Adipurush: ಪ್ರತಿ ಥಿಯೇಟರ್‌ನಲ್ಲಿ ಆಂಜನೇಯನಿಗೆ 1 ಸೀಟ್‌ ಮೀಸಲಿಟ್ಟ ಆದಿಪುರುಷ ತಂಡ

Adipurush : ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಸಿನಿಮಾ ಆದಿಪುರುಷ. ಪ್ರಭಾಸ್ ಭಗವಾನ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಡುಗಳಿಂದ ಮೋಡಿ ಮಾಡಿರುವ ಆದಿಪುರುಷ ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ವೀಕ್ಷಿಸಲು ಸಿನಿಪ್ರಿಯರು ಕಾತುರರಾಗಿದ್ದಾರೆ. 

Written by - Chetana Devarmani | Last Updated : Jun 6, 2023, 10:15 AM IST
  • ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಸಿನಿಮಾ ಆದಿಪುರುಷ
  • ಪ್ರಭಾಸ್ ಭಗವಾನ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ ನಟಿಸಿದ್ದಾರೆ
  • ಪ್ರತಿ ಥಿಯೇಟರ್‌ನಲ್ಲಿ ಆಂಜನೇಯನಿಗೆ 1 ಸೀಟ್‌ ಮೀಸಲಿಟ್ಟ ಆದಿಪುರುಷ ತಂಡ
Adipurush: ಪ್ರತಿ ಥಿಯೇಟರ್‌ನಲ್ಲಿ ಆಂಜನೇಯನಿಗೆ 1 ಸೀಟ್‌ ಮೀಸಲಿಟ್ಟ ಆದಿಪುರುಷ ತಂಡ   title=
Adipurush

Adipurush : ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹು ನಿರೀಕ್ಷಿತ ಪೌರಾಣಿಕ ಚಿತ್ರ ಆದಿಪುರುಷ ಬಿಡುಗಡೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಚಿತ್ರದ ಬಿಡುಗಡೆಗೆ ಮುಂಚಿತವಾಗಿ, ಜನರ ನಂಬಿಕೆಗಳನ್ನು ಗೌರವಿಸಲು ಪ್ರತಿ ಥಿಯೇಟರ್‌ನಲ್ಲಿ ಆಂಜನೇಯನಿಗೆ ಒಂದು ಆಸನವನ್ನು ಅರ್ಪಿಸುವುದಾಗಿ ನಿರ್ಮಾಪಕರಿ ಈಗಾಗಲೇ ಘೋಷಿಸಿದ್ದಾರೆ. ಪ್ರತಿ ಸ್ಕ್ರೀನಿಂಗ್‌ನಲ್ಲಿ ಆ ಸೀಟು ಮಾರಾಟವಾಗದೆ ಉಳಿಯುತ್ತದೆ. ಅದು ಹನುಮಂತ ದೇವರಿಗೆ ಮೀಸಲಾಗಿರುತ್ತದೆ ಎಂದು ತಿಳಿಸಿದ್ದಾರೆ. 

ರಾಮಾಯಣವನ್ನು ಎಲ್ಲಿ ಪಠಿಸಿದರೂ ಭಗವಾನ್ ಹನುಮಂತನ ಕುರುಹು ಇದ್ದೇ ಇರುತ್ತದೆ. ಅದು ನಮ್ಮ ನಂಬಿಕೆ. ಈ ನಂಬಿಕೆಯನ್ನು ಗೌರವಿಸಿ ಆದಿಪುರುಷ ಚಿತ್ರ ಪ್ರದರ್ಶನಗೊಳ್ಳುವ ಪ್ರತಿ ಥಿಯೇಟರ್‌ನಲ್ಲಿ ಒಂದು ಸೀಟ್‌ ಅನ್ನು ಮಾರಾಟ ಮಾಡದೆ, ಹನುಮಂತನಿಗೆ ಆಸನವನ್ನು ಮೀಸಲಿಡಲಾಗುತ್ತದೆ. ರಾಮನ ಶ್ರೇಷ್ಠ ಭಕ್ತನಿಗೆ ಗೌರವ ಸಲ್ಲಿಸಲು ಈ ನಿರ್ಧಾರ ಮಾಡಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ. 

 

 

ಇದನ್ನೂ ಓದಿ: ಆದಿಪುರುಷ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಅದ್ಧೂರಿ ವ್ಯವಸ್ಥೆ.. ಮುಖ್ಯ ಅತಿಥಿ ಯಾರು ಗೊತ್ತಾ..!

ಕಳೆದ ತಿಂಗಳ ಆರಂಭದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಆಯಿತು. ಆದಿಪುರುಷ ಟ್ರೇಲರ್ ಬೆರಗುಗೊಳಿಸುವ ದೃಶ್ಯಗಳು, ಉಸಿರುಕಟ್ಟುವ ಸಾಹಸಗಳಿಂದ ನೋಡುಗರ ಕಣ್ಣಿಗೆ ಹಬ್ಬದಂತಿದೆ. ವಾಸ್ತವವಾಗಿ ಈ ಸಿನಿಮಾ ಒಂದು ದೃಶ್ಯ ಚಮತ್ಕಾರವಾಗಿರುವುದರಿಂದ, ಈ ಅದ್ಭುತ ಕೃತಿಯು ವೀಕ್ಷಕರನ್ನು ಪೌರಾಣಿಕ ಜಗತ್ತಿಗೆ ಕೊಂಡೊಯ್ಯುವ ಭರವಸೆ ನೀಡುತ್ತದೆ. 

ಚಿತ್ರವು ಭಾರತೀಯ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯವನ್ನು ನೆನಪಿಸುವ ಭರವಸೆ ನೀಡುತ್ತದೆ. ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಈ ಚಿತ್ರದಲ್ಲಿ ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್ ಮತ್ತು ರಾವಣನಾಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.

ಇದನ್ನೂ ಓದಿ: ರಿಲೀಸ್‌ಗೂ ಮುಂಚೆಯೇ 400 ಕೋಟಿ ಗಳಿಸಿದ ಆದಿಪುರುಷ.!

ಓಂ ರಾವುತ್ ನಿರ್ದೇಶಿಸಿದ ಆದಿಪುರುಷ ಸಿನಿಮಾವನ್ನು ಟಿ-ಸೀರೀಸ್, ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್, ಓಂ ರಾವುತ್, ಪ್ರಸಾದ್ ಸುತಾರ್ ಮತ್ತು ರಾಜೇಶ್ ನಾಯರ್ ರೆಟ್ರೋಫಿಲ್ಸ್ ನಿರ್ಮಿಸಿದ್ದಾರೆ. ಇದೇ 16 ಜೂನ್ 2023 ರಂದು ಜಾಗತಿಕವಾಗಿ ಆದಿಪುರುಷ ಬಿಡುಗಡೆಯಾಗಲಿದೆ. ಕೃತಿ ಸನೋನ್, ಸೈಫ್ ಅಲಿ ಖಾನ್ ಮತ್ತು ಪ್ರಭಾಸ್ ಹೊರತುಪಡಿಸಿ, ಚಿತ್ರದಲ್ಲಿ ಸನ್ನಿ ಸಿಂಗ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ಇದನ್ನೂ ಓದಿ: ರಕ್ಷಿತ್ ಶೆಟ್ಟಿ - ರಶ್ಮಿಕಾ ನಿಶ್ಚಿತಾರ್ಥ ಮುರಿದು ಬೀಳಲು ಅಸಲಿ ಕಾರಣ ಬಿಚ್ಚಿಟ್ಟ ತಾಯಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News