Akshay Kumar: ಶೂಟಿಂಗ್ ವೇಳೆ ಅಕ್ಷಯ್ ಕುಮಾರ್‌ಗೆ ಕಚ್ಚಿದ್ದ ಶಾರ್ಕ್‌.. ಸಾವಿನ ಕದ ತಟ್ಟಿ ಬಂದ ಬಾಲಿವುಡ್ ಕಿಲಾಡಿ!!

Akshay Kumar stunt scene: ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರ 'ಬಡೆ ಮಿಯಾ ಚೋಟೆ ಮಿಯಾ' ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಸಾಹಸ ದೃಶ್ಯದಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ಬಹಿರಂಗಪಡಿಸಿದ್ದಾರೆ. 

Written by - Chetana Devarmani | Last Updated : Feb 19, 2024, 02:13 PM IST
  • ಶೂಟಿಂಗ್ ವೇಳೆ ಅಕ್ಷಯ್ ಕುಮಾರ್‌ಗೆ ಕಚ್ಚಿದ್ದ ಶಾರ್ಕ್‌
  • 150 ಅಡಿ ಕೆಳಗೆ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದ ನಟ
  • ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ನಡೆದ ಘಟನೆ
Akshay Kumar: ಶೂಟಿಂಗ್ ವೇಳೆ ಅಕ್ಷಯ್ ಕುಮಾರ್‌ಗೆ ಕಚ್ಚಿದ್ದ ಶಾರ್ಕ್‌.. ಸಾವಿನ ಕದ ತಟ್ಟಿ ಬಂದ ಬಾಲಿವುಡ್ ಕಿಲಾಡಿ!!  title=

Akshay Kumar: ಬಾಲಿವುಡ್‌ನ ಕಿಲಾಡಿ ಎಂದು ಕರೆಯಲ್ಪಡುವ ಅಕ್ಷಯ್ ಕುಮಾರ್ ಅನೇಕ ಪ್ರಾಜೆಕ್ಟ್‌ಗಳಲ್ಲಿ ನಿರತರಾಗಿದ್ದಾರೆ. ಅವುಗಳಲ್ಲಿ ಒಂದು ಆಕ್ಷನ್-ಥ್ರಿಲ್ಲರ್ ಚಿತ್ರ 'ಬಡೆ ಮಿಯಾ ಚೋಟೆ ಮಿಯಾ', ಇದರಲ್ಲಿ ಟೈಗರ್ ಶ್ರಾಫ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರೂ ಸ್ಟಾರ್‌ಗಳ ಅಭಿಮಾನಿಗಳು ಈ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅಕ್ಷಯ್ ಕುಮಾರ್ ತಮ್ಮ ಫಿಟ್‌ನೆಸ್ ಮತ್ತು ಆಕ್ಷನ್‌ ನಿಂದ ಜನರ ಗಮನಸೆಳೆಯುತ್ತಾರೆ. 

ಅಕ್ಷಯ್ ಕುಮಾರ್ ಆಕ್ಷನ್ ಮತ್ತು ಸ್ಟಂಟ್ ದೃಶ್ಯಗಳನ್ನು ಸ್ವತಃ ಮಾಡುತ್ತಾರೆ. ಹೀಗೆ ಆಕ್ಷನ್‌ ಸಿನಿಮಾ ಒಂದರ ಸಾಹಸ ದಶ್ಯ ಚಿತ್ರೀಕರಣದ ವೇಳೆ ಸಾವಿನ ಕದ ತಟ್ಟಿ ಬಂದ ಘಟನೆಯನ್ನು ಅಕ್ಷಯ್‌ ನೆನೆಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಇತ್ತೀಚೆಗೆ ತಮ್ಮ 2009 ರ ಚಿತ್ರ 'ಬ್ಲೂ' ಚಿತ್ರೀಕರಣದ ಸಮಯದಲ್ಲಿ ಸಂಭವಿಸಿದ ಘಟನೆಯ ಬಗ್ಗೆ ಬಹಿರಂಗಪಡಿಸಿದರು. ಈ ಚಿತ್ರದಲ್ಲಿ ಸಂಜಯ್ ದತ್ ಮತ್ತು ಕತ್ರಿನಾ ಕೈಫ್ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ:  ನಟರಿಗಿಂತ ಅಧಿಕ ಸಂಭಾವನೆ ಪಡೆಯುತ್ತಾರೆ ಈ ಟಾಪ್ ಹೀರೋಯಿನ್‌! 

ಈ ಸಿನಿಮಾ ಶೂಟಿಂಗ್‌ ವೇಳೆ ನೀರೊಳಗಿನ ಸಾಹಸ ದೃಶ್ಯವನ್ನು ಮಾಡಬೇಕಿತ್ತು. ಚಿತ್ರದ ಒಂದು ದೃಶ್ಯದಲ್ಲಿ, ನೀರಿನೊಳಗೆ ಹೋಗಬೇಕಿತ್ತು. ಅದು ಕೂಡ ಆಕ್ಸಿಜನ್ ಟ್ಯಾಂಕ್ ಇಲ್ಲದೆ.‌ ಈ ದೃಶ್ಯದ ಚಿತ್ರೀಕರಣ ಮಾಡುವಾಗ ಅಕ್ಷಯ್‌ ಕುಮಾರ್ ಅವರ ತಲೆ ಮುಳುಗಿದ ಹಡಗಿಗೆ ಅಪ್ಪಳಿಸಿದೆ. ಇದರಿಂದ ರಕ್ತ ಸುರಿದು ಅವರು ನೀರಿನ ಅಡಿಯಲ್ಲಿ ಹೋಗಿದ್ದಾರೆ. 

ಸುಮಾರು 150 ಅಡಿ ಕೆಳಗೆ ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿದ್ದರು. ನಿರಂತರ ರಕ್ತಸ್ರಾವವಾಗುತ್ತಿತ್ತು. ಇಡೀ ಪ್ರದೇಶವು ಶಾರ್ಕ್‌ಗಳಿಂದ ಆವೃತವಾಗಿತ್ತು. ಈ ವೇಳೆ ಒಂದೆರಡು ಶಾರ್ಕ್‌ ಅಕ್ಷಯ್‌ ಬಳಿ ಬಂದು ವಾಸನೆ ನೋಡಿದ್ದವಂತೆ. ರಕ್ತದ ವಾಸನೆಯಿಂದ ಶಾರ್ಕ್‌ ಗಳು ಅವರ ಸುತ್ತ ಸುತ್ತಲು ಆರಂಬಿಸಿದ್ದವಂತೆ. ಅಲ್ಲದೇ ಅಕ್ಷಯ್‌ ಕುಮಾರ್‌ ಅವರಿಗೆ ಶಾರ್ಕ್‌ ಒಂದು ಕಚ್ಚಿತ್ತು ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ: BAFTA 2024 ನಲ್ಲಿ ಮಿಂಚಿದ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News