ಡಬ್ಬೂ ರತ್ನಾನಿ ಕ್ಯಾಲೆಂಡರ್ 2020 ರಲ್ಲಿ Aishwarya Rai ಮನಮೋಹಕ ಶೈಲಿ

ಡಬ್ಬೂ ರತ್ನಾನಿ(Dabboo Ratnani) ಅವರು 2020 ರ ಕ್ಯಾಲೆಂಡರ್ಗಾಗಿ ಕಿಯಾರಾ ಅಡ್ವಾಣಿ, ವಿದ್ಯಾ ಬಾಲನ್, ಅನನ್ಯಾ ಪಾಂಡೆ, ವಿಕ್ಕಿ ಕೌಶಲ್, ಭೂಮಿ ಪೆಡ್ನೆಕರ್, ಕಾರ್ತಿಕ್ ಆರ್ಯನ್ ಸೇರಿದಂತೆ ಖ್ಯಾತನಾಮರನ್ನು ಚಿತ್ರೀಕರಿಸಿದ್ದಾರೆ.

Last Updated : Feb 20, 2020, 06:24 AM IST
ಡಬ್ಬೂ ರತ್ನಾನಿ ಕ್ಯಾಲೆಂಡರ್ 2020 ರಲ್ಲಿ Aishwarya Rai  ಮನಮೋಹಕ ಶೈಲಿ title=
ಫೋಟೊ ಕೃಪೆ: ಐಶ್ವರ್ಯಾ ರೈ, ಇನ್‌ಸ್ಟಾಗ್ರಾಮ್

ನವದೆಹಲಿ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್(Aishwarya Rai Bachchan) ಅವರು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಡಬ್ಬೂ ರತ್ನಾನಿಯ(Dabboo Ratnani)  2020 ಕ್ಯಾಲೆಂಡರ್ ನಿಂದ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಉದ್ಯಮದಲ್ಲಿ 25 ವರ್ಷಗಳನ್ನು ಪೂರೈಸಿದಕ್ಕಾಗಿ ಅಭಿನಂದಿಸಿದ್ದಾರೆ. ಉದ್ಯಮದಲ್ಲಿ ನಿಮ್ಮ 25 ವರ್ಷಗಳ ಮಹತ್ತರ ಪ್ರಯಾಣವನ್ನು ಪೂರ್ಣಗೊಳಿಸಿದಕ್ಕಾಗಿ ಅಭಿನಂದನೆಗಳು. ನಾನು ನಿಮ್ಮ ಕ್ಯಾಲೆಂಡರ್ ಮತ್ತು ನಿಮ್ಮ ಕುಟುಂಬದೊಂದಿಗೆ 21 ವರ್ಷಗಳಿಂದ ಸಂಬಂಧ ಹೊಂದಿದ್ದೇನೆ. ಲವ್ ಆಲ್ವೇಸ್ ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

 
 
 
 

 
 
 
 
 
 
 
 
 

✨🥰Congratulations on completing 25years on your fabulous journey my dearest Dabs🎊💐💝🤗and 21 years being family with your calendar celebrating you 💖and Manisha and your kids...💕 God Bless and Shine on✨🌈✨Love always 💝✨

A post shared by AishwaryaRaiBachchan (@aishwaryaraibachchan_arb) on

ಚಿತ್ರದಲ್ಲಿ, ಐಶ್ವರ್ಯಾ ವೈಟ್ ಟಾಪ್ ಧರಿಸಿದ್ದು, ಈ ಶಾಟ್ ತುಂಬಾ ಸರಳವಾಗಿ ಕಾಣುತ್ತದೆ. ಐಶ್ವರ್ಯಾ ರೈ ಬಹಳ ಕಡಿಮೆ ಮೇಕ್ಅಪ್ ಮಾಡಿದ್ದಾರೆ ಮತ್ತು ಕ್ಯಾಮೆರಾವನ್ನು ನೋಡುತ್ತಿದ್ದಾರೆ. ನೈಸರ್ಗಿಕ ಸ್ಪರ್ಶವನ್ನು ನೀಡಲು ಓಪನ್ ಹೇರ್ ಬಿಡಲಾಗಿದೆ. ಡಬ್ಬೂ ರತಾನಾನಿಯ ಕ್ಯಾಲೆಂಡರ್ ಶೂಟ್ ಯಾವಾಗಲೂ ಚರ್ಚೆಯ ವಿಷಯವಾಗಿದೆ. ಡಬ್ಬೂ ರತ್ನಾನಿ(Dabboo Ratnani) ಅವರು 2020 ರ ಕ್ಯಾಲೆಂಡರ್ಗಾಗಿ ಕಿಯಾರಾ ಅಡ್ವಾಣಿ, ವಿದ್ಯಾ ಬಾಲನ್, ಅನನ್ಯಾ ಪಾಂಡೆ, ವಿಕ್ಕಿ ಕೌಶಲ್, ಭೂಮಿ ಪೆಡ್ನೆಕರ್, ಕಾರ್ತಿಕ್ ಆರ್ಯನ್ ಸೇರಿದಂತೆ ಖ್ಯಾತನಾಮರನ್ನು ಚಿತ್ರೀಕರಿಸಿದ್ದಾರೆ.

ಇನ್ನು ಐಶ್ ಕೆಲಸದ ಮುಂಭಾಗದ ಬಗ್ಗೆ ಮಾತನಾಡುವುದಾದರೆ, ಐಶ್ವರ್ಯ ರೈ ಅನುರಾಗ್ ಕಶ್ಯಪ್ ಅವರ ಮುಂಬರುವ ಚಿತ್ರ ಗುಲಾಬ್ ಜಮುನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಕೂಡ ಜೊತೆಯಾಗಲಿದ್ದಾರೆ. ಇದರೊಂದಿಗೆ ಅವರು ಮಣಿರತ್ನಂ ಅವರ ತಮಿಳು ಚಿತ್ರ ಪೊನ್ನಿಯಿನ್ ಸೆಲ್ವನ್ ಕೂಡ ಮಾಡುತ್ತಿದ್ದಾರೆ, ಇದರಲ್ಲಿ ನಟ ವಿಕ್ರಮ್ ಮುಖ್ಯ ಪಾತ್ರದಲ್ಲಿದ್ದಾರೆ.

Trending News