Kudiyee Ni Teri : ʼಸೆಲ್ಫಿʼ ಹಾಡಿನಲ್ಲಿ 25ರ ಹರೆಯದ ನಟಿ ಜೊತೆ ಕಿಲಾಡಿ ಅಕ್ಕಿ ರೊಮ್ಯಾನ್ಸ್..!

ಬಿಟೌನ್‌ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ಮುಂಬರುವ ʼಸೆಲ್ಫಿʼ ಚಿತ್ರದ ಹೊಸ ಹಾಡು ʼಕುಡಿಯೀ ನಿ ತೇರಿʼ ಬಿಡುಗಡೆಯಾಗಿದ್ದು, ಸಖತ್‌ ಹಾಟ್‌ ಆಗಿದೆ. ಗ್ಲಾಮರ್ ಜೊತೆ ಸಾಹಸ ದೃಶ್ಯಗಳು ಹಾಡಿನ ವಿಡಿಯೋದಲ್ಲಿ ಅದ್ಬುತವಾಗಿ ಮೂಡಿಬಂದಿವೆ. ಅಕ್ಷಯ್ ಸಿಕ್ಸ್ ಪ್ಯಾಕ್, ಮೃಣಾಲ್ ಠಾಕೂರ್ ಹಾಟ್‌ನೆಸ್‌ ಸಾಂಗ್‌ನ ಮೇನ್‌ ಅಟ್ರ್ಯಾಕ್ಷನ್‌. ಬಿಡುಗಡೆಯಾದ ಎರಡು ಗಂಟೆಯಲ್ಲಿ ಈ ಹಾಡು 1 ಮಿಲಿಯನ್‌ಗೂ ಹೆಚ್ಚು ವೀವ್ಸ್‌ ಪಡೆದಿದೆ.

Written by - Krishna N K | Last Updated : Feb 9, 2023, 05:46 PM IST
  • ನಟ ಅಕ್ಷಯ್ ಕುಮಾರ್ ಮುಂಬರುವ ʼಸೆಲ್ಫಿʼ ಚಿತ್ರದ ಹೊಸ ಹಾಡು ಬಿಡುಗಡೆಯಾಗಿದೆ.
  • ʼಕುಡಿಯೀ ನಿ ತೇರಿʼ ಹಾಡಿನಲ್ಲಿ 25ರ ಮೃಣಾಲ್‌ ಜೊತೆ ಅಕ್ಕಿ ರೊಮ್ಯಾನ್ಸ್‌ ಮಾಡಿದ್ದಾರೆ.
  • ಬಿಡುಗಡೆಯಾದ ಎರಡು ಗಂಟೆಯಲ್ಲಿ ಈ ಹಾಡು 1 ಮಿಲಿಯನ್‌ಗೂ ಹೆಚ್ಚು ವೀವ್ಸ್‌ ಪಡೆದಿದೆ.
Kudiyee Ni Teri : ʼಸೆಲ್ಫಿʼ ಹಾಡಿನಲ್ಲಿ 25ರ ಹರೆಯದ ನಟಿ ಜೊತೆ ಕಿಲಾಡಿ ಅಕ್ಕಿ ರೊಮ್ಯಾನ್ಸ್..! title=

Selfiee Kudiyee Ni Teri song : ಬಿಟೌನ್‌ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ಮುಂಬರುವ ʼಸೆಲ್ಫಿʼ ಚಿತ್ರದ ಹೊಸ ಹಾಡು ʼಕುಡಿಯೀ ನಿ ತೇರಿʼ ಬಿಡುಗಡೆಯಾಗಿದ್ದು, ಸಖತ್‌ ಹಾಟ್‌ ಆಗಿದೆ. ಗ್ಲಾಮರ್ ಜೊತೆ ಸಾಹಸ ದೃಶ್ಯಗಳು ಹಾಡಿನ ವಿಡಿಯೋದಲ್ಲಿ ಅದ್ಬುತವಾಗಿ ಮೂಡಿಬಂದಿವೆ. ಅಕ್ಷಯ್ ಸಿಕ್ಸ್ ಪ್ಯಾಕ್, ಮೃಣಾಲ್ ಠಾಕೂರ್ ಹಾಟ್‌ನೆಸ್‌ ಸಾಂಗ್‌ನ ಮೇನ್‌ ಅಟ್ರ್ಯಾಕ್ಷನ್‌. ಬಿಡುಗಡೆಯಾದ ಎರಡು ಗಂಟೆಯಲ್ಲಿ ಈ ಹಾಡು 1 ಮಿಲಿಯನ್‌ಗೂ ಹೆಚ್ಚು ವೀವ್ಸ್‌ ಪಡೆದಿದೆ.

ಸೆಲ್ಫಿ ಚಿತ್ರದಲ್ಲಿ ನಟಿ ಮೃಣಾಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ನಾಯಕ ನಟನಾಗಿ ನಟಿಸಿದ್ದಾರೆ. ಇದೀಗ ಬಿಡುಗಡೆಯಾಗಿರುವ ಕುಡಿಯೀ ನಿ ತೇರಿ ಹಾಡಿನಲ್ಲಿ ಮೃಣಾಲ್ ಅಕ್ಕಿ ರೊಮ್ಯಾನ್ಸ್‌ ಸಖತ್ತಾಗಿದೆ. ಡ್ಯಾನ್ಸ್ ಫ್ಲೋರ್‌ ಮೇಲೆ ಅಕ್ಷಯ್‌ ಸಿಕ್ಸ್‌ ಪ್ಯಾಕ್‌ನಲ್ಲಿ ಮಿಂಚಿದ್ದಾರೆ. ಗ್ಲಾಮರ್‌ ಗೊಂಬೆಯಂತೆ ಹಾಟ್‌ ಲುಕ್‌ನಲ್ಲಿ ಮೃಣಾಲ್‌ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಹಾಡಿನಲ್ಲಿ ಆಕ್ಷನ್‌ ಸಿಕ್ವೇನ್ಸ್‌ಗಳನ್ನು ಕೂಡಾ ಬಳಸಲಾಗಿದೆ.

 

ಇದನ್ನೂ ಓದಿ: Prabhas Health : ಪ್ರಭಾಸ್‌ ಆರೋಗ್ಯದಲ್ಲಿ ಏರುಪೇರು.. ಎಲ್ಲಾ ಸಿನಿಮಾ ಶೂಟಿಂಗ್‌ ಕ್ಯಾನ್ಸಲ್‌ ಮಾಡಿದ ಡಾರ್ಲಿಂಗ್‌..!

ಇನ್ನು ಇತ್ತೀಚಿಗೆ 55 ವರ್ಷದ ಅಕ್ಕಿ 25 ವರ್ಷದ ಯಂಗ್‌ ಹುಡುಗಿಯರ ಜೊತೆ ರೊಮ್ಯಾನ್ಸ್‌ ಮಾಡ್ತಾರೆ ಅಂತ ಟೀಕೆ ಮಾಡಲಾಗಿತ್ತು. ಈ ಕುರಿತು ಕಾಫಿ ವಿಥ್ ಕರಣ್‌ನಲ್ಲಿ ಅಕ್ಷಯ್ ಅವರನ್ನು ಪ್ರಶ್ನೆ ಕೇಳಲಾಯಿತು, ಆಗ ಅವರು ಬಹುಶಃ ʼಅಸೂಯೆʼಯಿಂದ ಹಾಗೆ ಹೇಳುತ್ತಿರಬಹುದು ಅಂತ ಟಾಂಗ್‌ ನೀಡಿದ್ದರು. ಅಲ್ಲದೆ, ʼನಾನು 55 ವರ್ಷದವನ ಹಾಗೆ ಕಾಣಿಸುತ್ತಿದ್ದೇನೆಯೇ? ಅಂತ ಪ್ರಶ್ನೆ ಮಾಡಿ ನಕ್ಕಿದ್ದರು.

ಇನ್ನು ಸೆಲ್ಫಿ ಚಿತ್ರದ ಕುರಿತು ಹೇಳುವುದಾದ್ರೆ, ಧರ್ಮ ಪ್ರೊಡಕ್ಷನ್ಸ್, ಪೃಥ್ವಿರಾಜ್ ಪ್ರೊಡಕ್ಷನ್ಸ್, ಮ್ಯಾಜಿಕ್ ಫ್ರೇಮ್ಸ್ ಮತ್ತು ಕೇಪ್ ಆಫ್ ಗುಡ್ ಫಿಲ್ಮ್ಸ್ ಸಹಯೋಗದಲ್ಲಿ ಸ್ಟಾರ್ ಸ್ಟುಡಿಯೋಸ್ ಸೆಲ್ಫಿಯನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಮಲಯಾಳಂನ ಆಕ್ಷನ್-ಕಾಮಿಡಿ ʼಡ್ರೈವಿಂಗ್ ಲೈಸೆನ್ಸ್‌ʼ ಸಿನಿಮಾದ ರಿಮೇಕ್ ಆಗಿದ್ದು, ಪೃಥ್ವಿರಾಜ್ ಸುಕುಮಾರನ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಟ್ರಾಫಿಕ್ ಪೋಲೀಸ್ ಪಾತ್ರದಲ್ಲಿ ಇಮ್ರಾನ್ ಹಶ್ಮಿ ನಟಿಸಿದ್ದಾರೆ. ಹಿಂದಿ ಆವೃತ್ತಿಯಲ್ಲಿ ಡಯಾನಾ ಪೆಂಟಿ ಪಾತ್ರವನ್ನು ನುಶ್ರತ್ ಭರುಚ್ಚಾ ನಿರ್ವಹಿಸಿದ್ದಾರೆ. ಸೆಲ್ಫಿ ಫೆಬ್ರವರಿ 24, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News