ನವದೆಹಲಿ: ಸುಶಾಂತ್ ಸಿಂಗ್ ಅವರ ಮರಣದ ನಂತರ, ಬಾಲಿವುಡ್ ಉದ್ಯಮದಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತದ ಬಗ್ಗೆ ಅನೇಕ ತಾರೆಯರಲ್ಲಿ ಸಾಕಷ್ಟು ಕೋಪವಿದೆ, ಆದರೆ ನಿರ್ದೇಶಕ ಅಭಿನವ್ ಕಶ್ಯಪ್ ಕೂಡ ಈ ಉದ್ಯಮದ ಮೇಲೆ ಅನೇಕ ಆರೋಪಗಳನ್ನು ಮಾಡಿದ್ದಾರೆ. ಸುಶಾಂತ್ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಆಳವಾದ ತನಿಖೆ ನಡೆಸಬೇಕು ಎಂದೂ ಹೇಳಿದರು. ಸುಶಾಂತ್ ಸಿಂಗ್ ಅವರ ಮರಣದ ನಂತರ, ಬಾಲಿವುಡ್ ಉದ್ಯಮದಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತದ ಬಗ್ಗೆ ಅನೇಕ ತಾರೆಯರಲ್ಲಿ ಸಾಕಷ್ಟು ಕೋಪವಿದೆ ಎಂಬುದು ಇದೀಗ ಬಹಿರಂಗವಾಗಿದೆ, ಇದೀಗ ನಿರ್ದೇಶಕ ಅಭಿನವ್ ಕಶ್ಯಪ್ ಕೂಡ ಈ ಉದ್ಯಮದ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ. ಸುಶಾಂತ್ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಆಳವಾದ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಯಶ್ ರಾಜ್ ಫಿಲಂಸ್ ಮೇಲೆ ಆರೋಪ ಹೊರಿಸಿರುವ ಅಭಿನವ್ ಕಶ್ಯಪ್, 'ಸುಶಾಂತ್ ಸಿಂಗ್ ರಾಜಪುತ್ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆಯಾಗಬೇಕು, ಯಶ್ ರಾಜ್ ಫಿಲಂಸ್ ಗಳಂತಹ ಏಜೆನ್ಸಿಗಳು ಕಲಾವಿದರ ಕರಿಯರ್ ಹಾಳು ಮಾಡುತ್ತಿವೆ. ಸುಶಾಂತ್ ಅವರ ಆತ್ಮಹತ್ಯೆ ಈ ಸಮಸ್ಯೆಯನ್ನು ಉದ್ಯಮದ ಮುಂದೆ ತಂದು ನಿಲ್ಲಿಸಿವೆ. ಈ ಸಮಸ್ಯೆಯನ್ನು ನಾವೆಲ್ಲರೂ ಕೂಡ ಅನುಭವಿಸಿ ಮೆಟ್ಟಿ ನಿಂತಿದ್ದೇವೆ. ಓರ್ವ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರೇರಣೆ ನೀಡುವ ಸಮಸ್ಯೆಯಾದರೂ ಏನು? ಅವರ ಈ ಆತ್ಮಹತ್ಯೆ #Metoo ನಂತಹ ಆಂದೋಲನದ ಸ್ವರೂಪ ಪಡೆಯುವ ಭೀತಿ ನನ್ನನ್ನು ಕಾಡಲಾರಂಭಿಸಿದೆ" ಎಂದು ಬರೆದುಕೊಂಡಿದ್ದಾರೆ.
ಇನ್ನೊಂದೆಡೆ ತಮ್ಮ ಕರಿಯರ್ ಹಾಳು ಮಾಡುವಿಕೆಯಲ್ಲಿ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬಸ್ಥರ ಕೈವಾಡ ಇದೆ ಎಂದು ಅಭಿನವ್ ಆರೋಪಿಸಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅಭಿನವ್, 'ನನ್ನ ಅನುಭವ ಕೂಡ ಇವರೆಲ್ಲರಿಗಿಂತ ಭಿನ್ನವಾಗಿಲ್ಲ. ನಾನೂ ಕೂಡ ತುಂಬಾ ಶೋಷಣೆಗೆ ಒಳಗಾಗಿದ್ದೇನೆ. 10 ವರ್ಷಗಳ ಹಿಂದೆ 'ದಬಂಗ್-2' ಚಿತ್ರದ ಚಿತ್ರೀಕರಣದಿಂದ ಹೊರಕಾದುವುದರ ಹಿಂದೆ ಅರ್ಬಾಜ್ ಖಾನ್ ಹಾಗೂ ಸೋಹೈಲ್ ಖಾನ್ ಇದ್ದರು, ಆ ವೇಳೆ ನನಗೂ ಕೂಡ ಹೆದರಿಸಲು, ಧಮ್ಕಿ ನೀಡಲಾಯಿತು. ನನ್ನ ಎರಡನೇ ಪ್ರಾಜೆಕ್ಟ್ 'ಅಷ್ಟವಿನಾಯಕ್'' ಅನ್ನು ಕೂಡ ಅರ್ಬಾಜ್ ಹಾಳುಮಾಡಿದರು. ರಾಜ್ ಮೆಹ್ತಾ ಅವರ ಹೇಳಿಕೆಯ ಮೇರೆಗೆ ನಾನು ಈ ಪ್ರಾಜೆಕ್ಟ್ ಗೆ ಸೈನ್ ಹಾಕಿದ್ದೆ. ನನ್ನ ಜೊತೆಗೆ ಕೆಲಸ ಮಾಡುವುದರ ಗಂಭೀರ ಪರಿಣಾಮ ಎದುರಿಸಬೇಕಾಗಲಿದೆ ಎಂದು ಅವರಿಗೆ ಧಮ್ಕಿ ಹಾಕಲಾಯಿತು. ಈ ಚಿತ್ರಕ್ಕಾಗಿ ನಾನು ಪಡೆದ ಸಂಭಾವನೆಯನ್ನು ಮರುಪಾವತಿಸಬೇಕಾಯಿತು. ರಿಲಯನ್ಸ್ ಎಂಟರ್ಟೈನ್ಮೆಂಟ್ ನನ್ನ ರಕ್ಷಣೆಗೆ ಮುಂದೆ ಬಂತು. ಅದರ ಜೊತೆಗೆ ಸೇರಿ ನಾನು ಬೇಷರಮ್ ಚಿತ್ರ ಮಾಡಿದೆ. ಈ ಚಿತ್ರವನ್ನೂ ಕೂಡ ಹಾಳು ಮಾಡಲು ಸಲ್ಮಾನ್ ಖಾನ್ ಹಾಗೂ ಅವರ ಕುಟುಂಬಸ್ಥರು ಸಂಪೂರ್ಣ ಪ್ರಯತ್ನಿಸಿದರು. ಆದರೆ ಈ ಚಿತ್ರ ಬಾಕ್ಸ್ ಆಫೀಸ್ ಮೇಲೆ ಉತ್ತಮ ಪ್ರದರ್ಶನ ಕಂಡಿತು" ಎಂದು ಅವರು ಹೇಳಿದ್ದಾರೆ.
ಕಳೆದ ಆರು ತಿಂಗಳಿನಿಂದ ಸುಶಾಂತ್ ಸಿಂಗ್ ರಾಜಪುತ್ ಡಿಪ್ರೆಶನ್ ಗೆ ಗುರಿಯಾಗಿದ್ದರು. ಅವರ ಈ ಡಿಪ್ರೆಶನ್ ಗೆ ಬಾಲಿವುಡ್ ಕಾರಣವಾಗಿದೆಯೇ ಅಥವಾ ಬೇರೆನೋ ಕಾರಣವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ನಿಜಾಂಶ ಹೊರಬೀಳಲಿದೆ.