಅಕುಲ್‌ ಬಾಲಾಜಿ ನಡೆಸಿಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ-Adipusush ಚಿತ್ರ ನಿರ್ಮಾಪಕರಿಗೆ ಬಿಗ್ ಶಾಕ್, ಎಲ್ಲಾ ಪ್ರಯತ್ನಗಳ ಹೊರತಾಗಿ ಚಿತ್ರ ಆನ್ಲೈನ್ ನಲ್ಲಿ ಸೋರಿಕೆ

ಇನ್ನು ಅಕುಲ್‌ ಬಾಲಾಜಿ ನಿರೂಪಣೆ ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಸೀರಿಯಲ್‌ಗಳಲ್ಲಿ ಬ್ಯೂಸಿಯಾಗಿದ್ದ ಅಕುಲ್‌ ಅವರು ನಿರೂಪಣೆಯಿಂದ ಸ್ವಲ್ಪ ದೂರ ಉಳಿದಿದ್ದರು. ಇದೀಗ ಜೀ ಕನ್ನಡಕ್ಕೆ ಮತ್ತೆ ಮರಳಿದ್ದಾರೆ. ಇನ್ನು ಈ ಕಾರ್ಯಕ್ರಮ ಜಡ್ಜ್‌ ಯಾರು ಅನ್ನೋದು ಸಹ ಚರ್ಚೆಯಾಗುತ್ತಿದೆ. ನಿರೂಪಣೆ ಎಷ್ಟು ಮುಖ್ಯವೋ ಜಡ್ಜ್‌ಸ್‌ಗಳು ಅಷ್ಟೇ ಮುಖ್ಯ. ಈ ಬ್ಯಾಚುಲರ್ಸ್‌ ಕಥೆ ಕೇಳುವುದಕ್ಕೆ ರವಿಚಂದ್ರನ್‌ ಹಾಗೂ ರಚಿತಾ ರಮ್‌ ಬರಲಿದ್ದಾರೆ ಎನ್ನಲಾಗುತ್ತಿದೆ. 

ಬಿಡುಗಡೆಯಾಗಿರು ಪ್ರೋಮೋದಲ್ಲಿ ಸಿಕ್ಕಪಟ್ಟೆ ಮನರಂಜನೆ ಮತ್ತು ಎಂಜಾಯ್‌ಮೆಂಟ್‌ ಸಿಕ್ಕಿದ್ದು, ಶೋ ಕೂಡಾ ಅಷ್ಟೇ ಕೂತುಹಲವನ್ನು ಹೆಚ್ಚಿಸುವಂತಿದೆ. ಈ ಭರ್ಜರಿ ಬ್ಯಾಚುಲರ್ಸ್‌ ಅತೀ ಶೀಘ್ರದಲ್ಲಿಯೇ ಶುರುವಾಗಲಿದ್ದು, ಎಲ್ಲ ಕೂತುಹಲಗಳಿಗೂ ತೆರೆಬೀಳಲಿದೆ. 

ಇದನ್ನೂ ಓದಿ-Adipusush ಚಿತ್ರ ನಿರ್ಮಾಪಕರಿಗೆ ಬಿಗ್ ಶಾಕ್, ಎಲ್ಲಾ ಪ್ರಯತ್ನಗಳ ಹೊರತಾಗಿ ಚಿತ್ರ ಆನ್ಲೈನ್ ನಲ್ಲಿ ಸೋರಿಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News