ಐಶ್ವರ್ಯಾ ರೈ ಮೊದಲ ಲವ್‌ ಸಲ್ಮಾನ್ ಖಾನ್ ಅಲ್ಲ, ಈ ವ್ಯಕ್ತಿ!?

Aishwarya Rai Relationship : 90 ರ ದಶಕವನ್ನು ಬಾಲಿವುಡ್‌ನ ಯುಗವೆಂದು ಪರಿಗಣಿಸಲಾಗಿತ್ತು. ಅಲ್ಲಿ ನಟಿಯರ ನಡುವೆ ಕ್ಯಾಟ್‌ ಫೈಟ್ ಹೆಚ್ಚಾಗಿ ನಡೆಯುತ್ತಿದ್ದವು. ಈ ವೈಮನಸ್ಸು ಎಷ್ಟರಮಟ್ಟಿಗೆ ಹೆಚ್ಚಾಗುತ್ತಿತ್ತೆಂದರೆ, ಈ ನಟಿಯರಿಗೆ ಒಬ್ಬರ ಮುಖ ಕಂಡರೆ ಇನ್ನೊಬ್ಬರಿಗೆ ಸಹಿಸಲೂ ಆಗುತ್ತಿರಲಿಲ್ಲ. ಇಂದು ನೀವು ಆ ಕಾಲದ ಇಬ್ಬರು ಟಾಪ್ ನಟಿಯರಾದ ಐಶ್ವರ್ಯಾ ರೈ ಮತ್ತು ಮನಿಷಾ ಕೊಯಿರಾಲಾ ಅವರ ಕ್ಯಾಟ್ ಫೈಟ್ ಬಗ್ಗೆ ಹೇಳಲಿದ್ದೇವೆ. 

Written by - Chetana Devarmani | Last Updated : Aug 2, 2023, 04:30 PM IST
  • 90 ರ ದಶಕದಲ್ಲಿ ಬಾಲಿವುಡ್‌ನಲ್ಲಿ ಕ್ಯಾಟ್‌ ಫೈಟ್‌ ಸಾಮಾನ್ಯವಾಗಿತ್ತು
  • ಆ ಕಾಲದ ಈ ಪ್ರಸಿದ್ಧ ಕ್ಯಾಟ್‌ ಫೈಟ್ ಬಗ್ಗೆ ಕೇಳಿದರೆ ಆಶ್ಚರ್ಯವಾಗುತ್ತೆ
  • ಮನಿಷಾ ಕೊಯಿರಾಲಾ - ಐಶ್ವರ್ಯಾ ರೈ ನಡುವಿನ ಕ್ಯಾಟ್‌ ಫೈಟ್
ಐಶ್ವರ್ಯಾ ರೈ ಮೊದಲ ಲವ್‌ ಸಲ್ಮಾನ್ ಖಾನ್ ಅಲ್ಲ, ಈ ವ್ಯಕ್ತಿ!?   title=
Aishwarya Rai

Aishwarya Rai : 90ರ ದಶಕದಲ್ಲಿ ನಟಿಯರ ನಡುವೆ ಆಗಾಗ ಕ್ಯಾಟ್‌ ಫೈಟ್ ನಡೆಯುತ್ತಿತ್ತು. ಕೆಲವು ಸಲ ಸಿನಿಮಾ ವಿಚಾರದಲ್ಲಿ ವೈಮನಸ್ಸು, ಅದೇ ನಟನ ಜೊತೆ ಡೇಟಿಂಗ್ ವಿಚಾರವಾಗಿ ಕೆಲವೊಮ್ಮೆ ಜಗಳ ಆಗುತ್ತಿತ್ತು. ಕೆಲವು ಜಗಳಗಳು ಎಷ್ಟರಮಟ್ಟಿಗೆ ಹೋಗುತ್ತವೆ ಎಂದರೆ ಈ ನಟಿಯರು ಮಾಧ್ಯಮಗಳಲ್ಲಿಯೂ ಒಬ್ಬರ ಮೇಲೊಬ್ಬರು ಕೆಸರು ಎರಚಲು ಹಿಂಜರಿಯುವುದಿಲ್ಲ. 90 ರ ದಶಕದ ಇಬ್ಬರು ಟಾಪ್ ನಟಿಯರಾದ ಮನಿಷಾ ಕೊಯಿರಾಲಾ ಮತ್ತು ಐಶ್ವರ್ಯಾ ರೈ ನಡುವೆ ಇದೇ ರೀತಿಯ ಘಟನೆ ನಡೆದಿದೆ. ಹಾಗಾದರೆ 90 ರ ದಶಕದ ಈ ಪ್ರಸಿದ್ಧ ಕ್ಯಾಟ್‌ ಫೈಟ್ ಹಿಂದಿನ ಕಾರಣವನ್ನು ನಾವು ನಿಮಗೆ ಹೇಳುತ್ತೇವೆ. 

ಮನಿಷಾ ಕೊಯಿರಾಲಾ - ಐಶ್ವರ್ಯಾ ರೈ ನಡುವಿನ ಕ್ಯಾಟ್‌ ಫೈಟ್ ಬಗ್ಗೆ ಇಂದು ಹೇಳಲಿದ್ದೇವೆ. ಐಶ್ವರ್ಯಾ ಹೆಸರು ಮೊದಲ ಬಾರಿಗೆ ಸಲ್ಮಾನ್ ಖಾನ್ ಜೊತೆ ತಳಕು ಹಾಕಿಕೊಂಡಿದ್ದಲ್ಲ. 1994 ರಲ್ಲಿ ಪ್ರಕಟವಾದ ನಟಿ ಮನೀಶಾ ಕೊಯಿರಾಲಾ ಅವರ ಸಂದರ್ಶನದ ಪ್ರಕಾರ, ಮಾಡೆಲ್‌ ರಾಜೀವ್​ ಮುಲ್ಚಂದಾನಿ ಜೊತೆ ಐಶ್ವರ್ಯಾ ರೈ ಅವರ ಹೆಸರು ತಳು ಹಾಕಿಕೊಂಡಿತ್ತು. ಆದರೆ ಐಶ್ವರ್ಯಾ ಯಾವಾಗಲೂ ತಾನು ಮತ್ತು ರಾಜೀವ್ ಉತ್ತಮ ಸ್ನೇಹಿತರು ಮತ್ತು ಬೇರೇನೂ ಅಲ್ಲ ಎಂದು ಸಮರ್ಥಿಸಿಕೊಂಡರು. ಈ ವಿಷಯಗಳು ಮುನ್ನೆಲೆಗೆ ಬಂದ ನಂತರ ಐಶರ್ಯಾ ದಂಗಾದರು. 

ಇದನ್ನೂ ಓದಿ: ಒಂದಲ್ಲ ಹಲವು ಬಾರಿ ವಿಚ್ಛೇದನ ಪಡೆದ ನಟ - ನಟಿಯರು ಇವರು

ಅಲ್ಲಿಯವರೆಗೆ ಐಶ್ವರ್ಯಾ ಬಾಲಿವುಡ್‌ಗೆ ಕಾಲಿಟ್ಟಿರಲಿಲ್ಲ. ಅವರು 1997 ರಲ್ಲಿ 'ಔರ್ ಪ್ಯಾರ್ ಹೋ ಗಯಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಬಾಲಿವುಡ್‌ಗೆ ಕಾಲಿಟ್ಟ ನಂತರ, ಮಾಜಿ ವಿಶ್ವ ಸುಂದರಿ 1999 ರಲ್ಲಿ ಸಂದರ್ಶನ ನೀಡುವ ಮೂಲಕ ತಮ್ಮ ನೋವನ್ನು ಹಂಚಿಕೊಂಡರು. ಮನಿಶಾ ಕೊಯಿರಾಲಾ ತಮ್ಮ ಮತ್ತು ರಾಜೀವ್ ಅವರ ಹೆಸರನ್ನು ಲಿಂಕ್ ಮಾಡಿದ್ದಾರೆ ಎಂದು ಅವರು ಹೇಳಿದ್ದರು, ಆದರೆ ಇಬ್ಬರ ನಡುವೆ ಅಂತಹದ್ದೇನೂ ಇಲ್ಲ ಎಂದಿದ್ದರು. 

ವರದಿಗಳ ಪ್ರಕಾರ, ಐಶ್ವರ್ಯಾ ರೈ ಬಾಲಿವುಡ್ ಮಾಡೆಲಿಂಗ್​ ಕ್ಷೇತ್ರದಲ್ಲಿದ್ದ ಸಂದರ್ಭದಲ್ಲಿ ರಾಜೀವ್​ ಮುಲ್ಚಂದಾನಿ ಕೂಡ ಮಾಡೆಲ್​ ಆಗಿದ್ದರು. ರಾಜೀವ್​ ಮತ್ತು ಐಶ್ವರ್ಯಾ ಹೆಚ್ಚು ಆಪ್ತರಾಗಿದ್ದರು. ಆದರೆ ಅವರಿಬ್ಬರ ನಡುವೆ ನಟಿ ಮನಿಷಾ ಕೊಯಿರಾಲಾ ಬಂದಿದ್ದರು. ಮನಿಷಾ ಮತ್ತು ರಾಜೀವ್​ ನಡುವೆ ಒಡನಾಟ ಹೆಚ್ಚಿದ ಬಳಿಕ ಐಶ್ವರ್ಯಾ ಸುಮ್ಮನಾಗಿದ್ದರು. ಆದರೆ ರಾಜೀವ್​ ಜೊತೆ ಮನಿಷಾ ಹೆಚ್ಚು ಕಾಲ ಇರಲಿಲ್ಲ. ಆದರೆ ಈ ಬ್ರೇಕಪ್‌ಗೆ ಐಶ್ವರ್ಯಾ ರೈ ಕಾರಣ ಎಂದು ಮನಿಷಾ ಕೊಯಿರಾಲಾ ಆರೋಪಿಸಿದ್ದರು. 

ಇದನ್ನೂ ಓದಿ: ಯಾರು ಊಹೆ ಮಾಡದ ನಿರ್ಧಾರ ತಗೆದುಕೊಂಡ ಅನುಷ್ಕಾ, ಅಭಿಮಾನಿಗಳಿಗೆ ಬೇಸರ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News