ರೈತನ ವೇಷದಲ್ಲಿ ಫೋಟೋ ಟ್ರೋಲ್ ಅದ ಬಳಿಕ ವಿಡಿಯೋ ಒಂದನ್ನು ಶೇರ್ ಮಾಡಿದ ಸಲ್ಮಾನ್ ಖಾನ್

ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೃಷಿ ಭೂಮಿಯಲ್ಲಿ ರೈತನಂತೆ ಕಾಣಿಸಿಕೊಂಡಿದ್ದರು.

Last Updated : Jul 20, 2020, 01:10 PM IST
ರೈತನ ವೇಷದಲ್ಲಿ ಫೋಟೋ ಟ್ರೋಲ್ ಅದ ಬಳಿಕ ವಿಡಿಯೋ ಒಂದನ್ನು ಶೇರ್ ಮಾಡಿದ ಸಲ್ಮಾನ್ ಖಾನ್ title=

ನವದೆಹಲಿ: ಬಾಲಿವುಡ್‌ನ 'ದಬಾಂಗ್' ಸಲ್ಮಾನ್ ಖಾನ್ (Salman Khan) ಇತ್ತೀಚೆಗೆ ಅವರ ಫೋಟೋದಿಂದಾಗಿ ಟ್ರೋಲ್ ಆಗಿದ್ದರು. ಕೆಲವು ದಿನಗಳ ಹಿಂದೆ, ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೃಷಿ ಭೂಮಿಯಲ್ಲಿ ರೈತನಂತೆ ಕಾಣುತ್ತಿದ್ದ ಫೋಟೋ ಒಂದನ್ನು 'ಎಲ್ಲಾ ರೈತರನ್ನು ಗೌರವಿಸಿ' ಎಂಬ ಶೀರ್ಷಿಕೆಯಲ್ಲಿ ಶೇರ್ ಮಾಡಿದ್ದರು. ಅಂದಿನಿಂದ ಸಲ್ಮಾನ್ ಖಾನ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿತ್ತು.

ವಾಸ್ತವವಾಗಿ ಟ್ವಿಟರ್‌ನಲ್ಲಿ ಬಳಕೆದಾರರು 'ಯಾವ ರೈತರು (Farmers) ಜಮೀನಿನಲ್ಲಿ ಕುಳಿತು ಈ ರೀತಿ ಫೋಟೊಶೂಟ್‌ಗಳನ್ನು ಮಾಡಿಸಿಕೊಳ್ಳುತ್ತಾರೆ?' ಎಂದು ಪ್ರಶ್ನಿಸಿದರು. 

ಇನ್ನೂ ಕೆಲವರು 'ನಾನು ಇಲ್ಲಿಯವರೆಗೆ ಅನೇಕ ರೈತರನ್ನು ನೋಡಿದ್ದೇನೆ, ಯಾರ ಬಾಯಿಯಲ್ಲೂ ಮಣ್ಣು ಇಲ್ಲ' ಎಂದು ಬರೆದಿದ್ದರು. 

ಇದೀಗ ಸಲ್ಮಾನ್ ಅವರು ತಮ್ಮ ಇನ್ಸ್ಟಾದಲ್ಲಿ ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಮೈದಾನದಲ್ಲಿ ಟ್ರ್ಯಾಕ್ಟರ್ ಓಡಿಸುತ್ತಿದ್ದಾರೆ. ಈಗ ಸಲ್ಮಾನ್ ಅವರ ಈ ವಿಡಿಯೋ ಅಂತರ್ಜಾಲದಲ್ಲಿ ವೈರಸ್ ಆಗುತ್ತಿದೆ. ಬನ್ನಿ ಸಲ್ಮಾನ್ ಅವರ ಈ ವೀಡಿಯೊವನ್ನೂ ನೀವೂ ನೋಡಿ ...

 
 
 
 

 
 
 
 
 
 
 
 
 

Farminggg

A post shared by Salman Khan (@beingsalmankhan) on

ಸಲ್ಮಾನ್ ಖಾನ್ ತನ್ನ ಆಪ್ತರೊಂದಿಗೆ ಅವರ ಪನ್ವೆಲ್ ತೋಟದ ಮನೆಯಲ್ಲಿ ಕಳೆಯುತ್ತಿದ್ದಾರೆ. 

Trending News