ʼಕಾಂತಾರʼ ದಾಖಲೆ ಮುರಿಯುತ್ತಾ ʼದೃಶ್ಯಂ 2ʼ : ಕೇವಲ ಎರಡು ದಿನದಲ್ಲಿ ಬರ್ಜರಿ ಕಲೆಕ್ಷನ್‌..!

ನವೆಂಬರ್ 18 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಅಜಯ್ ದೇವಗನ್, ಶ್ರಿಯಾ ಮತ್ತು ಟಬು ಅಭಿನಯದ ʼದೃಶ್ಯಂ 2ʼ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ವರದಿಗಳ ಪ್ರಕಾರ, ಕಾರ್ತಿಕ್ ಆರ್ಯನ್ ಅವರ 'ಭೂಲ್ ಭುಲೈಯಾ 2' ನ ಮೊದಲ ದಿನದ ಸಂಗ್ರಹವನ್ನು ದೃಶ್ಯಂ 2 ಯಶಸ್ವಿಯಾಗಿ ದಾಟಿದೆ. ಅಲ್ಲದೆ, ʼಬ್ರಹ್ಮಾಸ್ತ್ರʼ ಮತ್ತು ʼಸೂರ್ಯವಂಶಿʼ ನಂತರದ ಮೂರನೇ ಅತ್ಯುತ್ತಮ ಆರಂಭಿಕ ಚಿತ್ರವಾಗಿ ಹೊರಹೊಮ್ಮಿದ್ದು ಕನ್ನಡದ ʼಕಾಂತಾರʼದ ಕಲೆಕ್ಷನ್ ಮುರಿಯುತ್ತಾ ಎನ್ನುವ ಸಂದೇಹ ಮೂಡಿದೆ.

Written by - Krishna N K | Last Updated : Nov 20, 2022, 02:43 PM IST
  • ʼಕಾಂತಾರʼ ದಾಖಲೆ ಮುರಿಯುತ್ತಾ ʼದೃಶ್ಯಂ 2ʼ
  • ನವೆಂಬರ್ 18 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಅಜಯ್ ದೇವಗನ್ ನಟನೆಯ ದೃಶ್ಯಂ 2
  • 2015 ರ ಕ್ರೈಮ್ ಥ್ರಿಲ್ಲರ್ 'ದೃಶ್ಯಂ' ನ ಮುಂದುವರೆದಭಾಗ
ʼಕಾಂತಾರʼ ದಾಖಲೆ ಮುರಿಯುತ್ತಾ ʼದೃಶ್ಯಂ 2ʼ : ಕೇವಲ ಎರಡು ದಿನದಲ್ಲಿ ಬರ್ಜರಿ ಕಲೆಕ್ಷನ್‌..! title=

Drishyam 2 Box Office Collection : ನವೆಂಬರ್ 18 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಅಜಯ್ ದೇವಗನ್, ಶ್ರಿಯಾ ಮತ್ತು ಟಬು ಅಭಿನಯದ ʼದೃಶ್ಯಂ 2ʼ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ವರದಿಗಳ ಪ್ರಕಾರ, ಕಾರ್ತಿಕ್ ಆರ್ಯನ್ ಅವರ 'ಭೂಲ್ ಭುಲೈಯಾ 2' ನ ಮೊದಲ ದಿನದ ಸಂಗ್ರಹವನ್ನು ದೃಶ್ಯಂ 2 ಯಶಸ್ವಿಯಾಗಿ ದಾಟಿದೆ. ಅಲ್ಲದೆ, ʼಬ್ರಹ್ಮಾಸ್ತ್ರʼ ಮತ್ತು ʼಸೂರ್ಯವಂಶಿʼ ನಂತರದ ಮೂರನೇ ಅತ್ಯುತ್ತಮ ಆರಂಭಿಕ ಚಿತ್ರವಾಗಿ ಹೊರಹೊಮ್ಮಿದ್ದು ಕನ್ನಡದ ʼಕಾಂತಾರʼದ ಕಲೆಕ್ಷನ್ ಮುರಿಯುತ್ತಾ ಎನ್ನುವ ಸಂದೇಹ ಮೂಡಿದೆ.

ʼದೃಶ್ಯಂ 2ʼ ಬಿಡುಗಡೆಯಾದ ಮೊದಲ ಎರಡು ದಿನಗಳಲ್ಲಿ 36 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ. ಖ್ಯಾತ ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಚಿತ್ರದ ಎರಡನೇ ದಿನದ ಸಂಗ್ರಹವನ್ನು ಹಂಚಿಕೊಂಡಿದ್ದಾರೆ. ದೃಶ್ಯಂ 2 ಉತ್ತಮ ಪ್ರದರ್ಶನ ಕಾಣುತ್ತಿದೆ.. ಪ್ಯಾನ್ ಇಂಡಿಯಾ ಸಿನಿಮಾವನ್ನು ಜನರು ಮೆಚ್ಚುತ್ತಿದ್ದಾರೆ. ಮಲ್ಟಿಪ್ಲೆಕ್ಸ್‌ಗಲ್ಲಿಯೂ ಸಹ ಅದ್ಭುತ ಪ್ರದರ್ಶನ ಕಂಡಿದೆ. ಶುಕ್ರವಾರ 15.38 ಕೋಟಿ, ಶನಿ 21.59 ಕೋಟಿ. ಒಟ್ಟು: ₹ 36.97 ಕೋಟಿ. ಸಿನಿಮಾ  ಗಳಿಸಿದೆ. ಮೊದಲ ದಿನ 15.38 ಕೋಟಿ ರೂ., ಎರಡನೇ ದಿನ 21.59 ಕೋಟಿ ರೂ. ಸಿನಿಮಾ ಬಾಚಿಕೊಂಡಿದೆ.

ಇದನ್ನೂ ಒದಿ : ಮಗಳ ಜೊತೆ ವಿರುಷ್ಕಾ ಉತ್ತರಾಖಂಡ ಪ್ರವಾಸ : ಕರೋಲಿ ಬಾಬಾ ಆರ್ಶೀವಾದ ಪಡೆದ ಸ್ಟಾರ್‌ ದಂಪತಿ

ಶುಕ್ರವಾರ ಬಿಡುಗಡೆಯಾದ ಅಭಿಷೇಕ್ ಪಾಠಕ್ ನಿರ್ದೇಶನ ದೃಶ್ಯಂ 2 ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗೆ ಪಡೆದುಕೊಂಡಿದೆ. 'ದೃಶ್ಯಂ 2' ಬೇಡಿಕೆಯನ್ನು ಪೂರೈಸಲು ಮಲ್ಟಿಪ್ಲೆಕ್ಸ್ ಗಳಲ್ಲಿ ಮಧ್ಯರಾತ್ರಿಯ ಪ್ರದರ್ಶನಗಳನ್ನು ಹೆಚ್ಚಿಸಲಾಯಿತು. ಥಿಯೇಟರ್‌ಗಳಲ್ಲಿ ಜನಸಂದಣಿ ಹೆಚ್ಚಾಗಿದೆ. ಈ ಚಿತ್ರವು 2015 ರ ಕ್ರೈಮ್ ಥ್ರಿಲ್ಲರ್ 'ದೃಶ್ಯಂ' ನ ಮುಂದುವರೆದಭಾಗವಾಗಿದೆ. ಮೋಹನ್ ಲಾಲ್-ನಟನೆಯ ಮಲಯಾಳಂ ಚಲನಚಿತ್ರದ ಹಿಂದಿ ರಿಮೇಕ್. ಕಳೆದ ವರ್ಷ ಫೆಬ್ರವರಿಯಲ್ಲಿ ಮಲಯಾಳಂ ಚಿತ್ರದ ಮುಂದುವರಿದ ಭಾಗ ಬಿಡುಗಡೆಯಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News