Adipurush Controversy: 'ಕೇವಲ ಸಂಭಾಷಣೆ ಬದಲಾಯಿಸುವುದು ಸಾಕಾಗುವುದಿಲ್ಲ, ಕ್ಷಮೆ ಕೋರಿ'

Adipurush Controversy: ವಿವಾದಿತ ಬಾಲಿವುಡ್ ಚಿತ್ರ ಆದಿಪುರುಷ್ ಇದೀಗ ದೇಶಾದ್ಯಂತ ರಾಜಕೀಯಕ್ಕೆ ಕಾರಣವಾಗುತ್ತಿದೆ. ಎಲ್ಲಾ ಪ್ರತಿಪಕ್ಷ  ನಾಯಕರು ಇದೀಗ ಬಿಜೆಪಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.  

Written by - Nitin Tabib | Last Updated : Jun 18, 2023, 08:40 PM IST
  • ಇಂತಹ ಆಕ್ಷೇಪಾರ್ಹ ಡೈಲಾಗ್‌ಗಳನ್ನು ಪಾಸ್ ಮಾಡಿದ ಲೇಖಕರು, ನಿರ್ದೇಶಕರು, ಬೆನ್ನೆಲುಬು ಇಲ್ಲದ ಸೆನ್ಸಾರ್ ಮಂಡಳಿ
  • ಹಾಗೂ ಅವಕಾಶವಾದಿ ಬಿಜೆಪಿ ಸಿಎಂ ಎಲ್ಲರೂ ಕ್ಷಮೆ ಯಾಚಿಸಬೇಕು ಎಂದು ಅವರು ಹೇಳಿದ್ದಾರೆ,
  • ಹಿಂದೂಗಳ ಮನಸ್ಸಿನಲ್ಲಿ ರಾಮ, ಸೀತೆ, ಹನುಮಂತನ ಕುರಿತು ವಿಶೇಷ ಭಕ್ತಿಭಾವವಿದೆ,
  • ಅದನ್ನು ಹಾಳು ಮಾಡಿದವರೆಲ್ಲ ಕ್ಷಮೆ ಕೇಳಬೇಕು ಎಂದು ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.
Adipurush Controversy: 'ಕೇವಲ ಸಂಭಾಷಣೆ ಬದಲಾಯಿಸುವುದು ಸಾಕಾಗುವುದಿಲ್ಲ, ಕ್ಷಮೆ ಕೋರಿ' title=

Adipurush Controversy: ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರದ ಡೈಲಾಗ್‌ಗಳಿಂದ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿರುವ ಕಾರಣ ಅದನ್ನು ಬದಲಾಯಿಸಲಾಗುವುದು ಎಂದು ಮನೋಜ್ ಮುಂತಶಿರ್ ಭಾನುವಾರ ಹೇಳಿಕೆ ನೀಡಿದ್ದಾರೆ. ಅದರ ಬೆನ್ನಲ್ಲೇ ಇದೀಗ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣದ) ಸಂಸದೆ ಪ್ರಿಯಾಂಕಾ ಚತುರ್ವೇದಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಚಿತ್ರಕ್ಕೆ ‘ಆಶೀರ್ವಾದ’ ಮಾಡಿದ ಬಿಜೆಪಿ ಮುಖ್ಯಮಂತ್ರಿಗಳು ಮೊದಲು ಕ್ಷಮೆಯಾಚಿಸಬೇಕು, ಬರೀ ಡೈಲಾಗ್ ಗಳನ್ನು ಬದಲಾಯಿಸಿ ಹಣ ಗಳಿಸುವ ಆಸೆಯಿಂದ ಮರು ಬಿಡುಗಡೆ ಮಾಡಿದರೆ ಸಾಲದು’ ಎಂದಿದ್ದಾರೆ.

ಇಂತಹ ಆಕ್ಷೇಪಾರ್ಹ ಡೈಲಾಗ್‌ಗಳನ್ನು ಪಾಸ್ ಮಾಡಿದ ಲೇಖಕರು, ನಿರ್ದೇಶಕರು, ಬೆನ್ನೆಲುಬು ಇಲ್ಲದ ಸೆನ್ಸಾರ್ ಮಂಡಳಿ ಹಾಗೂ ಅವಕಾಶವಾದಿ ಬಿಜೆಪಿ ಸಿಎಂ ಎಲ್ಲರೂ ಕ್ಷಮೆ ಯಾಚಿಸಬೇಕು ಎಂದು ಅವರು ಹೇಳಿದ್ದಾರೆ, ಹಿಂದೂಗಳ ಮನಸ್ಸಿನಲ್ಲಿ ರಾಮ, ಸೀತೆ, ಹನುಮಂತನ ಕುರಿತು ವಿಶೇಷ ಭಕ್ತಿಭಾವವಿದೆ, ಅದನ್ನು ಹಾಳು ಮಾಡಿದವರೆಲ್ಲ ಕ್ಷಮೆ ಕೇಳಬೇಕು ಎಂದು ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

ಸಿನಿಮಾ ಯಾಕೆ ಟೀಕೆಗೆ ಒಳಗಾಗುತ್ತಿದೆ?
ರಾಮಾಯಣ ಆಧಾರಿತ ಆದಿಪುರುಷ ಚಿತ್ರ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗಿದೆ. ಚಿತ್ರದ ಡೈಲಾಗ್‌ಗಳು ಮತ್ತು ಕೆಲವು ದೃಶ್ಯಗಳ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದಲ್ಲಿ ಲಂಕಾ ದಹನದ ದೃಶ್ಯವೊಂದರಲ್ಲಿ ಹನುಮಂತನ ಸಂಭಾಷಣೆಗಾಗಿ ಜನರು ಚಿತ್ರದ ಬರಹಗಾರನನ್ನು ಟೀಕಿಸುತ್ತಿದ್ದಾರೆ.

ಇದನ್ನೂ ಓದಿ-Adipurush ನಿರ್ಮಾಪಕರ ಮಹತ್ವದ ನಿರ್ಧಾರ, ಆಕ್ಷೇಪಾರ್ಹ ಸಂಭಾಷಣೆಗಳನ್ನು ಬದಲಿಸಲಾಗುವುದು

ಆದಿಪುರುಷ ಚಿತ್ರದಲ್ಲಿ ರಾಮ ಮತ್ತು ಸೀತೆಯ ಪಾತ್ರದಲ್ಲಿ ನಟಿಸಿರುವ ಪ್ರಭಾಷ್ ಮತ್ತು ಕೃತಿ ಸನನ್ ಜನರಿಂದ ಟೀಕೆ ಎದುರಿಸುತ್ತಿದ್ದಾರೆ. ಚಿತ್ರದ ಹಲವು ಡೈಲಾಗ್‌ಗಳಿಗೆ ಸಂಬಂಧಿಸಿದಂತೆ ವಿವಾದಗಳು ಸೃಷ್ಟಿಯಾಗಿವೆ. ಚಿತ್ರದಲ್ಲಿ "ಕಪ್ಡಾ ತೇರೆ ಬಾಪ್ ಕಾ, ಆಗ್ ತೇರೆ ಬಾಪ್ ಕಿ, ತೇಲ್ ತೇರೆ ಬಾಪ್ ಕಾ, ಜಲೇಗಿ ಭಿ ತೇರಿ ಬಾಪ್ ಕಿ" ಎಂಬ ಡೈಲಾಗ್ ಇದೆ ಎಂದು ಹೇಳಲಾಗುತ್ತಿದೆ. ಈ ಡೈಲಾಗ್ ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. 

ಇದನ್ನೂ ಓದಿ-Adipusush ಚಿತ್ರ ನಿರ್ಮಾಪಕರಿಗೆ ಬಿಗ್ ಶಾಕ್, ಎಲ್ಲಾ ಪ್ರಯತ್ನಗಳ ಹೊರತಾಗಿ ಚಿತ್ರ ಆನ್ಲೈನ್ ನಲ್ಲಿ ಸೋರಿಕೆ

ಸ್ಪಷ್ಟನೆ ನೀಡಿದ ಮನೋಜ್ ಮುಂತಶಿರ್ 
ಸಂಭಾಷಣಾಕಾರ ಮನೋಜ್ ಮುಂತಶಿರ್ ಅವರು ಉದ್ದೇಶಪೂರ್ವಕವಾಗಿ ಸಂಭಾಷಣೆಗಳನ್ನು ಸರಳವಾಗಿ ಇಟ್ಟುಕೊಂಡು ಇಂದು ಜನರು ಮಾತನಾಡುವ ರೀತಿಯಲ್ಲಿ ಬರೆಯಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ. ಭಾನುವಾರ, ಅವರು ಇದಕ್ಕೂ ಒಂದು ಒಂದು ಹೆಜ್ಜೆ ಹಿಂದೆ ತೆಗೆದುಕೊಂಡು ಓಂ ರಾವುತ್ ಮತ್ತು ಅವರು ಕೆಲವು ಸಂಭಾಷಣೆಗಳನ್ನು ಮಾರ್ಪಡಿಸಲು ನಿರ್ಧರಿಸಿದ್ದಾರೆ ಎಂದು ಘೋಷಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News